ಉಪೇಂದ್ರ ಅವರಿಗೆ ಈ ಚಿತ್ರದಲ್ಲಿ ನನ್ನ ಆ್ಯಕ್ಷನ್‌ ಇಷ್ಟ ಆಗಿದೆ : ಪ್ರಿಯಾಂಕ ಉಪೇಂದ್ರ

Published : Aug 07, 2026, 12:12 PM IST
Priyanka Upendra

ಸಾರಾಂಶ

ತ್ರಿವಿಕ್ರಮ ರಘು ನಿರ್ದೇಶನದ, ಪ್ರಿಯಾಂಕ ಉಪೇಂದ್ರ ನಟನೆಯ, ಗುತ್ತ ಮುನಿಪ್ರಸನ್ನ, ಜಿ.ಮುನಿವೆಂಕಟ್‌ ಚರಣ್‌, ಪುರುಷೋತ್ತಮ್‌.ಬಿ.ಕೊಯ್ಯೂರು ನಿರ್ಮಾಣದ ‘ಡಿಟೆಕ್ಟಿವ್‌ ತೀಕ್ಷ್ಣ’ ಇಂದು ತೆರೆಗೆ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ನಾಯಕಿ ಪ್ರಿಯಾಂಕ ಉಪೇಂದ್ರ ಸಂದರ್ಶನ.

ಆರ್. ಕೇಶವಮೂರ್ತಿ

ಮತ್ತೊಮ್ಮೆ ನಾಯಕಿ ಪ್ರಧಾನ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದೀರಿ?

ಇದು ಪತ್ತೇದಾರಿ ಜಾನರ್‌ ಸಿನಿಮಾ. ನನಗೆ ತುಂಬಾ ಥ್ರಿಲ್‌ ಕೊಟ್ಟಿರುವ ಹೊಸ ರೀತಿ ಎನಿಸಿರುವ ಸಿನಿಮಾ. ಈ ರೀತಿಯ ಚಿತ್ರದಲ್ಲಿ ನಟಿಸಿದ್ದಕ್ಕೆ ಖುಷಿಯಾಗುತ್ತದೆ.

ಈ ರೀತಿಯ ಸಿನಿಮಾಗಳನ್ನು ಈಗ ನೋಡುತ್ತಾರೆಯೇ?

ಖಂಡಿತ ನೋಡುತ್ತಾರೆ. ಪತ್ತೆದಾರಿ ಕತೆಗಳೇ ರೋಚಕವಾಗಿರುತ್ತವೆ. ಅಂಥಾ ಕತೆಗಳು ತೆರೆ ಮೇಲೆ ಬಂದರೆ ನೋಡದಿರಲು ಸಾಧ್ಯವಿಲ್ಲ. ನನ್ನ ಪ್ರಕಾರ ಇದು ಮಕ್ಕಳಿಗೆ ಹೆಚ್ಚು ಇಷ್ಟವಾಗುವ ಸಿನಿಮಾ.

ಯಾವ ರೀತಿ ಈ ಚಿತ್ರವನ್ನು ರೂಪಿಸಲಾಗಿದೆ?

ಆ್ಯಕ್ಷನ್‌ ಹಾಗೂ ಪತ್ತೆದಾರಿಕೆ ಎರಡೂ ಅಂಶಗಳನ್ನು ಒಳಗೊಂಡ ಸಿನಿಮಾ. ಮೊದಲ ಭಾಗದ ಕತೆ ನನ್ನ ಪಾತ್ರದ ಮೇಲೆ ಸಾಗಿದರೆ, ದ್ವಿಯಾರ್ಧ ಕತೆ ಆ್ಯಕ್ಷನ್‌ ಮೇಲೆ ಸಾಗುತ್ತದೆ.

ನಿಮಗೆ ಈ ಕತೆ ಇಷ್ಟ ಆಗಲು ಕಾರಣ ಏನು?

ಇದು ನನ್ನ 50ನೇ ಸಿನಿಮಾ. ಏನಾದರೂ ವಿಶೇಷತೆ ಇರಬೇಕು ಎಂದುಕೊಂಡಾಗ ಸಿಕ್ಕ ಸಿನಿಮಾ. ನಾಯಕಿ ಕೇಂದ್ರಿತ ಪತ್ತೇದಾರಿಕೆ ಸಿನಿಮಾಗಳು ಕನ್ನಡದಲ್ಲಿ ಬಂದಿಲ್ಲ. ಅಲ್ಲದೆ ಡಿಟೆಕ್ಟಿವ್‌ ಜಾನರ್‌ ಸಿನಿಮಾಗಳು ಕೂಡ ಕನ್ನಡದಲ್ಲಿ ಅಪರೂಪ. ಈ ಕಾರಣಗಳಿಗೆ ನನಗೆ ‘ಡಿಟೆಕ್ಟಿವ್‌ ತೀಕ್ಷ್ಣ’ ಇಷ್ಟ ಮತ್ತು ವಿಶೇಷವಾದ ಸಿನಿಮಾ ಆಗಿದೆ.

ಈ ಚಿತ್ರವನ್ನು ಉಪೇಂದ್ರ ಅವರು ನೋಡಿದ್ದಾರೆಯೇ?

ನೋಡಿ ಮೆಚ್ಚಿಕೊಂಡಿದ್ದಾರೆ. ಅವರಿಗೆ ಚಿತ್ರದಲ್ಲಿ ನಾನು ಮಾಡಿರುವ ಆ್ಯಕ್ಷನ್‌ ಸನ್ನಿವೇಶಗಳು ತುಂಬಾ ಇಷ್ಟವಾಗಿದೆ.

ನಿಮಗೆ ಈ ಚಿತ್ರದಲ್ಲಿ ಸವಾಲು ಎನಿಸಿದ್ದೇನು? ಕತೆಯ ಸಾಲು ಏನು?

ನಮ್ಮ ನಿರ್ದೇಶಕ ರಘು ತುಂಬಾ ತಯಾರಿ ಮಾಡಿಕೊಂಡು ಈ ಚಿತ್ರ ಮಾಡಿದ್ದರಿಂದ ನನಗೆ ಶೂಟಿಂಗ್‌ನಲ್ಲಿ ಯಾವುದೇ ಸವಾಲು ಎದುರಾಗಲಿಲ್ಲ. ವಿದ್ಯಾವಂತೆ ಅಲ್ಲದ ಹೆಣ್ಣೊಬ್ಬಳು ಡಿಟೆಕ್ಟಿವ್‌ ಆದರೆ ಏನಾಗುತ್ತದೆ ಎಂಬುದು ಚಿತ್ರದ ಕತೆ.

ನಿಮಗೆ ನಾಯಕಿ ಪ್ರಧಾನ ಸಿನಿಮಾಗಳೇ ಹೆಚ್ಚು ಬರುತ್ತಿವೆಯಲ್ಲ?

ಅದಕ್ಕೆ ನಿರ್ದೇಶಕರಿಗೆ ಥಾಂಕ್ಸ್‌ ಹೇಳಬೇಕು. ‘ಮಮ್ಮಿ’, ‘ಸೆಕೆಂಡ್‌ ಹಾಫ್‌’, ‘ದೇವಕಿ’, ‘ಉಗ್ರಾವತಾರ’. ಈಗ ‘ಡಿಟೆಕ್ಟಿವ್‌ ತೀಕ್ಷ್ಣ’ ಹೀಗೆ ಎಲ್ಲವೂ ಮಹಿಳಾ ಪಾತ್ರದ ಸುತ್ತನೇ ಇರೋ ಸಿನಿಮಾಗಳಾದರೂ ಕತೆಗಳು ಬೇರೆ ಬೇರೆ.

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.
Read more Articles on

Recommended Stories

ಇಲ್ಲಿ ಗೆದ್ದ ಹೀರೋಗಳು ಇಲ್ಲೇ ಸಿನಿಮಾ ಮಾಡಿ: ಓಂಪ್ರಕಾಶ್‌ ರಾವ್
ಆ.8ಕ್ಕೆ ಯಶ್‌ ಟಾಕ್ಸಿಕ್‌ ಟ್ರೇಲರ್‌