ಪಂಜಾಬ್‌ನಿಂದ ಆಮ್‌ಆದ್ಮಿ ರಾಷ್ಟ್ರೀಯ ಸಂಚಾಲಕ ಅರವಿಂದ್‌ ಕೇಜ್ರಿವಾಲ್‌ ರಾಜ್ಯಸಭೆಗೆ ಪ್ರವೇಶ?

KannadaprabhaNewsNetwork |  
Published : Feb 27, 2025, 12:31 AM ISTUpdated : Feb 27, 2025, 04:29 AM IST
ಕೇಜ್ರಿವಾಲ್ | Kannada Prabha

ಸಾರಾಂಶ

ಇತ್ತೀಚಿನ ದೆಹಲಿ ವಿಧಾನಸಭಾ ಚುನಾವಣೆ ಸೋಲಿನ ಬೆನ್ನಲ್ಲೇ ಆಮ್‌ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್‌ ಕೇಜ್ರಿವಾಲ್‌, ಆಪ್‌ ಅಧಿಕಾರದಲ್ಲಿರುವ ಏಕೈಕ ರಾಜ್ಯ ಪಂಜಾಬ್‌ನಿಂದ ರಾಜ್ಯಸಭಾ ಹುದ್ದೆಗೆ ಪ್ರವೇಶ ಪಡೆಯಲಿದ್ದಾರೆ ಎಂಬ ಗುಸುಗುಸು ಎದ್ದಿದೆ.

ಚಂಡೀಗಢ: ಇತ್ತೀಚಿನ ದೆಹಲಿ ವಿಧಾನಸಭಾ ಚುನಾವಣೆ ಸೋಲಿನ ಬೆನ್ನಲ್ಲೇ ಆಮ್‌ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್‌ ಕೇಜ್ರಿವಾಲ್‌, ಆಪ್‌ ಅಧಿಕಾರದಲ್ಲಿರುವ ಏಕೈಕ ರಾಜ್ಯ ಪಂಜಾಬ್‌ನಿಂದ ರಾಜ್ಯಸಭಾ ಹುದ್ದೆಗೆ ಪ್ರವೇಶ ಪಡೆಯಲಿದ್ದಾರೆ ಎಂಬ ಗುಸುಗುಸು ಎದ್ದಿದೆ.

ಪಂಜಾಬ್‌ನ ಲೂಧಿಯಾನ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ, ಆಪ್‌ನ ಹಾಲಿ ರಾಜ್ಯಸಭಾ ಸದಸ್ಯ ಸಂಜೀವ್‌ ಅರೋರಾ ಅವರನ್ನು ಪಕ್ಷ ಅಭ್ಯರ್ಥಿಯಾಗಿ ಘೋಷಿಸಿದೆ. ಅದರ ಬೆನ್ನಲ್ಲೇ, ಅರೋರಾ ಸ್ಥಾನದಿಂದ ಕೇಜ್ರಿವಾಲ್‌ ರಾಜ್ಯಸಭೆಗೆ ಪ್ರವೇಶಿಸಲು ಸಜ್ಜಾಗಿದ್ದಾರೆ ಎಂದು ವಿಪಕ್ಷಗಳು ಭವಿಷ್ಯ ನುಡಿದಿವೆ.

ಸದ್ಯ ದೆಹಲಿಯಲ್ಲೂ ಆಪ್‌ ಅಧಿಕಾರದಲ್ಲಿಲ್ಲ. ಇದ್ದ ಸಿಎಂ ಹುದ್ದೆ, ಸರ್ಕಾರ ಎರಡೂ ಕೇಜ್ರಿ ಕೈತಪ್ಪಿದೆ. ಮತ್ತೊಂದೆಡೆ ಹಲವು ಆರೋಪಗಳು ಬೆನ್ನಿಗೇರಿವೆ. ಹೀಗಾಗಿ ಸಂಸದರಾದರೆ ಸಿಗುವ ಒಂದಷ್ಟು ಸವಲತ್ತು ಮತ್ತು ಅವಕಾಶಗಳನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ ಕೇಜ್ರಿವಾಲ್‌ ರಾಜ್ಯಸಭೆ ಪ್ರವೇಶ ಬಯಸಿದ್ದಾರೆ ಎನ್ನಲಾಗಿದೆ.

ಮದ್ಯ ಲೈಸೆನ್ಸ್‌ ಹಗರಣದಲ್ಲಿ ಬಂಧನಕ್ಕೊಳಗಾಗಿದ್ದ ಕೇಜ್ರಿವಾಲ್‌ ಹಾಲಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಈಗ ತೆಲಂಗಾಣದಲ್ಲೂ ದ್ವೇಷ ಭಾಷಣ ನಿಷೇಧ ಕಾಯ್ದೆ: ರೆಡ್ಡಿ
ಆನೆಗೆ ಡಿಕ್ಕಿ ಹೊಡೆದು ಹಳಿ ತಪ್ಪಿದ ರೈಲು, 7 ಗಜ ಬಲಿ