ಜಮ್ಮು ವಲಯದಲ್ಲಿ ಪಾಕಿಸ್ತಾನಿ ಉಗ್ರರ ಬೇಟೆಗೆ ಭಾರತದಿಂದ 500 ಪ್ಯಾರಾ ಕಮಾಂಡರ್‌ಗಳ ನಿಯೋಜನೆ

KannadaprabhaNewsNetwork |  
Published : Jul 21, 2024, 01:30 AM ISTUpdated : Jul 21, 2024, 04:38 AM IST
ಪ್ಯಾರಾ ಕಮಾಂಡೋ | Kannada Prabha

ಸಾರಾಂಶ

ಜಮ್ಮು ವಲಯದಲ್ಲಿ ಕಳೆದ ಕೆಲ ತಿಂಗಳಿನಿಂದ ಉಗ್ರ ಚಟುವಟಿಕೆ ಭಾರೀ ಪ್ರಮಾಣದಲ್ಲಿ ಹೆಚ್ಚಿರುವ ನಡುವೆಯೇ, ಭಾರೀ ಪ್ರಮಾಣದಲ್ಲಿ ತರಬೇತಿ ಪಡೆದ 50-55 ಪಾಕಿಸ್ತಾನ ಮೂಲದ ಉಗ್ರರು ಭಾರತ ಪ್ರವೇಶಿಸಿರಬಹುದು ಎಂಬ ಮಾಹಿತಿ ಭಾರತೀಯ ಸೇನೆಗೆ ಲಭ್ಯವಾಗಿದೆ.

ನವದೆಹಲಿ: ಜಮ್ಮು ವಲಯದಲ್ಲಿ ಕಳೆದ ಕೆಲ ತಿಂಗಳಿನಿಂದ ಉಗ್ರ ಚಟುವಟಿಕೆ ಭಾರೀ ಪ್ರಮಾಣದಲ್ಲಿ ಹೆಚ್ಚಿರುವ ನಡುವೆಯೇ, ಭಾರೀ ಪ್ರಮಾಣದಲ್ಲಿ ತರಬೇತಿ ಪಡೆದ 50-55 ಪಾಕಿಸ್ತಾನ ಮೂಲದ ಉಗ್ರರು ಭಾರತ ಪ್ರವೇಶಿಸಿರಬಹುದು ಎಂಬ ಮಾಹಿತಿ ಭಾರತೀಯ ಸೇನೆಗೆ ಲಭ್ಯವಾಗಿದೆ.

ಅಕ್ರಮವಾಗಿ ಗಡಿ ನುಸುಳಿ ಬಂದಿರುವ ಈ ಉಗ್ರರು ಜಮ್ಮವಿನ ಅರಣ್ಯ ಪ್ರದೇಶದಲ್ಲಿ ಅಡಗಿದ್ದು, ಸ್ಥಳೀಯರ ನೆರವಿನೊಂದಿಗೆ ಕಣಿವೆ ರಾಜ್ಯದಲ್ಲಿ ಮತ್ತೆ ಉಗ್ರ ಚಟುವಟಿಕೆಗೆ ಉತ್ತೇಜನ ನೀಡಲು ಯತ್ನಿಸುತ್ತಿದ್ದಾರೆ ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಪಾಕಿಸ್ತಾನದ ಉಗ್ರರನ್ನು ಸದೆಬಡೆಯಲು ಭಾರತೀಯ ಸೇನೆ 500 ಪ್ಯಾರಾ ಕಮಾಂಡರ್‌ಗಳನ್ನು ನೇಮಿಸಿದೆ. ಇದರ ಜೊತೆಗೆ ಗುಪ್ತಚರ ಇಲಾಖೆಯು ಜಮ್ಮುವಿನಲ್ಲಿ ಕಣ್ಗಾವಲು ತೀವ್ರಗೊಳಿಸಿದ್ದು, ಭಯೋತ್ಪಾದಕರಿಗೆ ಸಹಾಯವನ್ನು ಮಾಡುವ ಭೂಗತ ಕಾರ್ಮಿಕರು, ಮೂಲಭೂತ ಸೌಕರ್ಯಗಳನ್ನು ಒದಗಿಸುವವರ ಪತ್ತೆ ಕಾರ್ಯದಲ್ಲಿ ನಿರತವಾಗಿದೆ.

ಪಾಕಿಸ್ತಾನದ ಆಕ್ರಮಣಕ್ಕೆ ಪ್ರತ್ಯುತ್ತರವನ್ನು ನೀಡಲು ಸೇನೆ ಈಗಾಗಲೇ 3,500- 4000 ಹೆಚ್ಚುವರಿ ಸೈನಿಕರನ್ನು ಈ ಪ್ರದೇಶಕ್ಕೆ ಕಳುಹಿಸಿದೆ. ಭಯೋತ್ಪಾದಕರ ಅಡಗುತಾಣಗಳನ್ನು ಪತ್ತೆಹಚ್ಚಲು,ಅದನ್ನು ನಾಶಗೊಳಿಸಲು ಕಾರ್ಯತಂತ್ರಗಳನ್ನು ರೂಪಿಸಿದೆ.ಸೇನೆ ಈಗಾಗಲೇ ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದನೆ ನಿಗ್ರಹಿಸಲು ರೊಮಿಯೋ, ಡೆಲ್ಟಾ ಸೇರಿದಂತೆ ರಾಷ್ಟ್ರಿಯ ರೈಫಲ್ಸ್‌ ನ ಎರಡು ಪಡೆಗಳು ಹಾಗೂ ಇತರ ಭಯೋತ್ಪಾದಕ ಪಡೆಗಳನ್ನು ಹೊಂದಿದೆ

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಸಿದ್ದು ಆಪ್ತ 20 ಶಾಸಕರಿಗೆಜಾರಕಿಹೊಳಿ ಔತಣಕೂಟ : ಬೆಳಗಾವೀಲೂ ಗರಿಗೆದರಿದ ಬಣ ರಾಜಕೀಯ
ದಿಲ್ಲಿಯಲ್ಲಿ ಜ.1ರಿಂದ ಕೇಂದ್ರದ ಭಾರತ್‌ ಟ್ಯಾಕ್ಸಿ ಸಂಚಾರ