ತೀವ್ರ ಬರದಿಂದ ಕಂಗೆಟ್ಟ ದೇಶಕ್ಕೆ ವರ್ಷಾಂತ್ಯದಲ್ಲಿ ಮಳೆಯ ಆಶಾಭಾವನೆ!

Published : Sep 14, 2026, 05:21 AM IST
monsoon

ಸಾರಾಂಶ

ಈ ವರ್ಷಾಂತ್ಯದ ಕೊನೆಯ ಮೂರು ತಿಂಗಳು ಅಂದರೆ ಅಕ್ಟೋಬರ್‌ನಿಂದ ಡಿಸೆಂಬರ್‌ ಅವಧಿಯಲ್ಲಿ ಹಿಂದೂ ಮಹಾಸಾಗರದ ಉತ್ತರ ಭಾಗದಲ್ಲಿ ಮೂರು ಭಾರೀ ಚಂಡಮಾರುತ ಸೃಷ್ಟಿಯಾಗಲಿವೆ ಎಂದು ಇಸ್ರೋ ವಿಜ್ಞಾನಿಗಳು ಮುನ್ಸೂಚನೆ ನೀಡಿದ್ದಾರೆ

ನವದೆಹಲಿ: ಈ ವರ್ಷಾಂತ್ಯದ ಕೊನೆಯ ಮೂರು ತಿಂಗಳು ಅಂದರೆ ಅಕ್ಟೋಬರ್‌ನಿಂದ ಡಿಸೆಂಬರ್‌ ಅವಧಿಯಲ್ಲಿ ಹಿಂದೂ ಮಹಾಸಾಗರದ ಉತ್ತರ ಭಾಗದಲ್ಲಿ ಮೂರು ಭಾರೀ ಚಂಡಮಾರುತ ಸೃಷ್ಟಿಯಾಗಲಿವೆ ಎಂದು ಇಸ್ರೋ ವಿಜ್ಞಾನಿಗಳು ಮುನ್ಸೂಚನೆ ನೀಡಿದ್ದಾರೆ. ಈ ಮೂಲಕ ಎಲ್‌ ನಿನೋ ಪ್ರಭಾವದಿಂದ ಕಂಗೆಟ್ಟಿರುವ ದೇಶಕ್ಕೆ ಕೊನೆಯ ಮೂರು ತಿಂಗಳಾದರೂ ಮಳೆ ಬರಬಹುದು ಎಂಬ ಆಶಾಭಾವನೆ ಉಂಟಾಗಿದೆ.

ಬಂಗಾಳ ಕೊಲ್ಲಿಯಲ್ಲಿ ಹೆಚ್ಚಿನ ಚಂಡಮಾರುತಗಳು ಸೃಷ್ಟಿ

ಮುಂಗಾರೋತ್ತರ (ಹಿಂಗಾರು) ಅವಧಿಯಲ್ಲಿ ಸಾಮಾನ್ಯವಾಗಿ ಅರಬ್ಬೀ ಸಮುದ್ರ ಮತ್ತು ಬಂಗಾಳ ಕೊಲ್ಲಿಯಲ್ಲಿ ಹೆಚ್ಚಿನ ಚಂಡಮಾರುತಗಳು ಸೃಷ್ಟಿಯಾಗುತ್ತವೆ. ಒಂದು ವೇಳೆ ಪೂರಕ ಪರಿಸ್ಥಿತಿ ನಿರ್ಮಾಣವಾದರೆ ಕರಾವಳಿ ಪ್ರದೇಶಗಳು ಭಾರೀ ಮಳೆಗೆ ಸಾಕ್ಷಿಯಾಗಲಿವೆ. ಸದ್ಯದ ಅಂದಾಜಿನ ಪ್ರಕಾರ ಚಂಡಮಾರುತದ ಪರಿಣಾಮ ಗುಜರಾತ್‌ ಮತ್ತು ಮಹಾರಾಷ್ಟ್ರದ ಕರಾವಳಿಯಲ್ಲಿ ಭಾರೀ ಮಳೆಯಾಗುವ ನಿರೀಕ್ಷೆ ಇದೆ. ಸದ್ಯ ಇದು ಅಂದಾಜು ಅಷ್ಟೆ, ಚಂಡಮಾರುತ ಎಲ್ಲಿ ಅಪ್ಪಳಿಸಲಿದೆ ಎಂಬುದು ಒಮ್ಮೆ ಅದರ ರಚನೆಯಾದ ಬಳಿಕವಷ್ಟೇ ಖಚಿತವಾಗಲಿದೆ.

ಹಲವು ರಾಜ್ಯಗಳಲ್ಲಿ ಆಣೆಕಟ್ಟುಗಳಿಗೆ ನೀರು

ಒಂದು ವೇಳೆ ಚಂಡಮಾರುತ ಕಾಣಿಸಿಕೊಂಡರೆ ಭಾರೀ ಬರ ಎದುರಿಸುತ್ತಿರುವ ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಆಣೆಕಟ್ಟುಗಳಿಗೆ ನೀರು ಹರಿದುಬರುವ ಆಶಾಭಾವನೆ ಇದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಪರಸ್ಪರ ಸಂಬಂಧ ಬೆಸೆದ ‘ಬ್ರಿಕ್ಸ್‌’ - ಜಾಗತಿಕ ದೇಶಗಳ ಒಗ್ಗೂಡಿಸಿದ ಮೋದಿ
2029ರ ವೇಳೆಗೆ 21 ಎನ್‌ಡಿಎ ರಾಜ್ಯದಲ್ಲಿ ಯುಸಿಸಿ: ಅಮಿತ್‌