ಯಶ್‌ ರಾಮಾಯಣದಲ್ಲಿ ರಾವಣನೇ ನಾಯಕ

Published : Jul 31, 2026, 01:20 PM IST
Ramayana Trailer

ಸಾರಾಂಶ

‘ರಾಮಾಯಣ’ ಟ್ರೇಲರ್‌ ನೋಡಿದಾಗ ಹಾಗೆ ಅನ್ನಿಸುತ್ತಿದೆ. ಬಾಲಿವುಡ್‌ನ ಅತಿದೊಡ್ಡ ಸಿನಿಮಾ ‘ರಾಮಾಯಣ’ದ ಟ್ರೇಲರ್‌ ಬಿಡುಗಡೆಯಾಗಿದೆ. ರಣಬೀರ್‌ ಕಪೂರ್‌ ಸೇರಿದಂತೆ ಹಲವಾರು ಸ್ಟಾರ್‌ಗಳಿದ್ದರೂ ರಾಕಿಭಾಯ್‌ ಮಾತ್ರ ಎಲ್ಲರನ್ನೂ ಮಂಕು ಮಾಡಿದ್ದಾರೆ.

ಯಶ್ ತಾವು ಅಂದುಕೊಂಡಿದ್ದು ಸಾಧಿಸಿಬಿಟ್ಟಿದ್ದಾರೆ.

‘ರಾಮಾಯಣ’ ಟ್ರೇಲರ್‌ ನೋಡಿದಾಗ ಹಾಗೆ ಅನ್ನಿಸುತ್ತಿದೆ. ಬಾಲಿವುಡ್‌ನ ಅತಿದೊಡ್ಡ ಸಿನಿಮಾ ‘ರಾಮಾಯಣ’ದ ಟ್ರೇಲರ್‌ ಬಿಡುಗಡೆಯಾಗಿದೆ. ರಣಬೀರ್‌ ಕಪೂರ್‌ ಸೇರಿದಂತೆ ಹಲವಾರು ಸ್ಟಾರ್‌ಗಳಿದ್ದರೂ ರಾಕಿಭಾಯ್‌ ಮಾತ್ರ ಎಲ್ಲರನ್ನೂ ಮಂಕು ಮಾಡಿದ್ದಾರೆ. ಇಡೀ ಜಗತ್ತು ರಾವಣನ ಕುರಿತೇ ಮಾತನಾಡುತ್ತಿದೆ. ಯಶ್‌ ಮತ್ತೆ ತನ್ನ ಸಾಮರ್ಥ್ಯವನ್ನು ಸಾಬೀತು ಮಾಡಿದ್ದಾರೆ.

ಯಶ್‌ಗೆ ಅದ್ಭುತವಾಗಿ ವಿಶುವಲೈಸ್ ಮಾಡುವ ಸಾಮರ್ಥ್ಯ

ಯಶ್‌ಗೆ ಅದ್ಭುತವಾಗಿ ವಿಶುವಲೈಸ್ ಮಾಡುವ ಸಾಮರ್ಥ್ಯವಿದೆ. ತಾನು ಏನಾಗಬೇಕು, ಏನು ಮಾಡಬೇಕು ಅದನ್ನೆಲ್ಲಾ ಅವರು ಮೊದಲೇ ಊಹಿಸುತ್ತಾರೆ. ರಾಮಾಯಣ ಸಿನಿಮಾ ಒಪ್ಪಿದಾಗಲೂ ಅವರಿಗೆ ರಾವಣ ಮಿಂಚುತ್ತಾನೆ ಎಂಬ ಸ್ಪಷ್ಟತೆ ಇತ್ತು. ತನ್ನ ನಟನೆ, ನಿಲುವಿನಿಂದ ರಾವಣನೇ ಹೈಲೈಟ್ ಆಗುವಂತೆ ಮಾಡುತ್ತೇನೆ ಎಂದುಕೊಂಡಿದ್ದರು. ಅದಕ್ಕಾಗಿ ನಿರ್ಮಾಣದಲ್ಲಿಯೂ ಪಾಲು ತೆಗೆದುಕೊಂಡಿದ್ದರು. ಟ್ರೇಲರ್‌ ನೋಡಿದರೆ ಆ ಊಹೆ ನಿಜವಾಗಿದೆ. ಟ್ರೇಲರ್‌ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ 1 ಕೋಟಿ ಜನ ವೀಕ್ಷಣೆ ಮಾಡಿದ್ದಾರೆ ಮತ್ತು ಬಹುತೇಕರು ಯಶ್‌ರನ್ನು ಕೊಂಡಾಡುತ್ತಿದ್ದಾರೆ.

ಟ್ರೇಲರ್‌ನಲ್ಲಿ ಹಾಲಿವುಡ್‌ ರೀತಿಯ ದೃಶ್ಯವೈಭವ

ಟ್ರೇಲರ್‌ನಲ್ಲಿ ಹಾಲಿವುಡ್‌ ರೀತಿಯ ದೃಶ್ಯವೈಭವ ಇದೆ. ಆಸ್ಕರ್‌ ವಿಜೇತ ಡಿಎನ್‌ಇಜಿ ಸಂಸ್ಥೆಯ ಅತ್ಯಾಧುನಿಕ ಗ್ರಾಫಿಕ್ಸ್‌ ತಂತ್ರಜ್ಞಾನವಿದೆ. ಎಲ್ಲಕ್ಕಿಂತ ಹೆಚ್ಚಾಗಿ ನಮ್ಮ ಕನ್ನಡದ ಹುಡುಗನ ಅಬ್ಬರವಿದೆ. ಯಶ್‌ ಈ ನಾಡಿನಿಂದ ಹೊರಹೊಮ್ಮಿದ ಮೊದಲ ಗ್ಲೋಬಲ್‌ ಸ್ಟಾರ್‌ ಆಗುವ ಕ್ಷಣಗಣನೆ ಆರಂಭಗೊಂಡಿದೆ.

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.
Read more Articles on

Recommended Stories

ಕನ್ನಡದ ಮೊಟ್ಟ ಮೊದಲ ಜೆನ್‌ ಜೀ ಸಿನಿಮಾ ಬುಲ್ಲಿ: ಭುವನ್‌ ಪೊನ್ನಣ್ಣ
ನಿರ್ದೇಶಕರು ಅಪ್‌ಡೇಟ್‌ ಆಗಬೇಕು: ಎಂ.ಡಿ.ಶ್ರೀಧರ್‌