ಗನ್ಸ್ ಆ್ಯಂಡ್ ರೋಸಸ್
ನಿರ್ದೇಶನ: ಹೆಚ್ ಎಸ್ ಶ್ರೀನಿವಾಸ್ ಕುಮಾರ್ತಾರಾಗಣ: ಅರ್ಜುನ್ ವಿಶ್ವಕರ್ಮ, ಯಶ್ವಿಕಾ ನಿಶ್ಕಲಾ, ಜೀವನ್ ರಿಚ್ಚಿ, ಕಿಶೋರ್ ಕುಮಾರ್- ಪೀಕೆತನ್ನ ಎದುರು ನಿಲ್ಲುವ ಹತ್ತಾರು ಪುಡಿ ರೌಡಿಗಳನ್ನು ಗಾಳಿಯಲ್ಲಿ ಗಿರ ಗಿರ ತಿರುಗಿಸೋ ಹೀರೋ. ಗನ್ನು, ಮಚ್ಚಿನ ಅಬ್ಬರಕ್ಕೆ ಹೆದರಿ ಬಾಲ ಮಡಚಿಕೊಂಡು ಹೋಗುವ ಡೈಲಾಗ್, ನಿರಂತರವಾಗಿ ಕಣ್ಣಾಮುಚ್ಚಾಲೆಯಾಡುವ ಫ್ಲಾಶ್‌ಬ್ಯಾಕ್. .
ತನ್ನ ಹೆಸರಿನಂತೇ ಸದಾ ಜ್ವಾಜ್ವಲ್ಯಮಾನನಾಗಿ ಹೊಳೆಯುವ ಹೀರೋ ಸೂರ್ಯ. ಹತ್ತಾರು ರೌಡಿಗಳನ್ನು ಏಕಕಾಲಕ್ಕೆ ಸದೆಬಡಿಯಬಲ್ಲಷ್ಟು ಪೌರುಷವಂತ. ಸಹಜವಾಗಿಯೇ ತನ್ನ ಗ್ಯಾಂಗ್‌ನ ಬ್ರಾಂಡ್ ಅಂಬಾಸಿಡರ್‌ನಂತಿರುವ ಸೂರ್ಯನನ್ನು ಕಂಡರೆ ಗ್ಯಾಂಗ್ ಲೀಡರ್ ನಾಯಕ್‌ಗೆ ಅಭಿಮಾನ. ಪೊಲೀಸ್‌ಗೆ ಧಮ್ಕಿ ಹಾಕಿ ಪೊಲೀಸ್ ವ್ಯಾನ್‌ನಲ್ಲೇ ಡ್ರಗ್ಸ್ ಪೆಡ್ಲಿಂಗ್ ಮಾಡುವ ಹೀರೋಗೆ, ವಿಂಟೇಜ್ ಬ್ಯೂಟಿಯೊಂದು ತಗಲಾಕಿಕೊಂಡ ಮೇಲೆ ಆತನ ಸ್ಥಿತಿ ಏನಾಯ್ತು ಅನ್ನೋದು ಸಿನಿಮಾದ ಮುಖ್ಯ ತಿರುವು. ಫೋಕಸ್ಡ್ ಆಗಿ ಕಥೆ ಹೇಳೋದ್ರಲ್ಲಾಗಲೀ, ಟರ್ನ್ ಆ್ಯಂಡ್ ಟ್ವಿಸ್ಟ್ ಕಾನ್ಸೆಪ್ಟ್‌ನಲ್ಲಾಗಲೀ ಅಷ್ಟಾಗಿ ನಂಬಿಕೆ ಇಲ್ಲದಂತೆ ತೋರುವ ನಿರ್ದೇಶಕರು ಫ್ಯಾಶ್‌ಬ್ಯಾಕ್‌ನಲ್ಲಿ ಕಥೆ ಹೇಳುವ ಟೆಕ್ನಿಕ್‌ಗೆ ಮನಸೋತಂತಿದೆ. ಸಿನಿಮಾದಲ್ಲಿ ತೃತೀಯ ಲಿಂಗದವರಿಗೆ ನೋವುಂಟು ಮಾಡುವಂಥಾ ಡೈಲಾಗ್ ಇದೆ.
ಉಳಿದಂತೆ ನಾಯಕ ಅರ್ಜುನ್ ವಿಶ್ವಕರ್ಮ ಡೈಲಾಗ್‌ಗಿಂತ ಆ್ಯಕ್ಷನ್‌ನಲ್ಲೇ ಮಿಂಚುತ್ತಾರೆ. ಇವರ ಸ್ಕ್ರೀನ್ ಪ್ರೆಸೆನ್ಸ್ ಇಂಟರೆಸ್ಟಿಂಗ್.