ನವದೆಹಲಿ: ನರೇಂದ್ರ ಮೋದಿ ನೇತೃತ್ವದ ಸರ್ಕಾರ 3ನೇ ಬಾರಿ ಕೇಂದ್ರದಲ್ಲಿ ಅಸ್ತಿತ್ವಕ್ಕೆ ಬಂದು ಭಾನುವಾರ 100 ದಿನ ಸಂದಿದೆ. ಇದೇ ವೇಳೆ, ನರೇಂದ್ರ ಮೋದಿ ಅವರು ಸೆ.17ರ ಮಂಗಳವಾರ 74 ವಸಂತಗಳನ್ನು ಪೂರೈಸುತ್ತಿದ್ದಾರೆ.
ಹೆಚ್ಚೂ ಕಡಿಮೆ ಈ ಎರಡೂ ದಿನಾಚರಣೆಗಳು ಹಿಂದೆ ಮುಂದೆ ಬಂದಿದ್ದು, ಇದೇ ಸಂದರ್ಭವನ್ನು ಬಳಸಿ ಕೇಂದ್ರ ಸಚಿವರು ಹಾಗೂ ಬಿಜೆಪಿ ನಾಯಕರು ಸರ್ಕಾರದ 100 ದಿನದ ಸಾಧನೆಗಳನ್ನು ವಿವರಿಸಲು ದೇಶಾದ್ಯಂತ ಸಿದ್ಧತೆ ಮಾಡಿಕೊಂಡಿದ್ದಾರೆ ಎಂದು ಮೂಲಗಳು ಹೇಳಿವೆ.