ಕೋಟಾ: ಕೋಚಿಂಗ್ ಹಬ್ ಖ್ಯಾತಿಯ ಕೋಟಾದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಸಾವಿಗೂ ಮುನ್ನ ಪೋಷಕರಿಗೆ ಬರೆದ ಪತ್ರದಲ್ಲಿ ‘ಅಪ್ಪ ನನ್ನನ್ನು ಕ್ಷಮಿಸಿ ಬಿಡು, ಈ ಬಾರಿಯೂ ನಾನು ನೀಟ್ ಪರೀಕ್ಷೆಯನ್ನು ಪಾಸ್ ಮಾಡಲು ಆಗಲಿಲ್ಲ.’ ಎಂದು ಬರೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದು ಈ ವರ್ಷದ 9ನೇ ಪ್ರಕರಣವಾಗಿದೆ. ಸೋಮವಾರವಷ್ಟೇ ಹರ್ಯಾಣ ಮೂಲದ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದ.