ಮಹಾರಾಷ್ಟ್ರ : ಹನುಮಂತ ದೇಗುಲದ ಛಾವಣಿ ಕುಸಿದು 6 ಸಾವು

KannadaprabhaNewsNetwork |  
Published : Jun 21, 2026, 01:45 AM IST
Temple

ಸಾರಾಂಶ

ಮಹಾರಾಷ್ಟ್ರದ ಪರಭಣಿ ಜಿಲ್ಲೆಯ ಯಶ್ವಾಡಿ ಎಂಬಲ್ಲಿರುವ ಹನುಮಂತ ದೇವಸ್ಥಾನದ ನಿರ್ಮಾಣ ಹಂತದ ಛಾವಣಿ ಕುಸಿದ ಪರಿಣಾಮ 6 ಮಂದಿ ಸಾವನ್ನಪ್ಪಿದ್ದು, 18 ಮಂದಿ ಗಾಯಗೊಂಡ ಘಟನೆ ಶನಿವಾರ ಮಧ್ಯಾಹ್ನ ಘಟಿಸಿದೆ. 25 ಜನರನ್ನು ಅವಶೇಷಗಳಡಿಯಿಂದ ರಕ್ಷಿಸಲಾಗಿದೆ.

  ಛತ್ರಪತಿ ಸಂಭಾಜಿನಗರ :  ಮಹಾರಾಷ್ಟ್ರದ ಪರಭಣಿ ಜಿಲ್ಲೆಯ ಯಶ್ವಾಡಿ ಎಂಬಲ್ಲಿರುವ ಹನುಮಂತ ದೇವಸ್ಥಾನದ ನಿರ್ಮಾಣ ಹಂತದ ಛಾವಣಿ ಕುಸಿದ ಪರಿಣಾಮ 6 ಮಂದಿ ಸಾವನ್ನಪ್ಪಿದ್ದು, 18 ಮಂದಿ ಗಾಯಗೊಂಡ ಘಟನೆ ಶನಿವಾರ ಮಧ್ಯಾಹ್ನ ಘಟಿಸಿದೆ. 

25 ಜನರನ್ನು ಅವಶೇಷಗಳಡಿಯಿಂದ ರಕ್ಷಿಸಲಾಗಿದೆ

 25 ಜನರನ್ನು ಅವಶೇಷಗಳಡಿಯಿಂದ ರಕ್ಷಿಸಲಾಗಿದೆ. ಸಭಾಮಂಟಪದ ಸ್ಲ್ಯಾಬ್‌ ಕೆಳಗೆ ಮಧ್ಯಾಹ್ನ 3.30ರ ಹೊತ್ತಿಗೆ ಪ್ರಸಾದ ವಿತರಣೆ ಮಾಡಲಾಗುತ್ತಿತ್ತು. ಹತ್ತಾರು ಭಕ್ತರು ಪ್ರಸಾದ ಸ್ವೀಕರಿಸುತ್ತಿದ್ದರು. ಆಗ ಮೇಲ್ಛಾವಣಿ ಏಕಾಏಕಿ ಕುಸಿದು ಬಿದ್ದು ಅವರು ಅವಶೇಷದ ಅಡಿ ಸಿಲುಕಿದ್ದಾರೆ. ಈ ದೃಶ್ಯ ಸಿಸಿಟೀವಿಯಲ್ಲಿ ದಾಖಲಾಗಿದೆ.

ಹನುಮ ದೇವಸ್ಥಾನದಲ್ಲಿ ಜನಸಂದಣಿ

ಶನಿವಾರವಾದ್ದರಿಂದ ಹನುಮ ದೇವಸ್ಥಾನದಲ್ಲಿ ಜನಸಂದಣಿ ಅಧಿಕವಿತ್ತು. ರಕ್ಷಣಾ ಕಾರ್ಯಾಚರಣೆಗಾಗಿ ಪೊಲೀಸ್‌ ತಂಡಗಳನ್ನು ಕಳಿಸಿಕೊಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ದುರ್ಘಟನೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಆಘಾತ ವ್ಯಕ್ತಪಡಿಸಿದ್ದು, ಗಾಯಾಳುಗಳು ಬೇಗ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಮತ್ತೆ ಟ್ರಂಪ್‌-ಮೆಲೋನಿ ಜಟಾಪಟಿ
ಪ್ರಧಾನ್‌ ರಾಜೀನಾಮೆಗೆ ಆಗ್ರಹಿಸಿ ದಿಲ್ಲಿಯಲ್ಲಿ ಜಿರಳೆ ಪಾರ್ಟಿ 2ನೇ ಪ್ರತಿಭಟನೆ