ಭಾರತರತ್ನ ಪಡೆದ 50ನೇ ಸಾಧಕ ಅಡ್ವಾಣಿ

KannadaprabhaNewsNetwork | Updated : Feb 04 2024, 08:44 AM IST

1954ರಲ್ಲಿ ಸ್ಥಾಪಿಸಲಾದ ಅತ್ಯನ್ನತ ನಾಗರಿಕ ಗೌರವ ಭಾರತ ರತ್ನ ಪ್ರಶಸ್ತಿಗೆ ಭಾಜನರಾದ 50ನೇ ಸಾಧಕರಾಗಿ ಅಡ್ವಾಣಿ ಹೊರಹೊಮ್ಮಿದ್ದಾರೆ.

ನವದೆಹಲಿ: ಎಲ್‌. ಕೆ. ಅಡ್ವಾಣಿ ಅವರು ಭಾರತ ರತ್ನ ಪಡೆದ 50ನೇ ಸಾಧಕನಾಗಿ ಹೊರಹೊಮ್ಮಿದ್ದಾರೆ.

ಭಾರತರತ್ನ ಪ್ರಶಸ್ತಿಯನ್ನು ಇದುವರೆಗೆ 50 ಜನರಿಗೆ ನೀಡಲಾಗಿದ್ದು, ಅದರಲ್ಲಿ 15 ಜನರಿಗೆ ಮರಣೋತ್ತರವಾಗಿ ನೀಡಲಾಗಿದೆ. ಅಡ್ವಾಣಿ 50ನೇ ವ್ಯಕ್ತಿಯಾಗಿದ್ದಾರೆ.

ಭಾರತ ರತ್ನ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿದೆ. ಇದನ್ನು 1954ರಲ್ಲಿ ಸ್ಥಾಪಿಸಲಾಯಿತು. ಅಸಾಧಾರಣ ಸಾರ್ವಜನಿಕ ಸೇವೆ, ಕ್ರೀಡೆ, ಸಾಹಿತ್ಯ, ವಿಜ್ಞಾನ ಮತ್ತು ಕಲೆಯಂತಹ ಯಾವುದೇ ಕ್ಷೇತ್ರದಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಸಾಧನೆ ಮಾಡಿದ ಸಾಧಕರಿಗೆ ಇದನ್ನು ನೀಡಲಾಗುತ್ತದೆ.