ಹೋಟೆಲಲ್ಲಿ ಮೌತ್‌ಫ್ರೆಷ್ನರ್‌ ತಿಂದ ಐವರಿಗೆ ರಕ್ತವಾಂತಿ

KannadaprabhaNewsNetwork |  
Published : Mar 05, 2024, 01:31 AM ISTUpdated : Mar 05, 2024, 11:07 AM IST
ರಕ್ತ ವಾಂತಿ | Kannada Prabha

ಸಾರಾಂಶ

ಹೋಟೆಲೊಂದರಲ್ಲಿ ಮೌತ್‌ ಫ್ರೆಷ್ನರ್‌ ತಿಂದು ಐವರು ರಕ್ತದ ವಾಂತಿ ಮಾಡಿಕೊಂಡ ಘಟನೆ ಹರ್ಯಾಣದ ಗುರುಗ್ರಾಮದಲ್ಲಿ ನಡೆದಿದೆ. ಘಟನೆ ಬಳಿಕ ಐವರೂ ಆಸ್ಪತ್ರೆಗೆ ದಾಖಲಾಗಿದೆ ಚಿಕಿತ್ಸೆ ಪಡೆಯುತ್ತಿದ್ದಾರೆ.

ನವದೆಹಲಿ: ಹೋಟೆಲೊಂದರಲ್ಲಿ ಮೌತ್‌ ಫ್ರೆಷ್ನರ್‌ ತಿಂದು ಐವರು ರಕ್ತದ ವಾಂತಿ ಮಾಡಿಕೊಂಡ ಘಟನೆ ಹರ್ಯಾಣದ ಗುರುಗ್ರಾಮದಲ್ಲಿ ನಡೆದಿದೆ. 

ಘಟನೆ ಬಳಿಕ ಐವರೂ ಆಸ್ಪತ್ರೆಗೆ ದಾಖಲಾಗಿದೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಂಕಿತ್‌ ಕುಮಾರ್‌ ದಂಪತಿ ಹಾಗೂ ಅವರ ಮೂವರು ಸ್ನೇಹಿತರು ಹೋಟೆಲಿಗೆ ತೆರಳಿ ಆಹಾರ ಸೇವಿಸಿದ ಬಳಿಕ ಮೌತ್‌ ಫ್ರೆಷ್ನರ್‌ ಪಡೆದುಕೊಂಡರು. 

ಅದನ್ನು ಬಾಯಿಗೆ ಹಾಕಿಕೊಂಡ ಬಳಿಕ ಏಕಾಏಕಿ ಬಾಯಿಯಲ್ಲಿ ಸುಡುವ ಅನುಭವವಾಗಿ ಅದನ್ನು ಹೊರಗೆ ಉಗುಳಿದರು. ಇದರ ಬೆನ್ನಲ್ಲೇ ಮತ್ತೊಬ್ಬರು ಬಾಯಿಂದ ರಕ್ತದ ವಾಂತಿ ಮಾಡಿದ್ದಾರೆ. 

ಇದಕ್ಕೆ ಪರಿಹಾರ ಹುಡುಕಲು ಬಾಯಿಗೆ ನೀರು ಹಾಕಿಕೊಂಡರು ಸಮಸ್ಯೆ ಬಗೆ ಹರಿಯದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದಾರೆ.

PREV

Recommended Stories

- ಬಿಜೆಪಿ ರಾಷ್ಟ್ರೀಯ ನಾಯಕ ಬಿ.ಎಲ್‌.ಸಂತೋಷ್‌ ಬಗ್ಗೆ ಅವಹೇಳನ ಪ್ರಕರಣಬುರುಡೆ ಕೇಸ್‌ ತಿಮರೋರಿ ಅರೆಸ್ಟ್‌- ಪೊಲೀಸರ ಜತೆಗೆ ಬೆಂಬಲಿಗರ ತೀವ್ರ ವಾಗ್ವಾದ । ಉಜಿರೆಯ ಮನೆಯಲ್ಲಿ ಹೈಡ್ರಾಮಾ- ಎಎಸ್ಪಿ ಕಾರಿಗೆ ವಾಹನ ಡಿಕ್ಕಿ: 3 ಜನ ಬಂಧನ । ತಿಮರೋಡಿ 14 ದಿನ ನ್ಯಾಯಾಂಗ ವಶ
ಬಂಧನದಿಂದ ಯೂಟ್ಯೂಬರ್‌ಸಮೀರ್‌ ಸ್ವಲ್ಪದರಲ್ಲೇ ಪಾರು- ಎಐ ವಿಡಿಯೋ ಬಳಸಿ ಆಕ್ಷೇಪಾರ್ಹ ವರದಿ ಪ್ರಕರಣ- ಪೊಲೀಸರಿಂದ ತಲಾಶ್‌ । ಅಷ್ಟರಲ್ಲಿ ಕೋರ್ಟ್‌ ಬೇಲ್‌