ಮದುವೆ ಎಂದೇಳಿ ₹9.35 ಕೋಟಿ ವಂಚನೆ : ನಟಿ ಆಶು ವಿರುದ್ಧ ಕೇಸ್‌

KannadaprabhaNewsNetwork |  
Published : Apr 28, 2026, 01:30 AM IST
Ashu

ಸಾರಾಂಶ

ಲಂಡನ್‌ ಮೂಲದ ಸಾಫ್ಟ್‌ವೇರ್‌ ಎಂಜಿನಿಯರ್‌ ಒಬ್ಬನನ್ನು ಮದುವೆಯಾಗುವುದಾಗಿ ನಂಬಿಸಿ, ₹9.35 ಕೋಟಿ ವಂಚಿಸಿದ ಆರೋಪದ ಮೇಲೆ ತೆಲುಗು ನಟಿ ಆಶು ರೆಡ್ಡಿ ಹಾಗೂ ಆಕೆಯ ಕುಟುಂಬಸ್ಥರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಹೈದರಾಬಾದ್‌: ಲಂಡನ್‌ ಮೂಲದ ಸಾಫ್ಟ್‌ವೇರ್‌ ಎಂಜಿನಿಯರ್‌ ಒಬ್ಬನನ್ನು ಮದುವೆಯಾಗುವುದಾಗಿ ನಂಬಿಸಿ, ₹9.35 ಕೋಟಿ ವಂಚಿಸಿದ ಆರೋಪದ ಮೇಲೆ ತೆಲುಗು ನಟಿ ಆಶು ರೆಡ್ಡಿ ಹಾಗೂ ಆಕೆಯ ಕುಟುಂಬಸ್ಥರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ವಂಚಿತ ಯುವಕ 2018ರಲ್ಲಿ ಭಾರತದಲ್ಲಿದ್ದಾಗ ನಟಿಯ ಪರಿಚಯವಾಗಿತ್ತು

ವಂಚಿತ ಯುವಕ 2018ರಲ್ಲಿ ಭಾರತದಲ್ಲಿದ್ದಾಗ ನಟಿಯ ಪರಿಚಯವಾಗಿತ್ತು. ಅದಾಗಿ ಎರಡೇ ತಿಂಗಳಿಗೆ, ಆತನನ್ನು ಮದುವೆಯಾಗುವುದಾಗಿ ನಟಿ ಮಾತು ಕೊಟ್ಟಿದ್ದಳು. ಅವನ ಮೊದಲ ವಿವಾಹದ ವಿಚ್ಛೇದನದಿಂದ ತನಗೇನೂ ಸಮಸ್ಯೆ ಇಲ್ಲ ಎಂದೂ ಹೇಳಿದ್ದಳು.  

ಆತನಿಂದ 9.35 ಕೋಟಿ ರು. ಪಡೆದಿದ್ದಳು

ಆ ಬಳಿಕ ತನ್ನ ಎಚ್‌1ಬಿ ವೀಸಾದಲ್ಲಿ ಸಮಸ್ಯೆಯಾಗಿದೆ, ಶೈಕ್ಷಣಿಕ ಸಾಲ ಬಾಕಿಯಿದೆ, ತಂದೆ ಆರ್ಥಿಕ ನೆರವನ್ನು ನಿಲ್ಲಿಸಿದ್ದಾರೆ ಇತ್ಯಾದಿಯಾಗಿ ನಂಬಿಸಿ ಆತನಿಂದ 9.35 ಕೋಟಿ ರು. ಪಡೆದಿದ್ದಳು. ನಂತರ ಕುಟುಂಬಸ್ಥರು ಸೇರಿ ಮದುವೆ ಮಾತುಕತೆ ನಡೆಸೋಣ ಎಂದಾಗ ಮದುವೆಗೆ ನಿರಾಕರಿಸಿದಳು. ಆ ಬಳಿಕ ಕೇಸ್‌ ಹಾಕುವುದಾಗಿ ಹೆದರಿಸಿ, ಪದೇ ಪದೇ ಮದುವೆ ಮುಂದೂಡುವುದು ಮಾಡುತ್ತಾ ಬಂದಳು ಎಂದು ಯುವಕನ ತಂದೆ ಆರೋಪಿಸಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಖಮೇನಿ ಅಂತ್ಯಕ್ರಿಯೆಗೆ ಪ್ರಧಾನಿ ಮೋದಿಗೆ ಆಹ್ವಾನ
6 ಬಂಡಾಯ ಸಂಸದರ ಅನರ್ಹತೆಗೆ ಠಾಕ್ರೆ ಶಿವಸೇನೆ ಮನವಿ