ರೈತರ ಅವಹೇಳನ : ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರಾಣಾವತ್‌ಗೆ ಬಿಜೆಪಿ ಛೀಮಾರಿ ಹಾಕಿ ತಾಕೀತು

KannadaprabhaNewsNetwork |  
Published : Aug 27, 2024, 01:38 AM ISTUpdated : Aug 27, 2024, 04:45 AM IST
ಕಂಗನಾ ರಾಣಾವತ್‌ | Kannada Prabha

ಸಾರಾಂಶ

ಸದಾ ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆ ನೀಡುವ ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರಾಣಾವತ್‌ ಈ ಬಾರಿ ರೈತರ ಪ್ರತಿಭಟನೆ ಕುರಿತು ಆಡಿದ ಮಾತು ಪಕ್ಷಕ್ಕೆ ಸಂಕಟ ತಂದಿದೆ. ಇದರ ಬೆನ್ನಲ್ಲೇ, ಕಂಗನಾಗೆ ಛೀಮಾರಿ ಹಾಕಿರುವ ಬಿಜೆಪಿ ಮುಂದೆ ಇಂತಹ ಹೇಳಿಕೆ ನೀಡದಂತೆ ತಾಕೀತು ಮಾಡಿದೆ.

ನವದೆಹಲಿ : ಸದಾ ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆ ನೀಡುವ ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರಾಣಾವತ್‌ ಈ ಬಾರಿ ರೈತರ ಪ್ರತಿಭಟನೆ ಕುರಿತು ಆಡಿದ ಮಾತು ಪಕ್ಷಕ್ಕೆ ಸಂಕಟ ತಂದಿದೆ. ಇದರ ಬೆನ್ನಲ್ಲೇ, ಕಂಗನಾಗೆ ಛೀಮಾರಿ ಹಾಕಿರುವ ಬಿಜೆಪಿ ಮುಂದೆ ಇಂತಹ ಹೇಳಿಕೆ ನೀಡದಂತೆ ತಾಕೀತು ಮಾಡಿದೆ.

ಮಾಧ್ಯಮವೊಂದಕ್ಕೆ ಭಾನುವಾರ ಸಂದರ್ಶನ ನೀಡಿದ್ದ ಕಂಗನಾ, ‘ಕೆಲವು ವರ್ಷಗಳ ಹಿಂದೆ 3 ಕೃಷಿ ಕಾಯ್ದೆಗಳ ವಿರುದ್ಧ ನಡೆದ ರೈತ ಪ್ರತಿಭಟನೆಗಳ ವೇಳೆ ದೇಶದಲ್ಲಿ ಮೋದಿ ಅವರ ಸಶಕ್ತ ಸರ್ಕಾರ ಇಲ್ಲದೇ ಹೋದರೆ ಬಾಂಗ್ಲಾದೇಶದಲ್ಲಿ ಉಂಟಾದ ಪರಿಸ್ಥಿತಿ ಭಾರತದಲ್ಲೂ ಆಗುತ್ತಿತ್ತು. ರೈತ ಪ್ರತಿಭಟನೆಗಳ ವೇಳೆ ಮೃತದೇಹಗಳು ನೇತಾಡುತ್ತಿದ್ದವು ಹಾಗೂ ಅತ್ಯಾಚಾರಗಳು ನಡೆದಿದ್ದವು’ ಎಂದಿದ್ದರು.

ಕಂಗನಾ ಹೇಳಿಕೆಯನ್ನು ರೈತ ಸಂಘಟನೆಗಳು ಹಾಗೂ ಕಾಂಗ್ರೆಸ್ ಪಕ್ಷ ಖಂಡಿಸಿವೆ ಹಾಗೂ ‘ರೈತರಿಗೆ ಬಿಜೆಪಿ ಮಾಡಿದ ಅವಮಾನ ಇದು’ ಎಂದು ಟೀಕಿಸಿವೆ. ಈ ನಡುವೆ ವಿಧಾನಸಭೆ ಚುನಾವಣೆಯ ಹೊಸ್ತಿಲ್ಲಿರುವ ಹರ್ಯಾಣದಲ್ಲಿ ಆಡಳಿತಾರೂಢ ಬಿಜೆಪಿಗೆ ಈ ಹೇಳಿಕೆ ಸಂಕಷ್ಟ ತಂದೊಡ್ಡಿದ್ದು, ರೈತರ ಪ್ರತಿಭಟನಾ ಕೇಂದ್ರ ಆಗಿರುವ ಈ ರಾಜ್ಯದಲ್ಲಿ ಪಕ್ಷಕ್ಕೆ ಮುಳುವಾಗುವ ಸಂಭವ ಇದೆ. ಹೀಗಾಗಿ ಕಂಗನಾ ಹೇಳಿಕೆಗೆ ಹರ್ಯಾಣ ಬಿಜೆಪಿಗರೇ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಕಂಗನಾ ಬಾಯಿಗೆ ವರಿಷ್ಠರ ಬೀಗ:

ಇದರ ಬೆನ್ನಲ್ಲೇ ಬಿಜೆಪಿ ವರಿಷ್ಠರು ನಟಿಯ ಮೇಲೆ ಗರಂ ಆಗಿದ್ದು ಇನ್ನೆಂದೂ ಪಕ್ಷದ ನೀತಿಗೆ ಸಂಬಂಧಿಸಿದ ಹೇಳಿಕೆ ನೀಡದಂತೆ ತಾಕೀತು ಮಾಡಿದ್ದಾರೆ.

‘ಕಂಗನಾ ಅವರ ಹೇಳಿಕೆ ಪಕ್ಷದ ಅಭಿಪ್ರಾಯವಲ್ಲ. ಅವರ ಹೇಳಿಕೆಗೆ ಬಿಜೆಪಿ ಅಸಮ್ಮತಿಯನ್ನು ವ್ಯಕ್ತಪಡಿಸುತ್ತದೆ. ಪಕ್ಷದ ನೀತಿ ವಿಷಯಗಳ ಕುರಿತು ಹೇಳಿಕೆ ನೀಡಲು ಕಂಗನಾ ಅವರಿಗೆ ಅನುಮತಿ ಇಲ್ಲ ಅಥವಾ ಅಧಿಕಾರ ಇಲ್ಲ. ಭವಿಷ್ಯದಲ್ಲಿ ಅಂತಹ ಯಾವುದೇ ಹೇಳಿಕೆಗಳನ್ನು ನೀಡದಂತೆ ಅವರಿಗೆ ನಿರ್ದೇಶನ ನೀಡಲಾಗಿದೆ’ ಎಂದು ಬಿಜೆಪಿ ಹೇಳಿಕೆ ನೀಡಿದೆ.

ಅಲ್ಲದೆ, ‘ಬಿಜೆಪಿ ‘ಸಬ್‌ ಕಾ ಸಾಥ್, ಸಬ್‌ ಕಾ ವಿಕಾಸ್, ಸಬ್‌ ಕಾ ವಿಶ್ವಾಸ ಮತ್ತು ಸಬ್‌ ಕಾ ಪ್ರಯಾಸ್’ ಮತ್ತು ಸಾಮಾಜಿಕ ಸಾಮರಸ್ಯದ ತತ್ವಗಳನ್ನು ಅನುಸರಿಸಲು ಬದ್ಧವಾಗಿದೆ’ ಎಂದು ಸ್ಪಷ್ಟಪಡಿಸಿದೆ.

ಕಂಗನಾ ಹೇಳಿದ್ದೇನು?

ಕೆಲವು ವರ್ಷಗಳ ಹಿಂದೆ 3 ಕೃಷಿ ಕಾಯ್ದೆಗಳ ವಿರುದ್ಧ ನಡೆದ ರೈತ ಪ್ರತಿಭಟನೆಗಳ ವೇಳೆ ದೇಶದಲ್ಲಿ ಮೋದಿ ಅವರ ಸಶಕ್ತ ಸರ್ಕಾರ ಇಲ್ಲದೇ ಹೋದರೆ ಬಾಂಗ್ಲಾದೇಶದಲ್ಲಿ ಉಂಟಾದ ಪರಿಸ್ಥಿತಿ ಭಾರತದಲ್ಲೂ ಆಗುತ್ತಿತ್ತು. ರೈತ ಪ್ರತಿಭಟನೆಗಳ ವೇಳೆ ಮೃತದೇಹಗಳು ನೇತಾಡುತ್ತಿದ್ದವು ಹಾಗೂ ಅತ್ಯಾಚಾರಗಳು ನಡೆದಿದ್ದವು

PREV

Recommended Stories

ಜಾತಿಗಣತಿ ‘ಧರ್ಮಕಾಲಂ’ನಲ್ಲಿ ಹಿಂದು ಎಂದೇ ಬರೆಸಲು ಕರೆ
ಮಾಲೂರು ಶಾಸಕ ನಂಜೇಗೌಡಆಯ್ಕೆ ರದ್ದತಿಗೆ ಹೈಕೋರ್ಟ್‌ ಆದೇಶ