ಮಲಯಾಳಂ ಚಿತ್ರ ನಿರ್ದೇಶಕ ರಂಜಿತ್‌ ವಿರುದ್ಧ ನಟಿ ಶ್ರೀ ಲೇಖಾ ಮಿತ್ರಾ ಅತ್ಯಾಚಾರ ದೂರು

KannadaprabhaNewsNetwork |  
Published : Aug 27, 2024, 01:41 AM ISTUpdated : Aug 27, 2024, 04:42 AM IST
ರಂಜಿತ್‌ | Kannada Prabha

ಸಾರಾಂಶ

ಇತ್ತೀಚೆಗೆ ಮಲಯಾಳಂ ಚಿತ್ರ ನಿರ್ದೇಶಕ ರಂಜಿತ್‌ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಹೊರಿಸಿದ್ದ ನಟಿ ಶ್ರೀ ಲೇಖಾ ಮಿತ್ರಾ ಕೊಚ್ಚಿ ಪೊಲೀಸ್ ಆಯುಕ್ತರಿಗೆ ಅಧಿಕೃತವಾಗಿ ದೂರು ಸಲ್ಲಿಸಿದ್ದಾರೆ.

ಕೊಚ್ಚಿ: ಇತ್ತೀಚೆಗೆ ಮಲಯಾಳಂ ಚಿತ್ರ ನಿರ್ದೇಶಕ ರಂಜಿತ್‌ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಹೊರಿಸಿದ್ದ ನಟಿ ಶ್ರೀಲೇಖಾ ಮಿತ್ರಾ ಕೊಚ್ಚಿ ಪೊಲೀಸ್ ಆಯುಕ್ತರಿಗೆ ಅಧಿಕೃತವಾಗಿ ದೂರು ಸಲ್ಲಿಸಿದ್ದಾರೆ. ಹೀಗಾಗಿ ರಂಜಿತ್‌ಗೆ ಬಂಧನ ಭೀತಿ ಆರಂಭವಾಗಿದೆ.

ರೇವತಿ ವಿರುದ್ಧ ಸಿದ್ದಿಕಿ ದೂರು: ತಮ್ಮ ಮೇಲೆ ಲೈಂಗಿಕ ಕಿರುಕುಳ ಆರೋಪ ಹೊರಿಸಿದ್ದ ರೇವತಿ ಸಂಪತ್‌ ವಿರುದ್ಧ ನಟ ಸಿದ್ದಿಕಿ ದೂರು ಸಲ್ಲಿಸಿದ್ದಾರೆ. ರೇವತಿ ಆರೋಪವೆಲ್ಲ ಸುಳ್ಳು. ಹಾಗೂ ತೇಜೋವಧೆ ಉದ್ದೇಶ ಹೊಂದಿವೆ ಎಂದು ಸಿದ್ದಿಕಿ ಹೇಳಿದ್ದಾರೆ.

‘ಸಿದ್ದಿಕಿ ಅಂಕಲ್‌ ನನ್ನ ಮೇಲೆ ಹಲವು ಬಾರಿ ಬಲವಂತದ ಸಂಭೋಗ ಮಾಡಿದ್ದರು. ಸಹರಿಸದಿದ್ದರೆ ಸಿನಿಮಾದಲ್ಲಿ ಚಾನ್ಸ್‌ ಸಿಗಲ್ಲ ಎಂದಿದ್ದರು’ ಎಂದು ರೇವತಿ ಭಾನುವಾರ ಆರೋಪಿಸಿದ್ದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಸ್ತ್ರೀಯರಿಗೆ ₹2500, ಮದ್ವೆಗೆ ಚಿನ್ನ, ಫ್ರೀ ಎಲ್‌ಪಿಜಿ; ವಿಜಯ್‌ ವಿಜಯ್‌ ಘೋಷಣೆ
ನಿಮ್ಮ ಮನೆಗೂ ತಟ್ಟಿತು ಇರಾನ್‌ ಯುದ್ಧದ ಬಿಸಿ ! ಅಡುಗೆ ಸಿಲಿಂಡರ್‌ ದರ ಭಾರೀ ದುಬಾರಿ