ಕಳೆದ ವರ್ಷ ಪ್ರಯಾಗ್‌ರಾಜ್ ಕುಂಭಮೇಳದಲ್ಲಿ ರುದ್ರಾಕ್ಷಿ ಮಾರುತ್ತಾ ಫೇಮಸ್ ಆಗಿದ್ದ ನೀಲಿ ಕಂಗಳ ಚೆಲುವೆ ಮೊನಾಲಿಸಾಗೆ ಕುಟುಂಬಸ್ಥರ ವಿರೋಧದ ನಡುವೆಯೂ ಬುಧವಾರ ಮುಸ್ಲಿಂ ವ್ಯಕ್ತಿಯ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ತಿರುವನಂತಪುರಂ: ಕಳೆದ ವರ್ಷ ಪ್ರಯಾಗ್‌ರಾಜ್ ಕುಂಭಮೇಳದಲ್ಲಿ ರುದ್ರಾಕ್ಷಿ ಮಾರುತ್ತಾ ಫೇಮಸ್ ಆಗಿದ್ದ ನೀಲಿ ಕಂಗಳ ಚೆಲುವೆ ಮೊನಾಲಿಸಾಗೆ ಕುಟುಂಬಸ್ಥರ ವಿರೋಧದ ನಡುವೆಯೂ ಬುಧವಾರ ಮುಸ್ಲಿಂ ವ್ಯಕ್ತಿಯ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಕುಂಭಮೇಳದ ಬಳಿಕ ಜಾಲತಾಣದಲ್ಲಿ ಹವಾ
ಕುಂಭಮೇಳದ ಬಳಿಕ ಜಾಲತಾಣದಲ್ಲಿ ಹವಾ ಸೃಷ್ಟಿಸಿದ್ದ ಮೊನಾಲಿಸಾ ಭೋಸ್ಲೆ, ಫರ್ಮಾನ್ ಖಾನ್ ಎಂಬ ಮುಸ್ಲಿಂ ಹುಡುಗನನ್ನು ಫೇಸ್‌ಬುಕ್‌ನಲ್ಲಿ ಪರಿಚಯ ಮಾಡಿಕೊಂಡು 6 ತಿಂಗಳಿನಿಂದ ಪ್ರೀತಿಸಿದ್ದರು. ಆದರೆ ಇದಕ್ಕೆ ಆಕೆಯ ತಂದೆ ವಿಜಯ್ ಸಿಂಗ್ ಭಾರೀ ವಿರೋಧ ವ್ಯಕ್ತಪಡಿಸಿದ್ದರು. ಹೀಗಾಗಿ ಜೋಡಿ ತವರು ರಾಜ್ಯ ಮಧ್ಯಪ್ರದೇಶದಿಂದ ಕೇರಳಕ್ಕೆ ಆಗಮಿಸಿ ಕೇರಳದ ಅರುಮನೂರ್ ದೇವಸ್ಥಾನದಲ್ಲಿ ವರಿಸಿದ್ದಾರೆ.
ಥಂಪನೂರು ಪೊಲೀಸ್ ಠಾಣೆಯಲ್ಲಿ ದೂರು
ಈ ನಡುವೆ, ಇಲ್ಲಿಯೂ ಮೊನಾಲಿಸಾ ತಂದೆ ಬಂದು ಮಗಳನ್ನು ಕರೆದುಕೊಂಡು ಹೋಗಲು ಯತ್ನಿಸಿದ್ದು, ಆ ಯತ್ನ ವಿಫಲವಾಗಿದೆ. ಇದೇ ವೇಳೆ ಮೊನಾಲಿಸಾ ಇಲ್ಲಿನ ಥಂಪನೂರು ಪೊಲೀಸ್ ಠಾಣೆಯಲ್ಲಿ ತಂದೆ ವಿರುದ್ಧ ಮದುವೆಗೆ ಬಲವಂತದ ಆರೋಪದಲ್ಲಿ ದೂರು ದಾಖಲಿಸಿದ್ದಾಳೆ.

