ಸಂಸತ್ ಆವರಣದಲ್ಲಿ ಟಿಎಂಸಿ ಸಂಸದರು ನಿಷೇಧಿತ ಇ-ಸಿಗರೆಟ್ ಸೇದಿ ನಿಯಮ ಉಲ್ಲಂಘನೆ ಮಾಡಿದ್ದಾರೆ ಎಂದು ಬಿಜೆಪಿ ಸಂಸದ ಅನುರಾಗ್ ಠಾಕೂರ್ ಗಂಭೀರ ಆರೋಪ ಮಾಡಿದ್ದಾರೆ.
ನವದೆಹಲಿ: ಸಂಸತ್ ಆವರಣದಲ್ಲಿ ಟಿಎಂಸಿ ಸಂಸದರು ನಿಷೇಧಿತ ಇ-ಸಿಗರೆಟ್ ಸೇದಿ ನಿಯಮ ಉಲ್ಲಂಘನೆ ಮಾಡಿದ್ದಾರೆ ಎಂದು ಬಿಜೆಪಿ ಸಂಸದ ಅನುರಾಗ್ ಠಾಕೂರ್ ಗಂಭೀರ ಆರೋಪ ಮಾಡಿದ್ದಾರೆ.
ಗುರುವಾರ ಲೋಕಸಭೆ ಕಲಾಪದ ವೇಳೆ ಸ್ಪೀಕರ್ ಓಂ ಬಿರ್ಲಾ ಅವರತ್ತ ದಿಟ್ಟಿಸಿ ಮಾತನಾಡಿದ ಠಾಕೂರ್, ‘2019ರಿಂದ ದೇಶದಲ್ಲಿ ಇ-ಸಿಗರೆಟ್ ನಿಷೇಧವಾಗಿದೆ. ಆದರೆ ನೀವು ಹೇಗೆ ಸಂಸತ್ ಒಳಗೆ ಇದಕ್ಕೆ ಅನುಮತಿ ಕೊಟ್ಟಿದ್ದೀರಿ?. ಹಲವು ದಿನಗಳಿಂದ ಟಿಎಂಸಿ ಸಂಸದರು ಸಂಸತ್ ಆವರಣದಲ್ಲಿಯೇ ಇ-ಸಿಗರೆಟ್ ಸೇದುತ್ತಿದ್ದಾರೆ. ಆದರೆ ಇದು ಯಾರಿಗೂ ತಿಳಿದಿಲ್ಲ. ನೀವು ಪರಿಶೀಲನೆಗೆ ಸೂಚಿಸಬೇಕು’ ಎಂದು ಆರೋಪಿಸಿದರು. ಈ ವೇಳೆ ಬಿರ್ಲಾ, ‘ನಿಯಮ ಎಲ್ಲರಿಗೂ ಒಂದೇ ಯಾರೂ ಇ-ಸಿಗರೆಟ್ ಸೇದುವುದಕ್ಕೆ ಅನುಮತಿಯಿಲ್ಲ. ಸಂಸದ ಠಾಕೂರ್ ಲಿಖಿತ ರೂಪದಲ್ಲಿ ದೂರು ಸಲ್ಲಿಸಿ, ಕ್ರಮ ಕೈಗೊಳ್ಳಲಾಗುವುದು’ ಎಂದು ಸೂಚಿಸಿದರು.
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.