16 ಔಷಧ ಕಾಂಬಿನೇಷನ್‌ಗೆ ಕೇಂದ್ರ ನಿರ್ಬಂಧ

KannadaprabhaNewsNetwork |  
Published : Jun 21, 2026, 01:45 AM ISTUpdated : Jun 21, 2026, 04:58 AM IST
Medicine

ಸಾರಾಂಶ

ಕೇಂದ್ರ ಸರ್ಕಾರವು 16 ಫಿಕ್ಸೆಡ್‌ ಡೋಸ್‌ ಕಾಂಬಿನೇಷನ್‌ ಔಷಧಗಳ ಉತ್ಪಾದನೆ, ಮಾರಾಟ ಹಾಗೂ ವಿತರಣೆಯನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ನಿರ್ಬಂಧಿಸಿ ಆದೇಶ ಹೊರಡಿಸಿದೆ.ಇವುಗಳ ಬಳಕೆ ಮಾಡುವುದರಿಂದ ರೋಗಿಗಳಿಗೆ ಯಾವುದೇ ಲಾಭವೂ ಇಲ್ಲ’ ಎಂಬ ಕಾರಣಕ್ಕೆ ಈ ನಿರ್ಧಾರ ತೆಗೆದುಕೊಂಡಿದೆ.

 ನವದೆಹಲಿ: ಕೇಂದ್ರ ಸರ್ಕಾರವು 16 ಫಿಕ್ಸೆಡ್‌ ಡೋಸ್‌ ಕಾಂಬಿನೇಷನ್‌ ಔಷಧಗಳ ಉತ್ಪಾದನೆ, ಮಾರಾಟ ಹಾಗೂ ವಿತರಣೆಯನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ನಿರ್ಬಂಧಿಸಿ ಆದೇಶ ಹೊರಡಿಸಿದೆ.

‘ಈ ಕಾಂಬಿನೇಷನ್‌ಗಳಿಗೆ ಚಿಕಿತ್ಸೆಯ ಸಮರ್ಥನೆ ಇಲ್ಲ ಹಾಗೂ ಸಂಭಾವ್ಯ ಅಪಾಯಗಳಿಗೆ ಹೋಲಿಸಿದರೆ ಇವುಗಳ ಬಳಕೆ ಮಾಡುವುದರಿಂದ ರೋಗಿಗಳಿಗೆ ಯಾವುದೇ ಲಾಭವೂ ಇಲ್ಲ’ ಎಂಬ ಕಾರಣಕ್ಕೆ ಈ ನಿರ್ಧಾರ ತೆಗೆದುಕೊಂಡಿದೆ.

‘ಕೇವಲ ವೈಜ್ಞಾನಿಕ ಮಾನ್ಯತೆ ಪಡೆದ ಮತ್ತು ಪರಿಣಾಮಕಾರಿ ಔಷಧಿಗಳಷ್ಟೇ ಸಾರ್ವಜನಿಕರಿಗೆ ಲಭ್ಯವಾಗುವಂತೆ ನೋಡಿಕೊಳ್ಳುವ ದೃಷ್ಟಿಯಿಂದ ಔಷಧಗಳನ್ನು ವಿವೇಚನೆಯಿಂದ ಬಳಸುವಂತೆ ಪ್ರೇರಿಪಿಸುವುದು ಈ ನಿರ್ಧಾರದ ಹಿಂದಿನ ಮೂಲ ಉದ್ದೇಶವಾಗಿದೆ’ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ತರ್ಕರಹಿತವಾದ ಹಾಗೂ ಚಿಕಿತ್ಸೆಯ ದೃಷ್ಟಿಯಿಂದ ಲಾಭಕರವಲ್ಲದ ಅಥವಾ ಹಾನಿಕಾರಕವಾದ ಔಷಧಗಳ ಕಾಂಬಿನೇಷನ್‌ಗಳ ಪರಿಶೀಲನೆಗೆ ಔಷಧಗಳ ತಾಂತ್ರಿಕ ಸಲಹಾ ಮಂಡಳಿಯು ತಜ್ಞರ ಸಮಿತಿಯೊಂದನ್ನು ರಚಿಸಿದ್ದು, ಅದು ನೀಡಿದ ವರದಿಯಂತೆ ಈ ನಿರ್ಧಾರ ಕೈಗೊಳ್ಳಲಾಗಿದೆ. ಸುಪ್ರೀಂ ಕೋರ್ಟ್‌ ನಿರ್ದೇಶನದಂತೆ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ.

ಹಲವು ಆ್ಯಂಟಿಬಯೋಟಿಕ್ ಆಧಾರಿತ ಕಾಂಬಿನೇಷನ್‌, ಕೆಲ ನೋವು ನಿವಾರಕ ಔಷಧಿಯ ಕಾಂಬಿನೇಷನ್‌ ಹಾಗೂ ಚರ್ಮರೋಗಕ್ಕೆ ಸಂಬಂಧಿಸಿದ ಔಷಧಿಗಳ ಮೇಲೆ ನಿರ್ಬಂಧ ವಿದಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.

ಯಾವ್ಯಾವ ಕಾಂಬಿನೇಷನ್‌ ನಿಷೇಧ?:

ಅಸಿಟೈಲ್ ಸ್ಯಾಲಿಸಿಲಿಕ್ ಆ್ಯಸಿಡ್‌+ಎಥೋಹೆಪ್ಟಜೀನ್

ಡಿಸಿಕ್ಲೋಮೈನ್‌+ಪ್ಯಾರಸಿಟಮಾಲ್‌+ಕ್ಲಿಡಿನಿಯಂ ಬ್ರೋಮೈಡ್‌

ಡಿಸಿಕ್ಲೋಮೈನ್‌+ಪ್ಯಾರಸಿಟಮಾಲ್‌+ ಕ್ಲಿಡಿನಿಯಂ ಬ್ರೋಮೈಡ್‌+ಕ್ಲೋರ್ಡಿಯಾಜೆಪಾಕ್ಸೈಡ್‌

ಗ್ಲಿಕ್ಲಾಜೈಡ್‌ +ಕ್ರೋಮಿಯಂ ಪಿಕೊಲಿನೇಟ್‌

ಪ್ಯಾರಸಿಟಮಾಲ್‌ +ಪ್ಯಾರಸಿಟಮಾಲ್‌ + ಲಿಗ್ನೊಕೈನ್‌

ಅಮಾಕ್ಸಿಲಿನ್‌ + ಸೆರಾಪೆಪ್ಟೈಸ್‌+ ಲ್ಯಾಕ್ಟೋಬಾಸಿಲಸ್‌ ಸ್ಟೋರೋಜೆನ್ಸ್‌

ಅಮಾಕ್ಸಿಲಿನ್‌ + ಕ್ಲೊಕ್ಸ್ಯಾಕ್ಸಿಲಿನ್‌+ ಲ್ಯಾಕ್ಟಿಕ್‌ ಆ್ಯಸಿಡ್‌ ಬ್ಯಾಸಿಲಸ್‌+ ಸೆರಾಟಿಯೋಪೆಪ್ಟಿಡೇಸ್‌

ಅಮಾಕ್ಸಿಲಿನ್‌ + ಸೆರಾಟಿಯೋಪೆಪ್ಟಿಡೇಸ್‌

ಸೆಫಾಡ್ರೊಕ್ಸಿಲ್‌+ ಪ್ರೊಬೆನೆಸಿಡ್‌

ಸೆಫುರಾಕ್ಸಿಮ್‌+ ಸೆರೋಟಿಯೋಪೆಪ್ಟಿಡೇಸ್‌

ಅಲೋವೆರಾ ಎಕ್ಸ್‌ಟ್ರ್ಯಾಕ್ಟ್‌ + ಅಲಾಂಟೋಯಿನ್, ಆಲ್ಫಾ ಟೊಕೋಫೆರಾಲ್‌ ಅಸಿಟೇಟ್‌(ವಿಟಮಿನ್‌ ಇ) + ಡಿ-ಪ್ಯಾಂಥೆನಾಲ್‌+ ವಿಟಮಿನ್‌ ಎ

ಅಲೋವೇರಾ ಎಕ್ಸ್‌ಟ್ರಾಕ್ಟ್‌ +ವಿಟಮಿನ್ ಇ+ ಡೈಮಿಥಿಕೋನ್‌ ಮತ್ತು ಗ್ಲಿಸರಿನ್‌

ಅಲೋವೆರಾ +ಜೊಜೊಬಾ ಆಯಿಲ್‌ + ವಿಟಮಿನ್ ಇ

ಅಲೋವೆರಾ+ಆರೆಂಜ್‌ ಆಯಿಲ್‌

ಅಲೋವೇರಾ+ ವಿಟಮಿನ್‌ ಇ + ಹರ್ಬಲ್‌

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಜೆನ್‌ಝೀ ವಿರುದ್ಧ ಹಿಂಸೆ: ರಾಹುಲ್‌ ವರ್ಸಸ್ ಅಮಿತ್‌ ಶಾ
ಕಾವಡ ಯಾತ್ರೆ : ಹರಿದ್ವಾರದಲ್ಲಿ ಮೂತ್ರ ಬಾಟಲಿ, 7000 ಟನ್‌ ಕಸದ ರಾಶಿ!