200 ವರ್ಷಗಳ ಬಳಿಕ ಪರಿವಾರದಲ್ಲಿ ಹೆಣ್ಣು ಮಗುವಿನ ಜನನ!

Published : Sep 03, 2026, 11:17 AM IST
Baby Girl

ಸಾರಾಂಶ

ಸುಮಾರು 200 ವರ್ಷಗಳ ಬಳಿಕ ಹೆಣ್ಣು ಮಗುವಿನ ಜನನವಾಗಿದ್ದು, ಆ ಕೂಸಿಗೆ ಭರ್ಜರಿ ಸ್ವಾಗತ ಸಿಕ್ಕಿದೆ. 4 ಪೀಳಿಗೆಗಳ ಬಳಿಕ ಮನೆಗೆ ಕಾಲಿಟ್ಟ ಮಹಾಲಕ್ಷ್ಮಿಯನ್ನು ತಾಯಿಯೊಂದಿಗೆ ರಥದಲ್ಲಿ ಕೂರಿಸಿ, ಡ್ರಮ್‌ ಬಾರಿಸುತ್ತಾ, ನೃತ್ಯ ಮಾಡುತ್ತಾ ಆಸ್ಪತ್ರೆಯಿಂದ ಮನೆಗೆ ಬರಮಾಡಿಕೊಳ್ಳಲಾಗಿದೆ.

ಬೀಡ್‌ (ಮಹಾರಾಷ್ಟ್ರ): ಇಲ್ಲಿನ ಪರಿವಾರವೊಂದರಲ್ಲಿ ಸುಮಾರು 200 ವರ್ಷಗಳ ಬಳಿಕ ಹೆಣ್ಣು ಮಗುವಿನ ಜನನವಾಗಿದ್ದು, ಆ ಕೂಸಿಗೆ ಭರ್ಜರಿ ಸ್ವಾಗತ ಸಿಕ್ಕಿದೆ. 4 ಪೀಳಿಗೆಗಳ ಬಳಿಕ ಮನೆಗೆ ಕಾಲಿಟ್ಟ ಮಹಾಲಕ್ಷ್ಮಿಯನ್ನು ತಾಯಿಯೊಂದಿಗೆ ರಥದಲ್ಲಿ ಕೂರಿಸಿ, ಡ್ರಮ್‌ ಬಾರಿಸುತ್ತಾ, ನೃತ್ಯ ಮಾಡುತ್ತಾ ಆಸ್ಪತ್ರೆಯಿಂದ ಮನೆಗೆ ಬರಮಾಡಿಕೊಳ್ಳಲಾಗಿದೆ.

ಕೂಸಿಗೆ ಗಾರ್ಗಿ ಎಂದು ಹೆಸರಿಡಲಾಗಿದೆ

ಈ ಕೂಸಿಗೆ ಗಾರ್ಗಿ ಎಂದು ಹೆಸರಿಡಲಾಗಿದೆ. ಮಗುವಿನ ಅಜ್ಜ ಲಿಂಬಾಜಿ ದಹಿಫಲೆ ಮಾತನಾಡಿ, ‘ಕುಟುಂಬದಲ್ಲಿ ಮಗಳೊಬ್ಬಳು ಇರುವುದು ದೊಡ್ಡ ಭಾಗ್ಯ. ಮಗಳಿಲ್ಲವೆಂದ ಇಷ್ಟು ವರ್ಷದ ಕೊರಗು ಈಗ ನೀಗಿತು’ ಎಂದು ಭಾವುಕರಾಗಿದ್ದಾರೆ. ಅವರ ಪುತ್ರ ಮಾತನಾಡಿ, ‘ಎಲ್ಲರೂ ಮಗನನ್ನು ಬಯಸುತ್ತಾರೆ. ಆದರೆ ಮಗಳನ್ನು ಪಡೆಯುವ ಖುಷಿಯೇ ಅದ್ಭುತ. ನಮ್ಮ ಕಂದಮ್ಮನನ್ನು ಹೂವಿನಂತೆ ಬೆಳೆಸುತ್ತೇವೆ’ ಎಂದರು.

ಪರಿವಾರಕ್ಕೆ ಭಾರೀ ಮೆಚ್ಚುಗೆ

ಪುತ್ರಿಯರನ್ನು ಹೊರೆಯಂತೆ ಕಾಣುವವರ ನಡುವೆಯೂ ಇಂಥ ಮನಸ್ಥಿತಿಯನ್ನು ಪ್ರದರ್ಶಿಸಿದ ಪರಿವಾರಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಬೀಡ್‌ನಲ್ಲಿ ಅಕ್ರಮ ಹೆಣ್ಣು ಭ್ರೂಣ ಹತ್ಯೆ ಅಧಿಕವಾಗಿದ್ದು, ಮಕ್ಕಳ ಲಿಂಗಾನುಪಾತದಲ್ಲಿನ ತೀವ್ರ ಅಸಮತೋಲನವನ್ನು ಎದುರಿಸುತ್ತಿದೆ. 2011ರ ಜನಗಣತಿಯ ಪ್ರಕಾರ, ಪ್ರತಿ 1,000 ಗಂಡು ಮಕ್ಕಳಿಗೆ ಕೇವಲ 801 ಹೆಣ್ಣು ಮಕ್ಕಳು ಇದ್ದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಪಂಜಾಬ್‌ ಸಿಎಂ ಮಾನ್‌ ಕಚೇರಿಯಲ್ಲೇ ಭ್ರಷ್ಟಾಚಾರ!
8 ತಿಂಗಳ ಮಗುವಿನ ಡೈಪರ್‌ನಲ್ಲಿ ₹50 ಲಕ್ಷ ಚಿನ್ನ ಕಳ್ಳಸಾಗಣೆ ಯತ್ನ