ಸಿಡಿಲಿನ ಹೊಡೆತಕ್ಕೆ ಒಂದೇ ದಿನ 25 ಬಲಿ, 39 ಮಂದಿಗೆ ಗಾಯ

ಸಾರಾಂಶ

ಉತ್ತರ ಪ್ರದೇಶದ ಬೆನ್ನಲ್ಲೇ ಶುಕ್ರವಾರ ಬಿಹಾರದ ವಿವಿಧ ಜಿಲ್ಲೆಗಳಲ್ಲಿ ಸಿಡಿಲಿನ ಹೊಡೆತಕ್ಕೆ 25 ಮಂದಿ ಅಸುನೀಗಿದ್ದಾರೆ. 39 ಮಂದಿ ಗಾಯಗೊಂಡಿದ್ದಾರೆ.

ಪಟನಾ (ಬಿಹಾರ): ಉತ್ತರ ಪ್ರದೇಶದ ಬೆನ್ನಲ್ಲೇ ಶುಕ್ರವಾರ ಬಿಹಾರದ ವಿವಿಧ ಜಿಲ್ಲೆಗಳಲ್ಲಿ ಸಿಡಿಲಿನ ಹೊಡೆತಕ್ಕೆ 25 ಮಂದಿ ಅಸುನೀಗಿದ್ದಾರೆ. 39 ಮಂದಿ ಗಾಯಗೊಂಡಿದ್ದಾರೆ.

ಸಿಡಿಲಿನ ಕಾರಣ ಮಧುಬನಿಯಲ್ಲಿ 5 ಮಂದಿ, ಔರಂಗಾಬಾದ್‌ನಲ್ಲಿ 4, ಸುಪಾಲ್‌, ನಳಂದಾನಲ್ಲಿ ತಲಾ 3, ಲಖೀಸರೈ ಮತ್ತು ಪಟನಾದಲ್ಲಿ ತಲಾ 2, ಬೇಗುಸರೈ, ಜುಮೈ, ಗೋಪಾಲ್‌ಗಂಜ್‌, ರೋಹ್ತಾಸ್‌, ಸಮಷ್ಟಿಪುರ, ಪೂರ್ಣಿಯಾದಲ್ಲಿ ತಲಾ ಒಂದು ಸಾವು ಸಂಭವಿಸಿದೆ. ಜುಲೈನಲ್ಲಿ ಸಿಡಿಲಿನಿಂದಲೇ 50 ಮಂದಿ ಮೃತಪಟ್ಟಿದ್ದಾರೆ ಎಂದು ಬಿಹಾರ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಹೇಳಿದೆ.

ಮೃತರ ಕುಟುಂಬಕ್ಕೆ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಸಂತಾಪ ಸೂಚಿಸಿದ್ದಾರೆ. ಸಂತ್ರಸ್ತರ ಕುಟುಂಬಕ್ಕೆ ತಲಾ 4 ಲಕ್ಷ ರು. ನೀಡಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

Share this article