ವಿಕ್ಕಿ ವರುಣ್, ಧನ್ಯಾ ರಾಮ್‌ಕುಮಾರ್ ನಟನೆಯ ಕಾಲಾಪತ್ಥರ್ ಇಂದು ರಿಲೀಸ್ ಆಗುತ್ತಿದೆ.
ವಿಕ್ಕಿ ವರುಣ್ ನಿರ್ದೇಶಿಸಿ, ನಾಯಕನಾಗಿ ನಟಿಸಿರುವ ‘ಕಾಲಾಪತ್ಥರ್’ ಸಿನಿಮಾ ಇಂದು ತೆರೆಗೆ ಬರುತ್ತಿದೆ. ಇದು ಸೈನಿಕನೊಬ್ಬನ ಬದುಕಿನ ಮೇಲೆ ಬೆಳಕು ಚೆಲ್ಲುವ ಜೊತೆಗೆ ಆತನ ಸಂದಿಗ್ಧವನ್ನೂ ಚಿತ್ರಿಸುವ ಸಿನಿಮಾ. ಧನ್ಯಾ ರಾಮ್‌ಕುಮಾರ್ ನಾಯಕಿ. ಭುವನ್ ಸುರೇಶ್ ಹಾಗೂ ನಾಗರಾಜ್ ಬಿಲ್ಲಿನಕೋಟೆ ಈ ಚಿತ್ರವನ್ನು ನಿರ್ಮಿಸಿದ್ದಾರೆ.
ಸಿನಿಮಾ ಬಗ್ಗೆ ವಿಕ್ಕಿ ವರುಣ್, ‘ಇದೊಂದು ಕಪ್ಪು ಕಲ್ಲಿನ ಕಥೆ. ಸಿನಿಮಾ ಹೀರೋ ಸೈನಿಕ. ಊರಿಗೆ ಹೆಮ್ಮೆ ತರುವ ಕೆಲಸ ಮಾಡಿದಾಗ, ಊರಲ್ಲಿ ಅವನ ಕಲ್ಲಿನ ಪ್ರತಿಮೆ ಎದ್ದು ನಿಲ್ಲುತ್ತೆ. ಅಲ್ಲಿಂದ ಮುಂದೆ ಏನೆಲ್ಲ ನಡೆಯುತ್ತೆ ಎಂಬುದೇ ಸಿನಿಮಾದ ವಿಷಯ. ಹೀರೋ ಹಾಗೂ ಕಲ್ಲಿನ ಪ್ರತಿಮೆ ನಡುವಿನ ಬಂಧ, ದ್ವೇಷ, ಹೊಡೆದಾಟ, ಇವೆಲ್ಲದರ ನಡುವೆ ನವಿರಾದ ಪ್ರೇಮಕಥೆಯೂ ಇದೆ’ ಎನ್ನುತ್ತಾರೆ.
ಅಚ್ಯುತ್ ಕುಮಾರ್, ಟಿ ಎಸ್ ನಾಗಾಭರಣ, ರಾಜೇಶ್ ನಟರಂಗ, ಸಂಪತ್ ಮೈತ್ರೇಯ ನಟಿಸಿದ್ದಾರೆ. ಅನೂಪ್ ಸೀಳಿನ್ ಸಂಗೀತ ನಿರ್ದೇಶನವಿದೆ.
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.