ಮೂರು ದೇಶಗಳ ವಿದೇಶಾಂಗ ಸಚಿವರಿಗೆ ದೂರವಾಣಿ ಕರೆ
==
ವಾಷಿಂಗ್ಟನ್: ಕೃತಕ ಬುದ್ಧಿಮತ್ತೆ (ಎಐ) ವ್ಯವಸ್ಥೆ ಕಳವಳಗಳು ಹೆಚ್ಚುತ್ತಿರುವ ನಡುವೆಯೇ, ವ್ಯಕ್ತಿಯೊಬ್ಬ ಅಮೆರಿಕದ ವಿದೇಶಾಂಗ ಸಚಿವ ಮಾರ್ಕೊ ರೂಬಿಯೊ ಅವರ ಧ್ವನಿಯನ್ನು ನಕಲು ಮಾಡಿ, ವಿವಿಧ ದೇಶಗಳ ಮೂವರು ವಿದೇಶಾಂಗ ಸಚಿವರು ಮತ್ತು ಇಬ್ಬರು ಅಮೆರಿಕದ ಅಧಿಕಾರಿಗಳನ್ನು ಸಂಪರ್ಕಿಸಿದ ಆಘಾತಕಾರಿ ಘಟನೆ ತಡವಾಗಿ ಬೆಳಕಿಗೆ ಬಂದಿದೆ.‘ಜೂನ್ ಮಧ್ಯಭಾಗದಲ್ಲಿ ವ್ಯಕ್ತಿಯೊಬ್ಬ ಸಿಗ್ನಲ್ ಆ್ಯಪ್‌ನಲ್ಲಿ marco.rubio@state.gov. ಹೆಸರಿನಲ್ಲಿ ಅಮೆರಿಕದ ಸಚಿವರು, ರಾಜ್ಯಪಾಲರು ಹಾಗೂ ಸಂಸತ್ ಸದಸ್ಯರೊಬ್ಬರು ಸೇರಿದಂತೆ ಕನಿಷ್ಠ 5 ಜನರನ್ನು ಸಂಪರ್ಕಿಸಿದ್ದಾನೆ. ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಅವರ ಧ್ವನಿಯಲ್ಲಿ ಎಐ ರಚಿತ ನಕಲಿ ಧ್ವನಿಸಂದೇಶ ಕಳಿಸಿದ್ದಾನೆ. ಸರ್ಕಾರದ ಅಧಿಕೃತ ಖಾತೆಗಳಿಗೆ ಪ್ರವೇಶ ಪಡೆಯುವುದು ಆತನ ಉದ್ದೇಶವಾಗಿತ್ತು. ಸರ್ಕಾರ ಈ ಬಗ್ಗೆ ಎಚ್ಚೆತ್ತುಕೊಂಡಿದ್ದು, ಸೈಬರ್ ಭದ್ರತೆ ಹೆಚ್ಚಳಕ್ಕೆ ಅಗತ್ಯ ಕ್ರಮ ಕೈಗೊಳ್ಳುತ್ತಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇತ್ತೀಚೆಗಷ್ಟೇ ಅಧ್ಯಕ್ಷ ಟ್ರಂಪ್‌ರ ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಮೈಕ್ ವಾಲ್ಟ್ಜ್ ಸಿಗ್ನಲ್‌ನಲ್ಲಿ ಗ್ರೂಪ್ ಚಾಟ್ ನಡೆಸುತ್ತಿದ್ದಾಗ ಪತ್ರಕರ್ತನೊಬ್ಬ ಆಕಸ್ಮಿಕವಾಗಿ ಸೇರಿಸಲ್ಪಟ್ಟಿದ್ದು ಆತಂಕ ಸೃಷ್ಟಿಯಾಗಿತ್ತು.