ಮಂಡ್ಯದ ಬಡ ಮೆಕ್ಯಾನಿಕ್‌ಗೆ ಕೇರಳದ 25 ಕೋಟಿ ರುಪಾಯಿ ಬಂಪರ್‌ ಲಾಟರಿ - ಬೇರೆಯವರಿಗೆ ಮಾರಲು ಹೊರಟಿದ್ದವಗೆ ಭಾರಿ ಹಣ

ಸಾರಾಂಶ

ಸ್ಕೂಟರ್ ರಿಪೇರಿ ಮಾಡಿ ಜೀವನ ಸಾಗಿಸುತ್ತಿದ್ದ ಮಂಡ್ಯದ ಬಡ ಮೆಕ್ಯಾನಿಕ್ ಒಬ್ಬ ದಿನ ಬೆಳಗಾಗುವುದರೊಳಗೆ ಶ್ರೀಮಂತನಾಗಿದ್ದಾನೆ.

ಮಂಡ್ಯ: ಸ್ಕೂಟರ್ ರಿಪೇರಿ ಮಾಡಿ ಜೀವನ ಸಾಗಿಸುತ್ತಿದ್ದ ಮಂಡ್ಯದ ಬಡ ಮೆಕ್ಯಾನಿಕ್ ಒಬ್ಬ ದಿನ ಬೆಳಗಾಗುವುದರೊಳಗೆ ಶ್ರೀಮಂತನಾಗಿದ್ದಾನೆ.

ಈತ ಈಗ ಕೋಟ್ಯಧಿಪತಿಯಾಗಿದ್ದು, ಈತ ಖರೀದಿಸಿದ್ದ ಕೇರಳ ರಾಜ್ಯದ ಲಾಟರಿ ಟಿಕೆಟ್ ಬರೋಬ್ಬರಿ 25ಕೋಟಿ ಬಹುಮಾನ ಬಂದಿದೆ. ಆತನ ಭವಿಷ್ಯದ ದಿಕ್ಕೇ ಈಗ ಬದಲಾಗಿದೆ. ಹೌದು ಪಾಂಡವಪುರ ಬಡ ಮೆಕ್ಯಾನಿಕ್ ಅಲ್ತಾಫ್ ಇದೀಗ ಕೊಟ್ಯಧಿಪತಿಯಾಗಿದ್ದಾನೆ. ಈತ ಖರೀದಿಸಿದ್ದ ಲಾಟರಿ ಟಿಕೆಟ್‌ಗೆ ಮೊದಲ ಬಹುಮಾನ ದೊರಕಿದೆ. 

ಸಾಲ ಮಾಡಿಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಅಲ್ತಾಫ್ ಮೊನ್ನೆಯಷ್ಟೇ 500 ರು ಕೊಟ್ಟು ಖರೀದಿಸಿದ್ದ ಲಾಟರಿ ಟಿಕೆಟ್ ಅನ್ನು ಡ್ರಾ ಮಾಡಿದ್ದು ಕೇವಲ ಅರ್ಧ ದರಕ್ಕೆ ಮಾರಲು ಮುಂದಾಗಿದ್ದ. 

ಆದರೀಗ ಅದಕ್ಕೆ ಬಂಪರ್ ಬಹುಮಾನ ದೊರಕಿದೆ. ಕೇರಳದ ತಿರುವೋಣಂ ಲಾಟರಿ ಸಂಸ್ಥೆಯಿಂದ ಲಾಟರಿ ಟಿಕೆಟ್ ಖರೀದಿಸಿದ್ದ. ಎಲ್ಲಾ ತೆರಿಗೆ ಕಳೆದು ಅಲ್ತಾಫ್‌ಗೆ ಕೊನೆ 12. 8 ಕೋಟಿ ಹಣ ದೊರಕಲಿದೆ. ಇದೀಗ ಈ ಹಣದಲ್ಲಿ ಅಲ್ತಾಫ್ ಸ್ವಂತ ಮನೆ ಹಾಗೂ ಸಮಾಜ ಸೇವೆ ಮಾಡುವ ಕನಸು ಕಾಣುತ್ತಿದ್ದಾನೆ.

Share this article