ಮೋದಿ ಸಂಪುಟದ ಸಚಿವರ ಸರಾಸರಿ ಆಸ್ತಿ ₹108 ಕೋಟಿ

KannadaprabhaNewsNetwork | Published : Jun 12, 2024 12:37 AM

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ಸಂಪುಟದ 71 ನರಲ್ಲಿ 70 ಮಂದಿ ಕೋಟ್ಯಧಿಪತಿಗಳೇ ಇದ್ದಾರೆ. ಅವರ ಸರಾಸರಿ ಆಸ್ತಿ ಮೌಲ್ಯ 107.94 ಕೋಟಿ ರು. ಇದೆ ಎಂದು ಅಸೋಸಿಯೇಷನ್ ​​ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್‌) ವರದಿ ತಿಳಿಸಿದೆ.

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸಂಪುಟದ 71 ನರಲ್ಲಿ 70 ಮಂದಿ ಕೋಟ್ಯಧಿಪತಿಗಳೇ ಇದ್ದಾರೆ. ಅವರ ಸರಾಸರಿ ಆಸ್ತಿ ಮೌಲ್ಯ 107.94 ಕೋಟಿ ರು. ಇದೆ ಎಂದು ಅಸೋಸಿಯೇಷನ್ ​​ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್‌) ವರದಿ ತಿಳಿಸಿದೆ. ಇನ್ನು 70 ಜನರ ಪೈಕಿ 6 ಜನರು 100 ಕೋಟಿ ರು.ಗಿಂತ ಹೆಚ್ಚಿನ ಆಸ್ತಿ ಘೋಷಣೆ ಮಾಡಿಕೊಂಡಿದ್ದಾರೆ.

ಗ್ರಾಮೀಣಾಭಿವೃದ್ಧಿ ರಾಜ್ಯ ಸಚಿವ ಟಿಡಿಪಿಯ ಡಾ. ಚಂದ್ರಶೇಖರ್‌ ಪೆಮ್ಮಸಾನಿ ಅವರ ಆಸ್ತಿ 5598.65 ಕೋಟಿ ರು., ಅದೇ ರೀತಿ ಸಂವಹನ ಮತ್ತು ಈಶಾನ್ಯ ಪ್ರದೇಶ ಅಭಿವೃದ್ಧಿ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರ ಆಸ್ತಿ 424.75 ಕೋಟಿ ರು. ನಷ್ಟಿದೆ. ಹಾಗೆಯೇ ಕರ್ನಾಟಕದಿಂದ ಆಯ್ಕೆಯಾದ ಉಕ್ಕು ಮತ್ತು ಬೃಹತ್‌ ಕೈಗಾರಿಕೆ ಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರ ಆಸ್ತಿ 217.23 ಕೋಟಿ ರು. ನಷ್ಟಿದೆ ಎಂದು ವರದಿ ತಿಳಿಸಿದೆ.

==

ಮೋದಿ ಸಂಪುಟದ 28ಸಚಿವರ ವಿರುದ್ಧ ಕ್ರಿಮಿನಲ್‌ ಕೇಸು

ನವದೆಹಲಿ: ಮೂರನೇ ಬಾರಿ ಅಧಿಕಾರಕ್ಕೇರಿದ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಸಂಪುಟ ಸಭೆಯ 28 ಸಚಿವರ ವಿರುದ್ಧ ಕ್ರಿಮಿನಲ್‌ ಪ್ರಕರಣಗಳು ದಾಖಲಾಗಿವೆ ಎಂದು ಅಸೋಸಿಯೇಷನ್ ​​ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್‌) ವರದಿ ತಿಳಿಸಿದೆ. ಒಟ್ಟು 71 ಸಚಿವರಲ್ಲಿ ಶೇ. 39 ರಷ್ಟು ಮಂದಿ ವಿರುದ್ಧ ಕ್ರಿಮಿನಲ್‌ ಪ್ರಕರಣಗಳು ದಾಖಲಾಗಿವೆ. ಈ 28 ಸಚಿವರ ಪೈಕಿ 19 ಸಚಿವರ ವಿರುದ್ಧ ಗಂಭೀರ ಕ್ರಿಮಿನಲ್‌ ಪ್ರಕರಣಗಲಾದ ಕೊಲೆ ಯತ್ನ, ಮಹಿಳೆಯರ ವಿರುದ್ಧ ದೌರ್ಜನ್ಯ ಮತ್ತು ದ್ವೇಷ ಭಾಷಣದ ಮೇಲೆ ದೂರು ದಾಖಲಾಗಿವೆ. ಇದರಲ್ಲಿ ಇಬ್ಬರು ಸಚಿವರ ವಿರುದ್ಧ ಕೊಲೆಯತ್ನ ಪ್ರಕರಣ, 5 ಮಂದಿ ವಿರುದ್ಧ ಮಹಿಳೆಯರ ವಿರುದ್ಧ ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ.

Share this article