48,103 ಪಕ್ಷೇತರ ಅಭ್ಯರ್ಥಿಗಳಲ್ಲಿ ಗೆದ್ದವರು 234!

KannadaprabhaNewsNetwork |  
Published : Apr 21, 2024, 02:22 AM ISTUpdated : Apr 21, 2024, 09:04 AM IST
ಲೋಕಸಭಾ ಚುನಾವಣೆ | Kannada Prabha

ಸಾರಾಂಶ

ಭಾರತದ ಸಾರ್ವತ್ರಿಕ ಚುನಾವಣಾ ಇತಿಹಾಸದಲ್ಲಿ ಇದುವರೆಗೆ ಬರೋಬ್ಬರಿ 48,103 ಪಕ್ಷೇತರ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಆದರೆ ಅವರ ಪೈಕಿ ಕೇವಲ 234 ಅಭ್ಯರ್ಥಿಗಳು ಮಾತ್ರ ಗೆಲುವು ಸಾಧಿಸುವಲ್ಲಿ ಯಶ ಕಂಡಿದ್ದಾರೆ.

ನವದೆಹಲಿ: ಭಾರತದ ಸಾರ್ವತ್ರಿಕ ಚುನಾವಣಾ ಇತಿಹಾಸದಲ್ಲಿ ಇದುವರೆಗೆ ಬರೋಬ್ಬರಿ 48,103 ಪಕ್ಷೇತರ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಆದರೆ ಅವರ ಪೈಕಿ ಕೇವಲ 234 ಅಭ್ಯರ್ಥಿಗಳು ಮಾತ್ರ ಗೆಲುವು ಸಾಧಿಸುವಲ್ಲಿ ಯಶ ಕಂಡಿದ್ದಾರೆ.

ಎರಡನೇ ಲೋಕಸಭಾ ಅವಧಿಯಲ್ಲಿ ಅತಿಹೆಚ್ಚು (42) ಸ್ವತಂತ್ರ ಅಭ್ಯರ್ಥಿಗಳು ಲೋಕಸಭೆಗೆ ಆಯ್ಕೆಯಾಗಿದ್ದರೆ 1991ರ ಚುನಾವಣೆಯಲ್ಲಿ ಕೇವಲ ಒಬ್ಬರು ಮಾತ್ರ ಸ್ವತಂತ್ರ ಸಂಸದರಾಗಿ ಆಯ್ಕೆಯಾಗಿದ್ದರು.

1996ರ ಚುನಾವಣೆಯಲ್ಲಿ ಅತಿಹೆಚ್ಚು (10,036) ಸ್ವತಂತ್ರ ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸಿದ್ದರೆ 1957ರಲ್ಲಿ ನಡೆದ ಎರಡನೇ ಲೋಕಸಭಾ ಚುನಾವಣೆಯಲ್ಲಿ ಅತಿ ಕಡಿಮೆ ಸ್ವತಂತ್ರ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಅಲ್ಲದೆ ಇದುವರೆಗೆ ಸ್ಪರ್ಧಿಸಿರುವ 48,103 ಸ್ವತಂತ್ರ ಅಭ್ಯರ್ಥಿಗಳ ಪೈಕಿ 47,163 ಉಮೇದುವಾರರು ಠೇವಣಿ ಉಳಿಸಿಕೊಳ್ಳುವಲ್ಲಿಯೂ ವಿಫಲರಾಗಿದ್ದಾರೆ.

ಪ್ರಸ್ತುತ 18ನೇ ಲೋಕಸಭಾ ಚುನಾವಣೆಯ ಮೊದಲ ಎರಡು ಹಂತಗಳಿಗೆ ಒಟ್ಟು 1458 ಸ್ವತಂತ್ರ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಕೇಂದ್ರ ಸಚಿವ ಚೌಹಾಣ್‌ ಐಎಸ್‌ಐ ಟಾರ್ಗೆಟ್‌: ಭದ್ರತೆ ಹೆಚ್ಚಳ
ಆನಂದದ ಕ್ಷಣ ದುರಂತದ ಕ್ಷಣವಾಗಿ ಬದಲು!