- ಉಚ್ಚಾಟಿತ ಶಾಸಕ ಋತಬ್ರತಗೆ ವಿಪಕ್ಷ ನಾಯಕ ಮಾನ್ಯತೆ
- 80 ಶಾಸಕರಲ್ಲಿ ಋತಬ್ರತ ಬಲ 58 । ಹೀಗಾಗಿ ಅವರಿಗೆ ಮನ್ನಣೆ
- 28 ವರ್ಷದ ಇತಿಹಾಸದಲ್ಲೇ ಮೊದಲ ಬಾರಿ ದೀದಿ ಪಾರ್ಟಿ ಹೋಳು?ಪಿಟಿಐ ಕೋಲ್ಕತಾಪಶ್ಚಿಮ ಬಂಗಾಳದಲ್ಲಿ ಇತ್ತೀಚೆಗೆ ಅಧಿಕಾರ ಕಳೆದುಕೊಂಡ ಟಿಎಂಸಿಯೊಳಗಿನ ಬಂಡಾಯ ಬುಧವಾರ ನಿರ್ಣಾಯಕ ತಿರುವು ಪಡೆದುಕೊಂಡಿದ್ದು, ತನ್ನ 28 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ಬುಧವಾರ ಪಕ್ಷ ಬಹುತೇಕ ವಿಭಜನೆ ಆಗಿದೆ. ಪಕ್ಷದಿಂದ ಉಚ್ಚಾಟಿಸಲ್ಪಟ್ಟ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಅವರ ವಿರೋಧಿ ಶಾಸಕ ಋತಬ್ರತ ಬ್ಯಾನರ್ಜಿ ಅವರನ್ನು ವಿಧಾನಸಭೆ ಪ್ರತಿಪಕ್ಷ ನಾಯಕ ಎಂದು ಸ್ಪೀಕರ್ ರತೀಂದ್ರ ಬೋಸ್ ಮಾನ್ಯ ಮಾಡಿದ್ದಾರೆ.
ಬಂಡಾಯಕ್ಕೆ ಸಿಕ್ತು ಮಾನ್ಯತೆ:
ಆದರೆ ಇದರಿಂದ ಸಿಟ್ಟಿಗೆದ್ದ ಋತಬ್ರತ ಹಾಗೂ ಸಾಹಾ ಬುಧವಾರ ಬೆಳಗ್ಗೆ ಬಂಡಾಯ ಶಾಸಕರ ಸಭೆ ಆಯೋಜಿಸಿದ್ದರು. ಆಗ, ಟಿಎಂಸಿಯ ಅಧಿಕೃತ 80 ಶಾಸಕರ ಪೈಕಿ 58 ಶಾಸಕರು ಈ ಸಭೆಗೆ ಆಗಮಿಸಿ, ‘ಋತಬ್ರತ ಅವರೇ ನಮ್ಮ ನಾಯಕ. ಅವರಿಗೆ ವಿಪಕ್ಷ ನಾಯಕ ಎಂಬ ಮಾನ್ಯತೆ ನೀಡಬೇಕು. ನಮ್ಮದೇ ನಿಜವಾದ ಟಿಎಂಸಿ ಎಂದು ಸ್ಪೀಕರ್ ರತೀಂದ್ರ ಬೋಸ್ ಅವರಿಗೆ ಕೋರಿಕೆ ಸಲ್ಲಿಸಿದ್ದರು. ವಿಚಿತ್ರವೆಂದರೆ ಮಮತಾ ನಿಲುವಿನ ವಿರುದ್ಧ ಬಂಡೆದ್ದರೂ ಮಮತಾ ಬ್ಯಾನರ್ಜಿ ಅವರನ್ನೇ ತಮ್ಮ ಅಧ್ಯಕ್ಷೆ ಎಂದು ಸ್ಪೀಕರ್‌ಗೆ ನೀಡಿರುವ ಪತ್ರದಲ್ಲಿ ಬಂಡಾಯ ಶಾಸಕರು ಬರೆದಿದ್ದರು.ಇದೇ ವೇಳೆ ಶಾಸಕಾಂಗ ಪಕ್ಷದ ನಾಯಕರಾಗಿ ಋತಬ್ರತ ಬ್ಯಾನರ್ಜಿ ಅಲ್ಲದೆ, ಉಪ ನಾಯಕರಾಗಿ ಜಾವೇದ್ ಖಾನ್, ಸಂದೀಪನ್ ಸಾಹಾ ಮತ್ತು ಶಿಯುಲಿ ಸಾಹಾ ಅವರನ್ನು ಮತ್ತು ಸಚೇತಕರಾಗಿ ರಘುನಾಥ್‌ಗಂಜ್ ಶಾಸಕ ಅಕ್ರುಝಮಾನ್ ಅವರನ್ನು ಸಭೆ ಆಯ್ಕೆ ಮಾಡಿತ್ತು.
ಮಮತಾ ನಮ್ಮ ಸಲಹೆಗಾರ್ತಿ:
ತನ್ನ ಎಲ್ಲ ಸಮಿತಿ ವಿಸರ್ಜಿಸಿದ ಟಿಎಂಸಿ
ಪಿಟಿಐ ಕೋಲ್ಕತಾ
ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್‌ನಲ್ಲಿ (ಟಿಎಂಸಿ) ಆಂತರಿಕ ಅಸಮಾಧಾನ ಭುಗಿಲೆದ್ದಿರುವ ನಡುವೆ, ಪಕ್ಷವು ತನ್ನ ಎಲ್ಲ ಸಾಂಸ್ಥಿಕ ಸಮಿತಿಗಳನ್ನು ಬುಧವಾರ ವಿಸರ್ಜಿಸಿದೆ ಹಾಗೂ ಎಲ್ಲ ಘಟಕಗಳ ಸಮಗ್ರ ಪುನಾರಚನೆ ಮಾಡುವುದಾಗಿ ಘೋಷಿಸಿದೆ.ಬಹುಸಂಖ್ಯೆಯಲ್ಲಿ ಟಿಎಂಸಿ ಶಾಸಕರು ಬಂಡಾಯ ಎದ್ದು ತಮಗೆ ಪ್ರತ್ಯೇಕ ಶಾಸಕಾಂಗ ಪಕ್ಷದ ಮಾನ್ಯತೆ ಕೋರಿ ವಿಧಾನಸಭಾ ಸ್ಪೀಕರ್ ಬಳಿ ಅರ್ಜಿ ಹಾಕಿದ್ದರು.ಇದರ ಬೆನ್ನಲ್ಲೇ ಟಿಎಂಸಿಯಲ್ಲಿ ಈ ನಾಟಕೀಯ ಬೆಳವಣಿಗೆ ನಡೆದಿದೆ.‘ಪಕ್ಷದ ಎಲ್ಲ ಸಮಿತಿಗಳು, ಮುಂಚೂಣಿ ಸಂಸ್ಥೆಗಳು ತಕ್ಷಣದಿಂದ ವಿಸರ್ಜಿಸಲು ನಿರ್ಧರಿಸಲಾಗಿದೆ. ಪ್ರತಿ ಹಂತದಲ್ಲೂ ಸಮಗ್ರ ಆತ್ಮಾವಲೋಕನ, ಕಾರ್ಯಕ್ಷಮತೆಯ ವಿಮರ್ಶೆ, ಸಾಂಸ್ಥಿಕ ಮೌಲ್ಯಮಾಪನ ನಡೆಸಲಾಗುತ್ತದೆ’ ಎಂದು ಪಕ್ಷ ಹೇಳಿದೆ.ಇತ್ತೀಚಿನ ವಿಧಾನಸಭೆ ಚುನಾವಣೆಯಲ್ಲಿ ಟಿಎಂಸಿ ಹೀನಾಯ ಸೋಲಿನ ಬಳಿಕ ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ಆಳವಾಗುತ್ತಿದೆ.