ಇಂದು ಯೂಟ್ಯೂಬ್‌ ಆಫೀಸಲ್ಲೇ ಉಪೇಂದ್ರ ಸಿನಿಮಾ ಯುಐ ಹಾಡು ಬಿಡುಗಡೆ

KannadaprabhaNewsNetwork |  
Published : Mar 04, 2024, 01:19 AM IST
ಯುಐ | Kannada Prabha

ಸಾರಾಂಶ

ಉಪೇಂದ್ರ ಸಿನಿಮಾ ಯುಐ ಚಿತ್ರದ ಹಾಡು ಯೂಟ್ಯೂಬ್ ಆಫೀಸಿನಲ್ಲಿ ಬಿಡುಗಡಯಾಗಲಿದೆ.

ಕನ್ನಡಪ್ರಭ ಸಿನಿವಾರ್ತೆ

ಉಪೇಂದ್ರ ನಟನೆ, ನಿರ್ದೇಶನದ ‘ಯುಐ’ ಚಿತ್ರದ ಮೊದಲ ಹಾಡು ಮುಂಬೈಯ ಯೂಟ್ಯೂಬ್‌ ಮುಖ್ಯ ಕಚೇರಿಯಲ್ಲಿ ಇಂದು ಅನಾವರಣವಾಗಲಿದೆ. ಈ ವಿಷಯ ತಿಳಿಸಿರುವ ಉಪೇಂದ್ರ, ‘ಅನಿರೀಕ್ಷಿತ ಅಚ್ಚರಿಯೊಂದು ನಿಮಗಾಗಿ ಎದುರು ನೋಡುತ್ತಿದೆ. ಇಂದು (ಮಾ.4) ಮಧ್ಯಾಹ್ನ 12 ಗಂಟೆಗೆ ಯೂಟ್ಯೂಬ್‌ ಮುಖ್ಯ ಕಚೇರಿಯಿಂದ ಯುಐ ಸಿನಿಮಾದ ಮೊದಲ ಹಾಡು ಬಿಡುಗಡೆಯ ನೇರಪ್ರಸಾರವಿರುತ್ತದೆ’ ಎಂದು ಹೇಳಿದ್ದಾರೆ. ಈ ಹಿಂದೆಯೇ ‘ಯುಐ’ ಸಿನಿಮಾ ಮೊದಲ ಹಾಡು ‘ಚೀಪ್‌ ಸಾಂಗ್‌’ ಫೆ.26ರಂದು ಬಿಡುಗಡೆ ಎಂದು ಘೋಷಿಸಲಾಗಿತ್ತು. ಈ ಹಾಡಿನ ಪ್ರೋಮೋ ಸೋಷಿಯಲ್‌ ಮೀಡಿಯಾದಲ್ಲಿ ಟ್ರೆಂಡಿಂಗ್‌ನಲ್ಲಿತ್ತು. ಆದರೆ ಆ ಬಳಿಕ ಹಾಡಿನ ಬಿಡುಗಡೆಯನ್ನು ಮಾ.4ಕ್ಕೆ ಮುಂದೂಡಲಾಗಿತ್ತು. ರೀಷ್ಮಾ ನಾಣಯ್ಯ ಈ ಚಿತ್ರದ ನಾಯಕಿ. ಜಿ ಮನೋಹರನ್‌ ಹಾಗೂ ಕೆಪಿ ಶ್ರೀಕಾಂತ್‌ ನಿರ್ಮಾಪಕರು. ಅಜನೀಶ್‌ ಲೋಕನಾಥ್‌ ಸಂಗೀತ ಚಿತ್ರಕ್ಕಿದೆ.

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.

Recommended Stories

ಮೊದಲು ದಕ್ಷಿಣ ಭಾರತದಲ್ಲಿ, ವಾರ ಬಿಟ್ಟು ಹಿಂದಿಯಲ್ಲಿ ಬರಲಿದೆ 45
75ನೇ ವಸಂತಕ್ಕೆ ಕಾಲಿಟ್ಟ ರಜನಿಕಾಂತ್‌