ನ್ಯಾ। ಸ್ವಾಮಿನಾಥನ್‌ ವಾಗ್ದಂಡನೆಗೆ 56 ನಿವೃತ್ತ ಜಡ್ಜ್‌ಗಳ ಕಿಡಿ

KannadaprabhaNewsNetwork |  
Published : Dec 13, 2025, 01:15 AM IST
Swaminathan

ಸಾರಾಂಶ

ಮದ್ರಾಸ್ ಹೈಕೋರ್ಟ್‌ ನ್ಯಾಯಾಧೀಶ ನ್ಯಾ। ಜಿ.ಆರ್. ಸ್ವಾಮಿನಾಥನ್ ಅವರನ್ನು ಪದಚ್ಯುತಗೊಳಿಸುವಂತೆ ಕೋರಿ 100 ಕ್ಕೂ ಹೆಚ್ಚು ಪ್ರತಿಪಕ್ಷ ಸಂಸದರು ಮಂಡಿಸಿದ ಮಹಾಭಿಯೋಗ ನಿರ್ಣಯಕ್ಕೆ ಶುಕ್ರವಾರ ಭಾರಿ ವಿರೋಧ ವ್ಯಕ್ತವಾಗಿದೆ.

 ನವದೆಹಲಿ : ಮದ್ರಾಸ್ ಹೈಕೋರ್ಟ್‌ ನ್ಯಾಯಾಧೀಶ ನ್ಯಾ। ಜಿ.ಆರ್. ಸ್ವಾಮಿನಾಥನ್ ಅವರನ್ನು ಪದಚ್ಯುತಗೊಳಿಸುವಂತೆ ಕೋರಿ 100 ಕ್ಕೂ ಹೆಚ್ಚು ಪ್ರತಿಪಕ್ಷ ಸಂಸದರು ಮಂಡಿಸಿದ ಮಹಾಭಿಯೋಗ ನಿರ್ಣಯಕ್ಕೆ ಶುಕ್ರವಾರ ಭಾರಿ ವಿರೋಧ ವ್ಯಕ್ತವಾಗಿದೆ.

ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಮತ್ತು ಹಲವಾರು ಹೈಕೋರ್ಟ್‌ಗಳ ಮಾಜಿ ಮುಖ್ಯ ನ್ಯಾಯಮೂರ್ತಿಗಳು ಸೇರಿದಂತೆ 56 ಮಾಜಿ ಜಡ್ಜ್‌ಗಳು ಈ ಕ್ರಮ ಖಂಡಿಸಿ ತೀಕ್ಷ್ಣ ಬಹಿರಂಗ ಪತ್ರ ಬರೆದಿದ್ದಾರೆ. ಅವರು ಇದನ್ನು ‘ನ್ಯಾಯಾಧೀಶರನ್ನು ದೂಷಿಸುವ ಒಂದು ನಿರ್ಲಜ್ಜ ಪ್ರಯತ್ನ‘ ಎಂದು ಕರೆದರು.

ಪತ್ರದಲ್ಲಿ ಕರ್ನಾಟಕ ಮೂಲದವರಾದ ಪಟನಾ ಹೈಕೋರ್ಟ್‌ ನಿವೃತ್ತ ಸಿಜೆ ಪಿ.ಬಿ. ಭಜಂತ್ರಿ, ಕರ್ನಾಟಕ ಹೈಕೋರ್ಟ್ ನಿವೃತ್ತ ಜಡ್ಜ್‌ಗಳಾದ ರಾಜೇಂದ್ರ ಬಾದಾಮಿಕರ್, ಶ್ರೀನಿವಾಸ ಹರೀಶ್ ಕುಮಾರ್, ಎ.ವಿ. ಚಂದ್ರಶೇಖರ್‌ ಹಾಗೂ ಪಿ. ಕೃಷ್ಣ ಭಟ್‌ ಕೂಡ ಇದ್ದಾರೆ.

ವಾಗ್ದಂಡನೆ ಏಕೆ?:

ತಮಿಳುನಾಡಿನ ತಿರುಪರಕುಂದ್ರಂ ಬೆಟ್ಟದಲ್ಲಿ ಸುಬ್ರಹ್ಮಣ್ಯ ಸ್ವಾಮಿ ದೇಗುಲ ಹಾಗೂ ಮುಸ್ಲಿಂ ದರ್ಗಾ ಇವೆ. ಆದರೆ ಬೆಟ್ಟ ದೇವಸ್ಥಾನಕ್ಕೆ ಸೇರಿದ್ದಾದ ಕಾರಣ ದರ್ಗಾ ಪಕ್ಕವೂ ಕಾರ್ತಿಕ ದೀಪ ಹಚ್ಚಬಹುದು ಎಂದು ನ್ಯಾ। ಸ್ವಾಮಿನಾಥನ್‌ ತೀರ್ಪು ನೀಡಿದ್ದರು. ಇದು ಸಾಮರಸ್ಯಕ್ಕೆ ಧಕ್ಕೆ ತರುವ ಆದೇಶ ಎಂದು ಹೇಳಿ ತಮಿಳುನಾಡಿನ ಡಿಎಂಕೆ, ಕಾಂಗ್ರೆಸ್‌ ಸೇರಿ ಇಂಡಿಯಾ ಕೂಟದ ಸಂಸದರು ಜಡ್ಜ್‌ ವಿರುದ್ಧ ವಾಗ್ದಂಡನೆ ನಿರ್ಣಯ ಮಂಡಿಸಲು ನಿರ್ಧರಿಸಿದ್ದಾರೆ.

ಕಾಂಗ್ರೆಸ್‌ ಸಂಸದರ ಸಭೆಗೆ ಸತತ 3ನೇ ಬಾರಿ ತರೂರ್ ಗೈರು

ನವದೆಹಲಿ: ಶುಕ್ರವಾರ ರಾಹುಲ್ ಗಾಂಧಿ ಅಧ್ಯಕ್ಷತೆಯಲ್ಲಿ ನಡೆದ ಪಕ್ಷದ ಲೋಕಸಭಾ ಸಂಸದರ ಸಭೆಗೆ ಹಿರಿಯ ಸಂಸದ ಶಶಿ ತರೂರ್ ಗೈರುಹಾಜರಾಗಿದ್ದರು. ಇದು ಅವರು ಸತತವಾಗಿ ಗೈರು ಹಾಜರಾಗುತ್ತಿರುವ ಕಾಂಗ್ರೆಸ್ ಸಂಸದರ 3ನೇ ಸಭೆ ಆಗಿದೆ. ಅಲ್ಲದೆ, ಪಕ್ಷದಲ್ಲಿ ಅವರು ಮುಂದುವರಿಯುವರೆ ಎಂಬ ಪ್ರಶ್ನೆಯನ್ನು ಇದು ಹುಟ್ಟುಹಾಕಿದೆ.

ಗೈರಿಗೆ ಅವರು ಕಾರಣ ತಿಳಿಸಿಲ್ಲ. ಆದರೂ ಅವರು ಈ ಬಗ್ಗೆ ನಾಯಕತ್ವಕ್ಕೆ ಮುಂಚಿತವಾಗಿ ಮಾಹಿತಿ ನೀಡಿದ್ದರು ಎಂದು ಪಕ್ಷದ ಮೂಲಗಳು ತಿಳಿಸಿವೆ.ಇತ್ತೀಚಿನಿಂದ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಆಡಳಿತಾರೂಢ ಬಿಜೆಪಿಗೆ ಅನುಕೂಲಕರವಾದ ಹೇಳಿಕೆ ನೀಡಿ ಪಕ್ಷದ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಸರ್ಕಾರ ಒತ್ತಡದಲ್ಲಿದೆ- ರಾಹುಲ್‌: 

ಈ ನಡುವೆ, ಲೋಕಸಭೆಯಲ್ಲಿ ನಡೆದ ವಂದೇಮಾತರಂ ಹಾಗೂ ಮತಪಟ್ಟಿ ಪರಿಷ್ಕರಣೆ ಚರ್ಚೆ ವೇಳೆ ಕಾಂಗ್ರೆಸ್ ಸಂಸದರು ಉತ್ತಮ ವಾಕ್ಪಟುತ್ವ ಪ್ರದರ್ಶಿಸಿ ಸರ್ಮಾರವನ್ನು ಇಕ್ಕಟ್ಟಿಗೆ ಸಿಲುಕಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸರ್ಕಾರ ಒತ್ತಡಕ್ಕೆ ಸಿಲುಕಿದ್ದು ಸ್ಪಷ್ಟವಾಗಿತ್ತು ಎಂದು ಸಂಸದರ ಸಭೆಯಲ್ಲಿ ವಿಪಕ್ಷ ನಾಯಕ ರಾಹುಲ್ ಗಾಂಧಿ ಶ್ಲಾಘಿಸಿದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಕೇಂದ್ರ ಸಚಿವ ಚೌಹಾಣ್‌ ಐಎಸ್‌ಐ ಟಾರ್ಗೆಟ್‌: ಭದ್ರತೆ ಹೆಚ್ಚಳ
ಆನಂದದ ಕ್ಷಣ ದುರಂತದ ಕ್ಷಣವಾಗಿ ಬದಲು!