ಜಗತ್ತಿನಲ್ಲಿ ಮನುಷ್ಯನೂ ಒಂದು ಪ್ರಾಣಿ ಎನ್ನುತ್ತೇವೆ. ಆದರೆ ಈ ಮನುಷ್ಯ ಎಲ್ಲಕ್ಕಿಂತಲೂ ವಿಚಿತ್ರ ಪ್ರಾಣಿ. ಯಾಕೆ ಅಂತೀರಾ? ಇಟಲಿಯ ಮಹಿಳೆಯೊಬ್ಬಳು ತಾನು ಬೆಕ್ಕಿನಂತೆ ಕಾಣಬೇಕೆಂದು ಬಯಸಿ ತನ್ನ ಮುಖಕ್ಕೆ ಬರೋಬ್ಬರಿ 20 ಬಾರಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾಳೆ. ಚಿಯಾರಾ ಡೆಲ್ ಅಬೇಟ್ (22) ಎಂಬಾಕೆ ತಾನು ಮಾನವ ಬೆಕ್ಕಿನಂತೆ ಕಾಣಬೇಕೆಂದು ಈಕೆ ಕೇವಲ 11ನೇ ವಯಸ್ಸಿನಲ್ಲೇ ಮೊದಲ ಬಾರಿ ಚಿಕಿತ್ಸೆ ಮಾಡಿಸಿಕೊಂಡಿದ್ದಳಂತೆ. ಅದರಂತೆ ಅವಳ ಕಣ್ಣು, ತುಟಿ, ಹಣೆಯನ್ನು ಮಾರ್ಪಾಡು ಮಾಡಲಾಗಿದೆ. ಪೂರ್ತಿಯಾಗಿ ತಾನು ಬೆಕ್ಕು ಆಗಲು ಇನ್ನೂ ಚಿಕಿತ್ಸೆ ಮಾಡಿಸಬೇಕು ಎಂಬುದು ಈಕೆ ಮಾತು.