ಗೋವಾದಲ್ಲಿ ಹುಟ್ಟುಹಬ್ಬ ಆಚರಿಸಿದ ಯಶ್‌ - ಟಾಕ್ಸಿಕ್‌ ವಿಡಿಯೋಗೆ 5 ಗಂಟೆಯಲ್ಲಿ 1 ಕೋಟಿ ವೀಕ್ಷಣೆ

ಸಾರಾಂಶ

  ಯಶ್‌ ಹುಟ್ಟುಹಬ್ಬದ ಪ್ರಯುಕ್ತ ಅವರು ನಟಿಸುತ್ತಿರುವ ‘ಟಾಕ್ಸಿಕ್‌’ ಚಿತ್ರದ ಅವರ ಪಾತ್ರವನ್ನು ಪರಿಚಯಿಸುವ ವಿಡಿಯೋ ತುಣುಕು ಬಿಡುಗಡೆಯಾಗಿದ್ದು, ಸೋಷಿಯಲ್‌ ಮೀಡಿಯಾದಲ್ಲಿ ಟ್ರೆಂಡಿಂಗ್ ಆಗಿದೆ. ಕೇವಲ ಕೆವಿಎನ್ ಟ್ಯೂಬ್‌ ಚಾನಲ್‌ನಲ್ಲಿ ಮಾತ್ರವೇ 5 ಗಂಟೆಗಳಲ್ಲಿ ಒಂದು ಕೋಟಿ ವೀಕ್ಷಣೆ ಕಂಡಿದೆ

ಸಿನಿವಾರ್ತೆ

ರಾಕಿಂಗ್‌ ಸ್ಟಾರ್‌ ಯಶ್‌ ಹುಟ್ಟುಹಬ್ಬದ ಪ್ರಯುಕ್ತ ಅವರು ನಟಿಸುತ್ತಿರುವ ‘ಟಾಕ್ಸಿಕ್‌’ ಚಿತ್ರದ ಅವರ ಪಾತ್ರವನ್ನು ಪರಿಚಯಿಸುವ ವಿಡಿಯೋ ತುಣುಕು ಬಿಡುಗಡೆಯಾಗಿದ್ದು, ಸೋಷಿಯಲ್‌ ಮೀಡಿಯಾದಲ್ಲಿ ಟ್ರೆಂಡಿಂಗ್ ಆಗಿದೆ. ಕೇವಲ ಕೆವಿಎನ್ ಟ್ಯೂಬ್‌ ಚಾನಲ್‌ನಲ್ಲಿ ಮಾತ್ರವೇ 5 ಗಂಟೆಗಳಲ್ಲಿ ಒಂದು ಕೋಟಿ ವೀಕ್ಷಣೆ ಕಂಡಿದೆ.

ಐಷಾರಾಮಿ ವಿಂಟೇಜ್‌ ಕಾರಿನಲ್ಲಿ ಬಂದು ಸಿಗಾರ್ ಹೊತ್ತಿಸಿ ಪ್ಯಾರಡಿಸೋ ಎಂಬ ಐಷಾರಾಮಿ ಕ್ಲಬ್‌ಗೆ ಎಂಟ್ರಿ ಕೊಡುವ ದೃಶ್ಯದಿಂದ ಆರಂಭವಾಗುವ ಈ ವಿಡಿಯೋ ತುಣುಕು ಅದ್ಧೂರಿಯಾಗಿ ಮೂಡಿಬಂದಿದ್ದು, ಸಂಪೂರ್ಣ ಕ್ಲಬ್‌ ವಾತಾವರಣವನ್ನು ಕಟ್ಟಿಕೊಟ್ಟಿದೆ. ಈ ವಿಡಿಯೋಗೆ ಎಲ್ಲಾ ಭಾಷೆಗಳ ಅಭಿಮಾನಿಗಳಿಂದ ಭಾರಿ ಪ್ರತಿಕ್ರಿಯೆ ಎದುರಾಗಿದೆ. ವಿಡಿಯೋ ತುಣುಕಿನಲ್ಲಿ ತೋರಿಸಿರುವ ಡ್ರಗ್ಸ್‌, ಆಲ್ಕೋಹಾಲ್‌, ಅರೆ ನಗ್ನ ನೃತ್ಯದ ದೃಶ್ಯಗಳಿಗೆ ಕೆಲವರಿಂದ ವಿರೋಧವೂ ವ್ಯಕ್ತವಾಗಿದೆ.

ಗೀತು ಮೋಹನ್‌ದಾಸ್‌ ನಿರ್ದೇಶನದ ‘ಟಾಕ್ಸಿಕ್‌’ ಚಿತ್ರತಂಡದ ಜೊತೆ ಯಶ್‌ ಗೋವಾದ ಸಮುದ್ರ ತೀರದಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದು, ಆ ಸಂಭ್ರಮಾಚರಣೆಯ ಫೋಟೋಗಳನ್ನು ಬಿಡುಗಡೆ ಮಾಡಲಾಗಿದೆ. ಹುಟ್ಟುಹಬ್ಬ ಆಚರಣೆಯಲ್ಲಿ ಪತ್ನಿ ರಾಧಿಕಾ ಪಂಡಿತ್‌, ಮಕ್ಕಳಾದ ಐರಾ ಮತ್ತು ಯಥರ್ವ್ ಕೂಡ ಇದ್ದರು. ನಿರ್ಮಾಪಕ ಕೆವಿಎನ್‌ ಪ್ರೊಡಕ್ಷನ್ಸ್‌ನ ವೆಂಕಟ್‌ ನಾರಾಯಣ್ ಪಾಲ್ಗೊಂಡಿದ್ದರು.

Share this article