113 ದೇಶಗಳಲ್ಲಿ ಇದುವರೆಗೂ ಮಹಿಳೆಯರು ಮುಖ್ಯಸ್ಥರಾಗಿಲ್ಲ

KannadaprabhaNewsNetwork |  
Published : Jun 25, 2024, 12:33 AM ISTUpdated : Jun 25, 2024, 05:03 AM IST
President Droupadi Murmu

ಸಾರಾಂಶ

ಅಂತಾರಾಷ್ಟ್ರೀಯ ಮಹಿಳಾ ದಿನವನ್ನು(ಜೂ.24) ಆಚರಿಸುತ್ತಿರುವ ನಡುವೆಯೇ ದೇಶದ ನಾಯಕತ್ವದಲ್ಲಿ ಮಹಿಳೆಯರ ಪಾತ್ರ ಬಹಳ ಸೀಮಿತವಾಗಿರುವ ಕುರಿತು ವಿಶ್ವಸಂಸ್ಥೆಯ ಮಹಿಳಾ ಆಯೋಗದ ವರದಿ ಉಲ್ಲೇಖಿಸಿದೆ.

ವಿಶ್ವಸಂಸ್ಥೆ: ಅಂತಾರಾಷ್ಟ್ರೀಯ ಮಹಿಳಾ ದಿನವನ್ನು(ಜೂ.24) ಆಚರಿಸುತ್ತಿರುವ ನಡುವೆಯೇ ದೇಶದ ನಾಯಕತ್ವದಲ್ಲಿ ಮಹಿಳೆಯರ ಪಾತ್ರ ಬಹಳ ಸೀಮಿತವಾಗಿರುವ ಕುರಿತು ವಿಶ್ವಸಂಸ್ಥೆಯ ಮಹಿಳಾ ಆಯೋಗದ ವರದಿ ಉಲ್ಲೇಖಿಸಿದೆ.

141 ರಾಷ್ಟ್ರಗಳ ಪೈಕಿ 113 ರಾಷ್ಟ್ರಗಳಲ್ಲಿ ಇದುವರೆಗೂ ಒಬ್ಬರೂ ಮಹಿಳಾ ನಾಯಕರಿಗೆ ದೇಶವನ್ನು ಮುನ್ನಡೆಸುವ ಅಧಿಕಾರ ಸಿಕ್ಕಿಲ್ಲ. ಜೊತೆಗೆ ಎಲ್ಲ ರಾಷ್ಟ್ರಗಳ ಕೇಂದ್ರ ಸಚಿವರ ಪೈಕಿ ಕೇವಲ ಶೇ.23ರಷ್ಟು ಮಾತ್ರ ಮಹಿಳಾ ಸದಸ್ಯರಿದ್ದಾರೆ. ಅದರಲ್ಲೂ 7 ರಾಷ್ಟ್ರಗಳ ಕೇಂದ್ರೀಯ ಮಂತ್ರಿ ಮಂಡಲದಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯವನ್ನೇ ನೀಡಿಲ್ಲ ಎಂಬುದಾಗಿ ತಿಳಿಸಿದೆ. ಆದಾಗ್ಯೂ ನ್ಯೂಯಾರ್ಕ್‌ನಲ್ಲಿ ಶೇ.25, ಜಿನೇವಾದಲ್ಲಿ ಶೇ.35 ಮತ್ತು ವಿಯೆನ್ನಾದಲ್ಲಿ ಶೇ.33.5ರಷ್ಟು ಮಹಿಳೆಯರು ಖಾಯಂ ಜನಪ್ರತಿನಿಧಿಗಳಾಗಿದ್ದಾರೆ ಎಂದು ಮಾಹಿತಿ ನೀಡಿದೆ.

ರಾಜತಾಂತ್ರಿಕತೆ ಮತ್ತು ವಿದೇಶಾಂಗ ವ್ಯವಹಾರಗಳಲ್ಲಿ ಮಹಿಳೆಯರ ಪ್ರಾತಿನಿಧ್ಯವನ್ನು ಹೆಚ್ಚಿಸುವ ಸಲುವಾಗಿ 1995ರಲ್ಲೇ ಬೀಜಿಂಗ್‌ ಮಹಿಳಾ ಅಧಿವೇಶನದಲ್ಲಿ ನಿರ್ಣಯ ತೆಗೆದುಕೊಂಡಿದ್ದರೂ ಇದುವರೆಗೂ ಪರಿಸ್ಥಿತಿ ಸುಧಾರಿಸದಿರುವ ಕುರಿತು ಕಳವಳ ವ್ಯಕ್ತಪಡಿಸಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಮೋದಿ ಜತೆ ಪ್ರಿಯಾಂಕಾ ಗಾಂಧಿ ಆತ್ಮೀಯ ಮಾತು!
ಬಾಂಗ್ಲಾ ಹಿಂದು ಯುವಕನ ನರಮೇಧ - ಬಡಿದು ಕೊಂದು, ಮರಕ್ಕೆ ಕಟ್ಟಿ ಸುಟ್ಟು ಅಟ್ಟಹಾಸ