ಸಿಇಸಿ ವಿರುದ್ಧದ 20 ವರ್ಷ ಹಳೆ ಕೇಸ್‌ ರೀ ಓಪನ್‌!

Published : Oct 05, 2026, 07:35 AM IST
Gyanesh Kumar CEC

ಸಾರಾಂಶ

ಕೇರಳದಲ್ಲಿ 2006ರಲ್ಲಿ ನಡೆದಿತ್ತು ಎನ್ನಲಾದ ರಸ್ತೆ ಕಾಮಗಾರಿ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ, ಅಂದು ಕೇರಳದ ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯುಡಿ) ಕಾರ್ಯದರ್ಶಿಯಾಗಿದ್ದ ಹಾಲಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ವಿಜಿಲೆನ್ಸ್‌ ತನಿಖೆಗೆ ಕೇರಳ ಸರ್ಕಾರ ಆದೇಶಿಸಿದೆ.

ತಿರುವನಂತಪುರಂ : ಕೇರಳದಲ್ಲಿ 2006ರಲ್ಲಿ ನಡೆದಿತ್ತು ಎನ್ನಲಾದ ರಸ್ತೆ ಕಾಮಗಾರಿ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ, ಅಂದು ಕೇರಳದ ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯುಡಿ) ಕಾರ್ಯದರ್ಶಿಯಾಗಿದ್ದ ಹಾಲಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ವಿಜಿಲೆನ್ಸ್‌ ತನಿಖೆಗೆ ಕೇರಳ ಸರ್ಕಾರ ಆದೇಶಿಸಿದೆ.

ದೇಶದಲ್ಲಿ ಮತದಾರ ಪಟ್ಟಿ ಪರಿಷ್ಕರಣೆ (ಎಸ್ಐಆರ್) ವಿಚಾರದಲ್ಲಿ ಜ್ಞಾನೇಶ್ ವಿರುದ್ಧ ವಿಪಕ್ಷಗಳ ಆಕ್ರೋಶ ಭುಗಿಲೆದ್ದಿರುವಾಗಲೇ, ಅವರ ವಿರುದ್ಧದ ಹಳೇ ಪ್ರಕರಣ ರೀ-ಓಪನ್‌ ಆಗಿದೆ.

2006ರಲ್ಲಿ ವಿಶ್ವಬ್ಯಾಂಕ್‌ನ ನೆರವಿನಿಂದ 215 ಕೋಟಿ ರು. ವೆಚ್ಚದಲ್ಲಿ ಅಂಗಮಾಲಿ–ತಿರುವನಂತಪುರಂ ನಡುವಿನ ರಸ್ತೆಯ ಪುನರ್‌ನಿರ್ಮಾಣ ಯೋಜನೆಯನ್ನು ಕೇರಳ ರಾಜ್ಯ ಸಾರಿಗೆ ಯೋಜನೆ ನಿಗಮವು (ಕೆಎಸ್‌ಟಿ). ಮಲೇಷ್ಯಾ ಕಂಪನಿ ಸಹಭಾಗಿತ್ವದಲ್ಲಿ ಕೈಗೆತ್ತಿಕೊಂಡಿತ್ತು. ಯೋಜನೆಯ ಉಸ್ತುವಾರಿ ವಹಿಸಿಕೊಂಡಿದ್ದ ಮಲೇಷ್ಯಾದ ಅಧಿಕಾರಿ ಲೀ ಬೀನ್‌ ಸೀನ್‌ ಅವರು, ಜ್ಞಾನೇಶ್‌ ಮೇಲೆ ಭ್ರಷ್ಟಾಚಾರ ಹಾಗೂ ಕೆಲಸದ ವೇಳೆ ಕಿರುಕುಳ ಆರೋಪ ಹೊರಿಸಿ 2006ರ ನವೆಂಬರ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆಗಲೂ ವಿಜಿಲೆನ್ಸ್‌ ತನಿಖೆ ನಡೆದಿತ್ತಾದರೂ ತಾರ್ಕಿಕ ಅಂತ್ಯ ಕಂಡಿರಲಿಲ್ಲ. ಅಷ್ಟರಲ್ಲೇ ಜ್ಞಾನೇಶ್‌ ಕೇರಳದಿಂದ ಕೇಂದ್ರ ಕೇಡರ್‌ಗೆ ವರ್ಗಾವಣೆಗೊಂಡಿದ್ದರು.

ಈ ನಡುವೆ ಇತ್ತೀಚೆಗೆ ಜ್ಞಾನೇಶ್‌ ವಿರುದ್ಧ ತನಿಖೆ ನಡೆಸುವಂತೆ ಕೆಪಿಸಿಸಿ ನಾಯಕ ಮಲಯಿಂಕೀಳು ವೇಣುಗೋಪಾಲ್ ದೂರು ಸಲ್ಲಿಸಿದ್ದರು. ಹೀಗಾಗಿ ಪುನಃ ವಿಜಿಲೆನ್ಸ್‌ ತನಿಖೆಗೆ ಕೇರಳ ಗೃಹ ಸಚಿವ ರಮೇಶ್ ಚೆನ್ನಿತ್ತಲ ಆದೇಶಿಸಿದ್ದಾರೆ.

ಜ್ಞಾನೇಶ್‌ ಕುಮಾರ್‌ಗೆ ಕಾಡಿದ ರಸ್ತೆ ಹಗರಣ?

ಹಾಲಿ ಮುಖ್ಯ ಚುನಾವಣಾ ಆಯುಕ್ತರಾಗಿರುವ ಜ್ಞಾನೇಶ್‌ ಕುಮಾರ್ ಕೇರಳ ಕೇಡರ್‌ ಐಎಎಸ್‌ ಅಧಿಕಾರಿ

2006ರಲ್ಲಿ ಜ್ಞಾನೇಶ್‌, ಕೇರಳ ಲೋಕೋಪಯೋಗಿ ಇಲಾಖೆಯಲ್ಲಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು

ಈ ವೇಳೆ ನಡೆದಿದ್ದ ರಸ್ತೆ ಕಾಮಗಾರಿಯೊಂದರಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪ ಕೇಳಿಬಂದಿತ್ತು

ಮಲೇಷ್ಯಾ ಮೂಲದ ವ್ಯಕ್ತಿಯೊಬ್ಬರು ಜ್ಞಾನೇಶ್‌ ವಿರುದ್ಧ ಆರೋಪ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದರು

ಈ ಬಗ್ಗೆ ವಿಜಿಲೆನ್ಸ್‌ ತನಿಖೆ ಆರಂಭಿಸಿದ ಹೊತ್ತಿನಲ್ಲೇ ಜ್ಞಾನೇಶ್‌ ಕೇಂದ್ರ ಸೇವೆಗೆ ವರ್ಗಾವಣೆಗೊಂಡಿದ್ದರು

ಹೀಗಾಗಿ ತನಿಖೆ ತಾರ್ಕಿಕ ಅಂತ್ಯ ಕಾಣದೆ ಮುಕ್ತಾಯವಾಗಿತ್ತು. ಮುಂದೆ ಈ ಕುರಿತು ತನಿಖೆ ನಡೆದಿರಲಿಲ್ಲ

ಇತ್ತೀಚೆಗೆ ಮತ್ತೆ ತನಿಖೆಗೆ ಬೇಡಿಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಕೇರಳ ಸರ್ಕಾರದಿಂದ ಮರುತನಿಖೆಗೆ ಆದೇಶ

ಆರೋಪ ಏನು?

ಅಂಗಮಾಲಿ–ತಿರುವನಂತಪುರಂ ನಡುವಿನ ರಸ್ತೆಯ ಪುನರ್‌ನಿರ್ಮಾಣ ಯೋಜನೆಯನ್ನು ಕೇರಳ ರಾಜ್ಯ ಸಾರಿಗೆ ಯೋಜನೆ ನಿಗಮವು ಮಲೇಷ್ಯಾ ಕಂಪನಿ ಸಹಭಾಗಿತ್ವದಲ್ಲಿ ಕೈಗೆತ್ತಿಕೊಂಡಿತ್ತು. ಯೋಜನೆಯ ಉಸ್ತುವಾರಿ ವಹಿಸಿಕೊಂಡಿದ್ದ ಮಲೇಷ್ಯಾದ ಅಧಿಕಾರಿ ಲೀ ಬೀನ್‌ ಸೀನ್‌ ಅವರು, ಜ್ಞಾನೇಶ್‌ ಮೇಲೆ ಭ್ರಷ್ಟಾಚಾರ ಹಾಗೂ ಕೆಲಸದ ವೇಳೆ ಕಿರುಕುಳ ಆರೋಪ ಹೊರಿಸಿದ್ದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಫ್ಲೈದುಬೈ ವಿಮಾನದ ಕಾಕ್‌ಪಿಟ್‌ ಟೆರರ್‌ ಕತೆ ಬಿಚ್ಚಿಟ್ಟ ಹೀರೋ ಪೈಲಟ್‌
ಸ್ಮಿತ್‌ ಕೊಂಡಾಡಿದ ದುಬೈ ರಾಜಕುಮಾರ