ರುಪಾಯಿಗಾಗಿ 75 ಟನ್‌ಚಿನ್ನ ಮಾರಿದ ಆರ್ಬಿಐ?- ವಿದೇಶಿ ವಿನಿಮಯ ಉಳಿಸಲು ಸೇಲ್‌- ರು.ಮೌಲ್ಯ ಕುಸಿತ ತಡೆಗೆ ಈ ಕ್ರಮ

KannadaprabhaNewsNetwork |  
Published : Jun 03, 2026, 03:00 AM IST
ಆರ್‌ಬಿಐ  | Kannada Prabha

ಸಾರಾಂಶ

ಮಧ್ಯಪ್ರಾಚ್ಯ ಸಂಘರ್ಷದಿಂದ ಉಂಟಾಗಿರುವ ರುಪಾಯಿ ಮೌಲ್ಯ ಕುಸಿತ ಹಾಗೂ ವಿದೇಶಿ ವಿನಿಮಯ ಕುಸಿತದ ಬಿಕ್ಕಟ್ಟಿನಿಂದ ಪಾರಾಗಲು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ತನ್ನ ಸಂಗ್ರಹದಿಂದ 1.14 ಲಕ್ಷ ಕೋಟಿ ಮೌಲ್ಯದ ಅಂದಾಜು 75 ಟನ್‌ ಚಿನ್ನ ಮಾರಾಟ ಮಾಡಿರುವ ಸಾಧ್ಯತೆ ಇದೆ.

ಮಧ್ಯಪ್ರಾಚ್ಯ ಬಿಕ್ಕಟ್ಟಿನಿಂದಾಗಿ ಡಾಲರ್‌ ಎದುರು ರು.ಮೌಲ್ಯ ಭಾರೀ ಕುಸಿತ

ಇಂತ ಸಂದರ್ಭ ಸಾಮಾನ್ಯವಾಗಿ ಡಾಲರ್‌ ಮಾರಾಟ ಮಾಡುವ ಆರ್‌ಬಿಐ

ಆದರೆ ಈ ಬಾರಿ ಡಾಲರ್ ಜೊತೆಗೆ ಭಾರೀ ಪ್ರಮಾಣದ ಚಿನ್ನವೂ ಮಾರಾಟ

ಈ ಮೂಲಕ ರುಪಾಯಿ ಮೌಲ್ಯ ಕುಸಿತ ತಡೆಯಲು ಭಾರೀ ಹರಸಾಹಸ

ನವದೆಹಲಿ: ಮಧ್ಯಪ್ರಾಚ್ಯ ಸಂಘರ್ಷದಿಂದ ಉಂಟಾಗಿರುವ ರುಪಾಯಿ ಮೌಲ್ಯ ಕುಸಿತ ಹಾಗೂ ವಿದೇಶಿ ವಿನಿಮಯ ಕುಸಿತದ ಬಿಕ್ಕಟ್ಟಿನಿಂದ ಪಾರಾಗಲು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ತನ್ನ ಸಂಗ್ರಹದಿಂದ 1.14 ಲಕ್ಷ ಕೋಟಿ ಮೌಲ್ಯದ ಅಂದಾಜು 75 ಟನ್‌ ಚಿನ್ನ ಮಾರಾಟ ಮಾಡಿರುವ ಸಾಧ್ಯತೆ ಇದೆ.

ಭಾರತವು ವಿಶ್ವದಲ್ಲೇ ಮೂರನೇ ಅತಿದೊಡ್ಡ ತೈಲ ಆಮದುದಾರ ದೇಶವಾಗಿದೆ. ಮಧ್ಯಪ್ರಾಚ್ಯ ಸಂಘರ್ಷದಿಂದಾಗಿ ಇಂಧನ ದರ ಏರಿಕೆ ಹಿನ್ನೆಲೆಯಲ್ಲಿ ಭಾರತದ ವಿದೇಶಿ ವಿನಿಮಯ ಸಂಗ್ರಹದ ಮೇಲೆ ಭಾರೀ ಹೊಡೆತ ಬಿದ್ದಿದ್ದು, ರುಪಾಯಿ ಮೌಲ್ಯ ಕೂಡ ತೀರಾ ಕುಸಿದಿದೆ. ಈ ಬಾಹ್ಯ ಆಘಾತಗಳಿಂದ ತಪ್ಪಿಸಿಕೊಂಡು ವಿದೇಶಿ ವಿನಿಮಯ ಸಂಗ್ರಹವನ್ನು ಬಲಪಡಿಸಲು ಆರ್‌ಬಿಐ ತನ್ನ ಸಂಗ್ರಹದಲ್ಲಿರು ಚಿನ್ನದಲ್ಲಿ ಒಂದಷ್ಟನ್ನು ಮಾರಾಟಕ್ಕೆ ಮುಂದಾಗಿರುವ ಸಾಧ್ಯತೆ ಇದೆ ಎಂದು ಬ್ಲೂಮ್‌ಬರ್ಗ್‌ ಎಕನಾಮಿಕ್ಸ್‌ ಸುದ್ದಿ ಪೋರ್ಟಲ್‌ ತಿಳಿಸಿದೆ.

ಬ್ಲೂಮ್‌ಬರ್ಗ್‌ ಎಕನಾಮಿಕ್ಸ್‌ ಸುದ್ದಿ ಸಂಸ್ಥೆ ಪ್ರಕಾರ ಮೇ ತಿಂಗಳ ಎರಡು ವಾರಗಳಲ್ಲಿ 1.14 ಲಕ್ಷ ಕೋಟಿ ರು. ಚಿನ್ನ ಮಾರಾಟ ಮಾಡಿದೆ. ಈ ಮೂಲಕ ಆರ್‌ಬಿಐ ತನ್ನ ವಿದೇಶಿ ವಿನಿಮಯ ಸಂಗ್ರಹಕ್ಕೆ 71,400 ಕೋಟಿ ರು.ನಷ್ಟು ಮೊತ್ತದ ಕರೆನ್ಸಿ ಸೇರ್ಪಡೆ ಮಾಡಿದೆ.

ಮಾರುಕಟ್ಟೆ ಪರಿಸ್ಥಿತಿಯು ತನ್ನ ಪರವಾಗಿರುವಾಗಲೆಲ್ಲ ಆರ್‌ಬಿಐ ತನ್ನ ವಿದೇಶಿ ವಿನಿಮಯ ಸಂಗ್ರಹ ಬಲಪಡಿಸಲು ಕ್ರಮ ಕೈಗೊಳ್ಳಲಿದೆ.

ಮಾರ್ಚ್‌ ಅಂತ್ಯದ ವರೆಗೆ ಆರ್‌ಬಿಐ 880.52 ಮೆಟ್ರಿಕ್‌ ಟನ್‌ನಷ್ಟು ಚಿನ್ನದ ಸಂಗ್ರಹ ಹೊಂದಿತ್ತು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಲಂಚದ ಹಣ ವಾಪಸ್‌ ನೀಡುತ್ತಿರುವ ಟಿಎಂಸಿ ನಾಯಕರು!- ಅಚ್ಚರಿ- ಪ.ಬಂಗಾಳದಲ್ಲಿ ಬಿಜೆಪಿ ಸರ್ಕಾರದ ಎಫೆಕ್ಟ್‌ । ಕಾನೂನು ಕ್ರಮ, ಜನರ ದಾಳಿ ಭೀತಿಗೆ ಹೆದರಿ ಹಣ ವಾಪಸ್‌- ಮಮತಾ ಸರ್ಕಾರದ ಅವಧಿಯಲ್ಲಿ ಸರ್ಕಾರಿ ಯೋಜನೆ ನೀಡಲು ಹಣ ಸುಲಿಗೆ ಮಾಡಿದ್ದ ಟಿಎಂಸಿ ಪುಡಾರಿಗಳು
ಬಿಜೆಪಿಗೆ ಗುಡ್‌ಬೈ: ವರಿಷ್ಠರ ಮುಂದೆ ಅಣ್ಣಾಮಲೈ ಇಂಗಿತ