ಬಂಗಾಳದಲ್ಲಿ ಸಲಿಂಗ ವಿವಾಹ: ಹಸೆಮಣೆಗೆ ರಿಯಾ-ರಾಖಿ!

KannadaprabhaNewsNetwork |  
Published : Nov 09, 2025, 02:15 AM IST
ಪಶ್ಚಿಮ ಬಂಗಾಳ  | Kannada Prabha

ಸಾರಾಂಶ

ದೇಶದಲ್ಲಿ ಸಲಿಂಗ ವಿವಾಹದ ಸಾಧಕ-ಬಾಧಕಗಳ ಕುರಿತು ಚರ್ಚೆ ನಡೆಯುತ್ತಿರುವ ನಡುವೆಯೇ, ಪಶ್ಚಿಮ ಬಂಗಾಳದ ಸುಂದರಬನದಲ್ಲಿ ಇಬ್ಬರು ಯುವತಿಯರು ಪರಸ್ಪರ ಒಪ್ಪಿಗೆ ಮೇರೆಗೆ ಹಸೆಮಣೆ ಏರಿದ್ದಾರೆ.

-ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ಬಾಕಿಯಿರುವಾಗಲೇ ಘಟನೆ

ಪಿಟಿಐ ಕುಲ್ತಲಿ (ಪಶ್ಚಿಮ ಬಂಗಾಳ)

ದೇಶದಲ್ಲಿ ಸಲಿಂಗ ವಿವಾಹದ ಸಾಧಕ-ಬಾಧಕಗಳ ಕುರಿತು ಚರ್ಚೆ ನಡೆಯುತ್ತಿರುವ ನಡುವೆಯೇ, ಪಶ್ಚಿಮ ಬಂಗಾಳದ ಸುಂದರಬನದಲ್ಲಿ ಇಬ್ಬರು ಯುವತಿಯರು ಪರಸ್ಪರ ಒಪ್ಪಿಗೆ ಮೇರೆಗೆ ಹಸೆಮಣೆ ಏರಿದ್ದಾರೆ. ಸಲಿಂಗ ವಿವಾಹಕ್ಕೆ ದೇಶದಲ್ಲಿ ಮಾನ್ಯತೆ ಇಲ್ಲ. ಸುಪ್ರೀಂ ಕೋರ್ಟ್‌ನಲ್ಲಿ ಈ ಕುರಿತ ವಿಚಾರಣೆ ಬಾಕಿಯಿರುವಾಗಲೇ ಈ ಪ್ರಸಂಗ ನಡೆದಿದೆ. ವೃತ್ತಿಪರ ನೃತ್ಯಪಟುಗಳಾದ ರಿಯಾ ಸರ್ದಾರ್‌ ಮತ್ತು ರಾಖಿ ನಸ್ಕರ್‌ ನ.4ರಂದು ಕುಲ್ತಲಿಯ ಜಲಬೇರಿಯಾದಲ್ಲಿರುವ ಪಲೇರ್‌ ಚಕ್ ದೇವಸ್ಥಾನದಲ್ಲಿ ಗುರುಹಿರಿಯರ ಸಮ್ಮುಖದಲ್ಲಿ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ. ರಿಯಾ ವಧುವಿನಂತೆ ಸಿಂಗರಿಸಿಕೊಂಡರೆ, ರಾಖಿ ಮದುಮಗನ ದಿರಿಸಿನಲ್ಲಿ ಗಮನ ಸೆಳೆದರು. ಅನೇಕ ಮಂದಿ ಹಳ್ಳಿಗರು ವಿವಾಹಕ್ಕೆ ಆಗಮಿಸಿದ್ದರು. ಈ ಅಪರೂಪದ ವಿವಾಹವನ್ನು ನೋಡಿ ಕೆಲವು ಅಚ್ಚರಿ ವ್ಯಕ್ತಪಡಿಸಿದರೆ, ಇನ್ನು ಕೆಲವರು ಮೌನವಾಗಿ ಸಮ್ಮತಿ ತೋರಿದರು.ಈ ನಡುವೆ ಮಾತನಾಡಿರುವ ರಾಖಿ, ‘ನಾವು ವಯಸ್ಕರು. ನಮ್ಮ ಜೀವನವನ್ನು ನಾವೇ ನಿರ್ಧರಿಸಬಹುದು. ಜೀವನಸಂಗಾತಿಯನ್ನು ಆಯ್ಕೆ ಮಾಡುವಾಗ ಲಿಂಗ ಏಕೆ ಮುಖ್ಯ?’ ಎಂದು ಪ್ರಶ್ನಿಸಿದ್ದಾರೆ.

----‘ಮದುವೆ ಬಗ್ಗೆ ನಮಗೆ ಯಾವುದೇ ಅಧಿಕೃತ ವರದಿ ಬಂದಿಲ್ಲ. ಹಳ್ಳಿಗರು ದೇವಸ್ಥಾನದ ಕಾರ್ಯಕ್ರಮದಲ್ಲಿ ಶಾಂತವಾಗಿ ಸೇರಿದರೆ, ನಾವು ಏನೂ ಮಾಡಲು ಆಗುವುದಿಲ್ಲ’ ಎಂದು ಪೊಲೀಸರು ತಿಳಿಸಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

2025 ಸುಧಾರಣೆಗಳ ಸಾರ್ಥಕ ವರ್ಷ: ಮೋದಿ ಹರ್ಷ
ಪತ್ರಕರ್ತರ ಹಿತರಕ್ಷಣೆಗೆ ಐಎಫ್‌ಡಬ್ಲ್ಯುಜೆ ಆಗ್ರಹ