ಹೀನ ಕೃತ್ಯ- ಹೆಸರು ಬಹಿರಂಗ ಧರ್ಮಬಾಹಿರ- ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲು ನಿರಾಕರಣೆ
ಮಹಿಳೆಯ ಹೆಸರು ಬಹಿರಂಗ ಧರ್ಮಬಾಹಿರ. ಹೀಗಾಗಿ ಅಧಿಕೃತ ದಾಖಲೆಗಳು, ಆಸ್ಪತ್ರೆ ಕಡತ ಮತ್ತು ಔಷಧ ಚೀಟಿಗಳಲ್ಲಿ ಮಹಿಳೆಯರ ಹೆಸರು ಬಳಸುವುದನ್ನು ನಿಲ್ಲಿಸಿ ಎಂದು ಬಾಲ್ಖ್ ಪ್ರಾಂತ್ಯದ ತಾಲಿಬಾನ್ ಅಧಿಕಾರಿಗಳು ಸೂಚಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.
ಮೂಲ ಹೆಸರು ಬಿಟ್ಟು ‘ಬೀಬಿ’ ಎಂದು ಕರೆಯುವುದು, ಮಹಿಳೆಯರನ್ನು ಅವಮಾನಕರವಾಗಿ ‘ಆಡು’ ಮತ್ತು ‘ಹಸು’ ಎಂದು ಕರೆಯುತ್ತಿರುವ ಬಗ್ಗೆ ಮಾನವ ಹಕ್ಕುಗಳ ಕಾರ್ಯಕರ್ತರು ಕಳವಳ ವ್ಯಕ್ತಪಡಿಸಿದ್ದಾರೆ. ಮಹಿಳೆಯರ ಗುರುತನ್ನು ಅಳಿಸುವ ಕ್ರಮ ಇದಾಗಿದೆ. ಆಸ್ಪತ್ರೆ ದಾಖಲೆಗಳು ಮತ್ತು ಔಷಧ ಚೀಟಿಗಳಲ್ಲಿ ನೈಜ ಹೆಸರು ಇಲ್ಲದಿರುವುದರಿಂದ ಚಿಕಿತ್ಸೆಯಲ್ಲಿ ತಪ್ಪುಗಳಾಗುವ ಅಪಾಯವಿದೆ ಎಂದು ತಾಲಿಬಾನಿ ಮಹಿಳೆಯರು ಮತ್ತು ಮಾನವ ಹಕ್ಕುಗಳ ಕಾರ್ಯಕರ್ತರು ಆತಂಕ ವ್ಯಕ್ತಪಡಿಸಿದ್ದಾರೆ.ಇದರ ಜೊತೆಗೆ ಕೆಲವು ಆಸ್ಪತ್ರೆಗಳಲ್ಲಿ ಮಹಿಳೆಯರಿಗೆ ಚಿಕಿತ್ಸೆ ನೀಡದಂತೆ, ಮಹಿಳೆಯರಿಗೆ ಪುರುಷರ ವೈದ್ಯರು ತಪಾಸಣೆ ಮಾಡಬಾರದು ಎಂದೂ ಉಗ್ರರು ಆದೇಶ ಹೊರಡಿಸಿದ್ದಾರೆ ಎಂದು ವರದಿಯಾಗಿದೆ.