ಮುಮ್ಮಟಿ, ಮಾಧವನ್‌ ಸೇರಿ 65 ಸಾಧಕರಿಗೆ ಪದ್ಮ ಪುರಸ್ಕಾರ

KannadaprabhaNewsNetwork |  
Published : Jun 24, 2026, 01:45 AM IST
ಗೌರವ  | Kannada Prabha

ಸಾರಾಂಶ

ಮಂಗಳವಾರ ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಖ್ಯಾತ ನಟರಾದ ಮುಮ್ಮಟಿ, ಮಾಧವನ್‌ ಸೇರಿದಂತೆ 65 ಸಾಧಕರಿಗೆ ಎರಡನೇ ಹಂತದಲ್ಲಿ ಪದ್ಮ ಪ್ರಶಸ್ತಿ ನೀಡಿ ಗೌರವಿಸಿದರು.

ನವದೆಹಲಿ: ಮಂಗಳವಾರ ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಖ್ಯಾತ ನಟರಾದ ಮುಮ್ಮಟಿ, ಮಾಧವನ್‌ ಸೇರಿದಂತೆ 65 ಸಾಧಕರಿಗೆ ಎರಡನೇ ಹಂತದಲ್ಲಿ ಪದ್ಮ ಪ್ರಶಸ್ತಿ ನೀಡಿ ಗೌರವಿಸಿದರು.

ಜ.26ರ ಗಣರಾಜ್ಯೋತ್ಸವದಂದು ಒಟ್ಟು 131 ಸಾಧಕರ ಹೆಸರನ್ನು ಪದ್ಮ ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು. ಮೇ 25 ರಂದು ಮೊದಲ ಹಂತದಲ್ಲಿ 66 ಸಾಧಕರಿಗೆ ನೀಡಲಾಗಿತ್ತು. ಉಳಿದ 65 ಮಂದಿಗೆ ಮಂಗಳವಾರ ನೀಡಲಾಗಿದ್ದು, ಮುರ್ಮು ಅವರು 2 ಪದ್ಮವಿಭೂಷಣ, 7 ಪದ್ಮಭೂಷಣ, 56 ಪದ್ಮಶ್ರೀ ಪ್ರಶಸ್ತಿಗಳನ್ನು ಪ್ರಧಾನ ಮಾಡಿದರು.

ಮಲಯಾಳಂನ ಖ್ಯಾತ ನಟ ಮುಮ್ಮುಟಿ, ಖ್ಯಾತ ಹಿನ್ನೆಲೆ ಗಾಯಕಿ ಅಲ್ಕಾ ಯಾಗ್ನಿಕ್, ಮಾಧವನ್‌, ಸುಪ್ರೀಂ ಮಾಜಿ ನ್ಯಾಯಮೂರ್ತಿ ಕೆ.ಟಿ.ಥಾಮಸ್‌, ಜೆಎಂಎಂ ಸಂಸ್ಥಾಪಕ ಶಿಬು ಸೊರೆನ್‌ ( ಮರಣೋತ್ತರ)ಪ್ರಶಸ್ತಿ ನೀಡಲಾಯಿತು.

ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ಉಪ ರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್‌, ಕೇಂದ್ರ ಸಚಿವ ಅಮಿತ್‌ ಶಾ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಪ್ರೀತಿಗೆ ಅಡ್ಡಿ: ಟ್ರೆಕ್‌ಗೆ ಹೋದಾಗ 400 ಅಡಿ ಕಂದಕಕ್ಕೆ ತಳ್ಳಿ ಭಾವಿ ಪತಿ ಕೊಲೆ
ಸಿಂದೂರದಲ್ಲಿ ಪಾಕ್‌ ಬಳಸಿದ್ದಚೀನಾ ನಿರ್ಮಿತ ಜೆ-10 ಜೆಟ್‌ಗೆಖರೀದಿಗೆ ಬಾಂಗ್ಲಾ ನಿರ್ಧಾರ