- ನಿಮ್ಮಿಂದ ಭಾರತ-ಅಮೆರಿಕ ಸಂಬಂಧ ನಾಶ: ಸಿಡ್ನಿನವದೆಹಲಿ: ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನೀತಿಗಳಿಂದ ಅಮೆರಿಕ ಮತ್ತು ಭಾರತದ ಸಂಬಂಧ ಹಾಳಾಗುತ್ತಿದೆ ಎಂದು ಅಮೆರಿಕ ಸಂಸದೆ ಸಿಡ್ನಿ ಕಮ್ಲಾಗರ್ ಡೋವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಇದಕ್ಕೆ ಉದಾಹರಣೆಯಾಗಿ ಇತ್ತೀಚೆಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭಾರತ ಭೇಟಿ ವೇಳೆ, ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಪುಟಿನ್ ತೆಗೆದುಕೊಂಡು ಸೆಲ್ಫಿಯನ್ನು ಉದಾಹರಣೆಯಾಗಿ ಪ್ರದರ್ಶಿಸಿದ್ದಾರೆ.
ಜೊತೆಗೆ ಈ ವೇಳೆ ಮೋದಿ, ಪುಟಿನ್ ಸೆಲ್ಫಿ ತೋರಿಸಿದ ಅವರು, ‘ಇದು ಸಾವಿರ ಪದಗಳಿಗೆ ಸಮ. ಅಮೆರಿಕದ ಕಾರ್ಯತಂತ್ರದ ಪಾಲುದಾರರನ್ನು ವಿರೋಧಿಗಳ ತೆಕ್ಕೆಗೆ ತಳ್ಳುವ ಮೂಲಕ ನೀವು ನೊಬೆಲ್ ಶಾಂತಿ ಪ್ರಶಸ್ತಿ ಪಡೆಯುವುದಿಲ್ಲ’ ಎಂದು ನೇರವಾಗಿಯೇ ಟ್ರಂಪ್ ವಿರುದ್ಧ ಗುಡುಗಿದ್ದಾರೆ.
==ಭಾರತೀಯ ವಿದ್ಯಾರ್ಥಿಗಳ ಬಗ್ಗೆ ಅಧ್ಯಕ್ಷ ಟ್ರಂಪ್ ಮೆಚ್ಚುಗೆ ಮಾತು
ಭಾರತೀಯರು ತವರಿಗೆ ಮರಳುವ ಸ್ಥಿತಿ ನಾಚಿಕೆಗೇಡು
ಪ್ರತಿಭಾನಿತ್ವ ಉಳಿಸಿಕೊಳ್ಳಲು ‘ಗೋಲ್ಡ್ ಕಾರ್ಡ್’ ಜಾರಿ
ವಾಷಿಂಗ್ಟನ್: ಅಮೆರಿಕದಲ್ಲಿ ಭಾರತ, ಚೀನಾ ಸೇರಿದಂತೆ ವಿದೇಶಿ ವಿದ್ಯಾರ್ಥಿಗಳು ಇಲ್ಲೇ ಉಳಿದುಕೊಳ್ಳುವ ಅವಕಾಶ ಸಿಗದೆ, ಮರಳಿ ತಮ್ಮ ದೇಶಗಳಿಗೆ ಮರಳುತ್ತಿರುವುದು ನಾಚಿಕೆಗೇಡು. ಹೀಗಾಗಿ ಅವರನ್ನು ಇಲ್ಲಿಯೇ ಉಳಿಸಿಕೊಳ್ಳಲು, ‘ಗೋಲ್ಡ್ ಕಾರ್ಡ್’ ಜಾರಿಗೆ ತರಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.ಬುಧವಾರ (ಅಮೆರಿಕ ಕಾಲಮಾನ) ಇಲ್ಲಿ ಗೋಲ್ಡ್ ಕಾರ್ಡ್ ಬಿಡುಗಡೆ ಮಾಡಿ ಮಾತನಾಡಿದ ಅವರು,‘ಭಾರತ, ಚೀನಾ, ಫ್ರಾನ್ಸ್ ವಿದ್ಯಾರ್ಥಿಗಳು ಇಲ್ಲಿನ ದೊಡ್ಡ ದೊಡ್ಡ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಾರೆ. ಆದರೆ ಅವರಿಗೆ ಇಲ್ಲಿರಲು ವೀಸಾದಲ್ಲಿ ಯಾವುದೇ ಅವಕಾಶ ಇಲ್ಲದ ಕಾರಣ, ತಮ್ಮ ದೇಶಗಳಿಗೆ ಹಿಂದಿರುತ್ತಾರೆ. ಇದು ನಾಚಿಕೆಗೇಡು. ಆದರೆ ಹೊಸ ಗೋಲ್ಡ್ ಕಾರ್ಡ್ ಮೂಲಕ ಕಂಪನಿಗಳು ಅಂಥ ಪ್ರತಿಭೆಗಳನ್ನು ಇಲ್ಲಿಯೇ ಉಳಿಸಿಕೊಳ್ಳಬಹುದು. 2 ಮಿಲಿಯನ್ ಡಾಲರ್ (18 ಕೋಟಿ ರು.) ಪಾವತಿಸಿ ನೇಮಕ ಮಾಡಿಕೊಳ್ಳಬಹುದು. ಒಳ್ಳೆ ಪ್ರತಿಭೆಗಳು ಅಮೆರಿಕಕ್ಕೆ ಬರುವುದು ಈ ದೇಶಕ್ಕೆ ಉಡುಗೊರೆಯಿದ್ದಂತೆ’ ಎಂದರು.ಏನಿದು ಗೋಲ್ಡ್ ಕಾರ್ಡ್?
ಟ್ರಂಪ್ ಗೋಲ್ಡ್ ಕಾರ್ಡ್ ಎಂದು ಹೆಸರಿಲಾಗಿರುವ ಇದು, ಒಂದು ರೀತಿ ಗ್ರೀನ್ ಕಾರ್ಡ್ ಮಾದರಿಯದ್ದು. ಇದನ್ನು ಕಂಪನಿಗಳು 18 ಕೋಟಿ ರು. ಪಾವತಿಸಿ, ನೌಕರರ ಪರವಾಗಿ ಪಡೆದುಕೊಳ್ಳಬಹುದಾಗಿದೆ. ಇದರಿಂದ ವಿದೇಶಿ ಪ್ರಜೆಗಳು ಅಮೆರಿಕದಲ್ಲಿಯೇ ಉಳಿದುಕೊಂಡು, ಉದ್ಯೋಗ ಮಾಡಬಹುದಾಗಿದೆ. ವೈಯಕ್ತಿಕವಾಗಿ ಈ ಕಾರ್ಡ್ ಪಡೆಯಲು 1 ಕೋಟಿ ರು. ಶುಲ್ಕ ವಿಧಿಸಲಾಗಿದೆ.==
ಟ್ರಂಪ್ ತೆರಿಗೆ ಏಟಿನಿಂದ ಪ್ರತಿ ಅಮೆರಿಕನ್‌ಗೆ ₹1 ಲಕ್ಷ ಹೊರೆ!ರಾಷ್ಟ್ರೀಯತೆ ಹೆಸರಲ್ಲಿ ದೇಶವಾಸಿಗಳ ಜೇಬಿಗೆ ಬರೆಅಮೆರಿಕನ್ನರಿಂದ ₹14.35 ಲಕ್ಷ ಕೋಟಿ ಹೆಚ್ಚು ಖರ್ಚು
ವಾಷಿಂಗ್ಟನ್: ವ್ಯಾಪಾರ ಪಾಲುದಾರ ದೇಶಗಳಿಂದ ಆಮದಾಗುವ ವಸ್ತುಗಳ ಮೇಲೆ ಭಾರೀ ತೆರಿಗೆ ವಿಧಿಸಿ, ಆ ದುಡ್ಡನ್ನು ಅಮೆರಿಕನ್ನರಿಗೆ ಹಂಚುತ್ತೇನೆ ಎಂದು ಹೊರಟಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜನೆ, ಅಮೆರಿಕನ್ನರಿಗೂ ಪೆಟ್ಟು ನೀಡಿದೆ. ಟ್ರಂಪ್ ತೆರಿಗೆ ನೀತಿಯಂದ ಅಮೆರಿಕಕ್ಕೆ ಲಾಭವಾಗುವ ಬದಲು, ಅದು ಪ್ರತಿ ಅಮೆರಿಕನ್‌ಗೇ ಆರ್ಥಿಕ ಹೊರೆಯಾಗಿ ಪರಿಣಮಿಸಿದೆ ಎಂದು ಡೆಮಾಕ್ರಟ್ಸ್ ಸಂಸದರು ಆರೋಪಿಸಿದ್ದಾರೆ.ತೆರಿಗೆಯಿಂದ ಸಂಗ್ರಹವಾದ ಮೊತ್ತದ ಅಧಿಕೃತ ಅಂಕಿ ಅಂಶ ಮತ್ತು ಗೋಲ್ಡ್‌ಮನ್ ಸ್ಯಾಚ್ಸ್ ಡೇಟಾ ಆಧಾರದಲ್ಲಿ ಈ ವರದಿ ತಯಾರಿಸಲಾಗಿದೆ. ಇದರಲ್ಲಿ, ಈ ವರ್ಷದ ಫೆಬ್ರವರಿಯಿಂದ ನವೆಂಬರ್ ಅವಧಿಯಲ್ಲಿ ಅಮೆರಿಕನ್ನರು ಮೊದಲಿಗಿಂತ 14.35 ಲಕ್ಷ ಕೋಟಿ ರು. ಹೆಚ್ಚುವರಿ ಖರ್ಚು ಮಾಡಿದ್ದಾರೆ. ಇದರರ್ಥ, ಪ್ರತಿಯೊಬ್ಬ ಅಮೆರಿಕನ್ ಪ್ರಜೆ ಮೇಲೆ 108377 ರು. ಹೊರೆ ಬಿದ್ದಿದೆ.
ತೆರಿಗೆಯಿಂದ ಸಂಗ್ರಹವಾದ ಹಣವನ್ನು ಪ್ರತಿಯೊಬ್ಬರಿಗೆ 180629 ರು. ಎಂಬಂತೆ ಹಂಚುತ್ತೇನೆ ಎಂದು ಟ್ರಂಪ್ ಹೇಳುತ್ತಿರುವ ನಡುವೆಯೇ ಈ ವರದಿ ಹೊರಬಿದ್ದಿರುವುದು, ಅಮೆರಿಕನ್ನರ ಪ್ರತಿಕ್ರಿಯೆಯ ಬಗ್ಗೆ ಕುತೂಹಲ ಮೂಡಿಸಿದೆ.
==ಆಗಿದ್ದೇನು?:ವಿದೇಶಿ ವಸ್ತುಗಳ ಆಮದು ತಗ್ಗಿಸಿ, ರಫ್ತನ್ನು ಉತ್ತೇಜಿಸುವ ಸಲುವಾಗು ಟ್ರಂಪ್ ಪಾಲುದಾರ ದೇಶಗಳ ಮೇಲೆ ಭಾರೀ ತೆರಿಗೆ ಹೇರಿದ್ದಾರೆ. ಈ ಮೂಲಕ ಅಮೆರಿಕದ ಕಂಪನಿಗಳು ಮತ್ತು ಜನರ ಹಿತರಕ್ಷಣೆಗೆ ಮುಂದಾಗಿದ್ದಾರೆ. ಇದರಿಂದ, ವರ್ಷಾರಂಭದಲ್ಲಿ ಸರಾಸರಿ ಶೇ.2.4ರಷ್ಟಿದ್ದ ತೆರಿಗೆ ಶೇ.16.8ರಷ್ಟಾಗಿದೆ. ಪರಿಣಾಮವಾಗಿ, ಅಮೆರಿಕದಲ್ಲಿ ವಿದೇಶಿ ವಸ್ತುಗಳು ದುಬಾರಿಯಾಗಿವೆ. ಬಟ್ಟೆ, ಎಲೆಕ್ಟ್ರಾನಿಕ್ಸ್, ಆಟಿಕೆ, ಆಹಾರದಂತಹ ವಸ್ತುಗಳಿಗೆ ಅಮೆರಿಕನ್ನರು ಅನಿವಾರ್ಯವಾಗಿ ಹೆಚ್ಚು ಪಾವತಿಸಬೇಕಾಗಿದೆ.