ಪಾಕಲ್ಲಿ ಭಾರತ ವಿರೋಧಿಗಳ ನಿಗೂಢ ಹತ್ಯೆ
ಎಲ್‌ಇಟಿಯ ಕಮಾಂಡರ್ ಆಗಿದ್ದ ಅಫ್ರಿದಿ ಮೇಲೆ ಅಪರಿಚಿತರು ಏಕಾಏಕಿ ಗುಂಡಿನ ದಾಳಿ ನಡೆಸಿದ್ದರಿಂದ ಆತನಿಗೆ ತಪ್ಪಿಸಿಕೊಳ್ಳಲು ಅವಕಾಶ ಸಿಗಲಿಲ್ಲ. ಅತ್ತ ಗುಂಡಿನ ಸದ್ದು ಕೇಳುತ್ತಿದ್ದಂತೆ ಸ್ಥಳೀಯರು ರಕ್ಷಣೆಗೆ ಧಾವಿಸಿದರೂ ಬಂದೂಕುಧಾರಿ ತಪ್ಪಿಸಿಕೊಂಡಿದ್ದಾನೆ ಹಾಗೂ ಅಫ್ರಿದಿ ಪ್ರಾಣ ಕಳೆದುಕೊಂಡಿದ್ದಾನೆ.
2023ರಿಂದಲೂ ಪಾಕಿಸ್ತಾನದಲ್ಲಿ ಉಗ್ರರನ್ನು ಅನಾಮಿಕರು ಈ ರೀತಿ ಗುಂಡಿಕ್ಕಿ ಹತ್ಯೆಗೈಯುತ್ತಿದ್ದಾರೆ. ಈ ವರ್ಷವೊಂದರಲ್ಲೇ ಲಷ್ಕರ್, ಮುಜಾಹಿದೀನ್, ಹಿಜ್ಬುಲ್ಲಾದಂತಹ ಸಂಘಟನೆಗಳಿಗೆ ಸೇರಿದ ಸುಮಾರು 30 ಭಯೋತ್ಪಾದಕರ ಹತ್ಯೆ ಮಾಡಲಾಗಿದೆ. ಆದರೆ ಇದರ ಹಿಂದಿರುವವರು ಯಾರು ಎಂಬುದು ಇಂದಿಗೂ ನಿಗೂಢ. ಪಾಕ್‌ನಲ್ಲಿ ಭಾರತಕ್ಕೆ ಬೇಕಾದ ಉಗ್ರರನ್ನು ಹತ್ಯೆಗೈಯುವ ಕಥೆ ಒಳಗೊಂಡಿರುವ ದುರಂಧರ್ ಚಿತ್ರ ಇತ್ತೀಚೆಗೆ ಬಿಡುಗಡೆ ಮಾಡಿ ದಾಖಲೆ ಕಲೆಕ್ಷನ್ ಮಾಡಿತ್ತು.