ಹಿಮಾಚಲದ 6 ಕಾಂಗ್ರೆಸ್‌ ಶಾಸಕರ ಅನರ್ಹತೆ ತಡೆಗೆ ಸುಪ್ರೀಂ ನಕಾರ

KannadaprabhaNewsNetwork |  
Published : Mar 19, 2024, 12:51 AM IST
ಸುಪ್ರೀಂ ಕೋರ್ಟ್‌ | Kannada Prabha

ಸಾರಾಂಶ

ಹಿಮಾಚಲದ ಆರು ಶಾಸಕರ ಅನರ್ಹತೆಯನ್ನು ತೆರವು ಮಾಡಲು ಸುಪ್ರೀಂ ಕೋರ್ಟ್‌ ನಕಾರ ವ್ಯಕ್ತಪಡಿಸಿದೆ.

ನವದೆಹಲಿ: ಪಕ್ಷದ ವಿಪ್‌ ಉಲ್ಲಂಘಿಸಿದ ಕಾರಣಕ್ಕೆ ಹಿಮಾಚಲ ಪ್ರದೇಶ ವಿಧಾನಸಭೆ ಸ್ಪೀಕರ್‌ರಿಂದ ಅನರ್ಹತೆಗೆ ಒಳಗಾಗಿದ್ದ ಕಾಂಗ್ರೆಸ್‌ನ 6 ಶಾಸಕರ ಅನರ್ಹತೆಗೆ ತಡೆ ನೀಡಲು ಸುಪ್ರೀಂಕೋರ್ಟ್‌ ನಿರಾಕರಿಸಿದೆ.

ಈ ಕುರಿತು ವಿಚಾರಣೆ ನಡೆಸಿದ ನ್ಯಾ. ಸಂದೇಶ್‌ ಖನ್ನಾ ನೇತೃತ್ವದ ದ್ವಿಸದಸ್ಯ ಪೀಠ, ‘ಅನರ್ಹತೆ ಮಾಡಿದ ಕುರಿತು ಸ್ಪೀಕರ್‌ಗೆ ನೋಟಿಸ್‌ ನೀಡಬಹುದೇ ಹೊರತು ಅನರ್ಹತೆಗೆ ತಡೆ ನೀಡಲು ನಮಗೆ ಅಧಿಕಾರವಿಲ್ಲ.

ಅನರ್ಹ ಶಾಸಕರ ಕ್ಷೇತ್ರಗಳಿಗೆ ಚುನಾವಣೆ ಘೋಷಣೆಯಾಗಿರುವ ಕುರಿತು ಪರಿಶೀಲಿಸುವ ಅಗತ್ಯವಿದ್ದು, ಒಂದು ವಾರದೊಳಗೆ ಅದರ ಕುರಿತಾಗಿ ಒಂದು ಮೆಮೊ ಸಲ್ಲಿಸಿ’ ಎಂದು ಸುಪ್ರೀಂ ಕೋರ್ಟ್‌ ಅರ್ಜಿದಾರರಿಗೆ ತಿಳಿಸಿ ವಿಚಾರಣೆಯನ್ನು ಮೇ 6ಕ್ಕೆ ಮುಂದೂಡಿತು.

ಹಿಮಾಚಲ ಪ್ರದೇಶದ ಶಾಸಕರು ಅನರ್ಹರಾಗಿರುವ ಹಿನ್ನೆಲೆಯಲ್ಲಿ ತೆರವಾಗಿದ್ದ ಆರು ಕ್ಷೇತ್ರಗಳಿಗೆ ಜೂ.1ರಂದು ಉಪಚುನಾವಣೆ ಘೋಷಣೆಯಾಗಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಎತ್ತ ಸಾಗುತ್ತಿದೆ ರಾಷ್ಟ್ರದ ವಿಪಕ್ಷಗಳ ಮನೋಸ್ಥಿತಿ..?
ಅಂತರ್ಜಾತಿ ಮದ್ವೆ, ಮತಾಂತರ ಆದ್ರೂ ಜಾತಿ ಬದಲಿಲ್ಲ: ಹೈಕೋರ್ಟ್‌