ಮುಂಬೈ: ಗರ್ಭಿಣಿಯಾಗಿರುವ ಖ್ಯಾತ ನಟಿ ದೀಪಿಕಾ ಪಡುಕೋಣೆ ತಮ್ಮ ಮೊದಲ ಮಗುವಿನ ಹೆರಿಗೆಯನ್ನು ಬೆಂಗಳೂರಿನಲ್ಲೇ ಮಾಡಿಸಿಕೊಳ್ಳುವ ಸಾಧ್ಯತೆ ಇದೆ.
ಈಗಾಗಲೇ ದೀಪಿಕಾ ಬೆಂಗಳೂರಿನಲ್ಲಿರುವ ತಮ್ಮ ಪೋಷಕರ ಮನೆಗೆ ಆಗಮಿಸಿದ್ದು, ಇಲ್ಲೇ ವಿಶ್ರಾಂತಿ ಪಡೆಯುತ್ತಿದ್ದಾರೆ.
ಸದ್ಯ ಯಾವುದೇ ಚಿತ್ರಗಳನ್ನು ಒಪ್ಪಿಕೊಳ್ಳದ ಹೆರಿಗೆ ಆಗುವವರೆಗೂ ಬೆಂಗಳೂರಿನಲ್ಲೇ ಇರಲಿದ್ದಾರೆ ಎಂದು ವರದಿಗಳು ತಿಳಿಸಿವೆ.
ಗುಜರಾತ್‌ನ ಜಾಮ್‌ನಗರ್‌ನಲ್ಲಿ ನಡೆದ ಅಂಬಾನಿ ಅವರ ಮಗನ ಮದುವೆಯಲ್ಲಿ ದೀಪಿಕಾ ಪಾಲ್ಗೊಂಡಿದ್ದರು.
ಅದಕ್ಕೂ ಕೆಲ ದಿನಗಳ ಮೊದಲಷ್ಟೇ ತಾವು ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಮಾಹಿತಿಯನ್ನು ದೀಪಿಕಾ-ರಣವೀರ್ ದಂಪತಿ ಹಂಚಿಕೊಂಡಿದ್ದರು.