ಅರುಣ್‌ರಿಂದ ಮತ್ತೊಂದು ಬಾಲರಾಮನ ಕೆತ್ತನೆ

KannadaprabhaNewsNetwork |  
Published : Mar 24, 2024, 01:33 AM ISTUpdated : Mar 24, 2024, 01:15 PM IST
Arun Yogiraj

ಸಾರಾಂಶ

ಐತಿಹಾಸಿಕ ರಾಮಮಂದಿರದ ಬಾಲರಾಮ ಮೂರ್ತಿಯನ್ನು ಕೆತ್ತಿದ ಶಿಲ್ಪಿ ಮೈಸೂರು ಮೂಲದ ಅರುಣ್‌ ಯೋಗಿರಾಜ್‌ ಅಯೋಧ್ಯೆಯಲ್ಲಿ ತಮ್ಮ ಬಿಡುವಿನ ವೇಳೆಯಲ್ಲಿ ಮತ್ತೊಂದು ಚಿಕ್ಕ ಬಾಲರಾಮನ ಮೂರ್ತಿಯನ್ನು ಕೆತ್ತಿರುವುದಾಗಿ ತಿಳಿಸಿದ್ದಾರೆ.

ಅಯೋಧ್ಯೆ: ಐತಿಹಾಸಿಕ ರಾಮಮಂದಿರದ ಬಾಲರಾಮ ಮೂರ್ತಿಯನ್ನು ಕೆತ್ತಿದ ಶಿಲ್ಪಿ ಮೈಸೂರು ಮೂಲದ ಅರುಣ್‌ ಯೋಗಿರಾಜ್‌ ಅಯೋಧ್ಯೆಯಲ್ಲಿ ತಮ್ಮ ಬಿಡುವಿನ ವೇಳೆಯಲ್ಲಿ ಮತ್ತೊಂದು ಚಿಕ್ಕ ಬಾಲರಾಮನ ಮೂರ್ತಿಯನ್ನು ಕೆತ್ತಿರುವುದಾಗಿ ತಿಳಿಸಿದ್ದಾರೆ. 

ಈ ಕುರಿತು ಅವರು ಟ್ವೀಟ್‌ ಮಾಡಿದ್ದು, ಅದರ ಜೊತೆಯಲ್ಲಿ ತಾವು ಬಾಲರಾಮನ ಮೂರ್ತರೂಪ ಕೊಟ್ಟಿರುವ ಶಿಲೆಯ ಜೊತೆಗೆ ನಿಂತು ತೆಗೆಸಿಕೊಂಡಿರುವ ಚಿತ್ರವನ್ನೂ ಹಂಚಿಕೊಂಡಿದ್ದಾರೆ. 

ಜನವರಿಯಲ್ಲಿ ಪ್ರಾಣಪ್ರತಿಷ್ಠಾಪನೆಯಾದ ಅಯೋಧ್ಯಾ ಬಾಲರಾಮನ ಮೂರ್ತಿಯನ್ನು ಅರುಣ್‌ ಯೋಗಿರಾಜ್‌ ಹೆಗ್ಗಡದೇವನಕೋಟೆಯಲ್ಲಿ ಲಭ್ಯವಿರುವ ಕಪ್ಪುಶಿಲೆಯನ್ನು ಬಳಸಿ ಕೆತ್ತನೆ ಮಾಡಿದ್ದರು. ಬಳಿಕ ಅದನ್ನು ಸಮಿತಿ ಮೂರು ಬಾಲರಾಮನ ಶಿಲೆಗಳಲ್ಲಿ ಆಯ್ಕೆ ಮಾಡಿತ್ತು.

PREV

Recommended Stories

* ಅಮೆಜಾನ್‌ ಕ್ಲೌಡ್ ಸಮಸ್ಯೆ: ವಿಶ್ವದಹಲವು ವೆಬ್‌ಸೈಟ್‌, ಆ್ಯಪ್‌ ಡೌನ್‌
ಬಲೂಚಿಸ್ತಾನ ಪ್ರತ್ಯೇಕ ದೇಶ : ಸಲ್ಮಾನ್‌ ಖಾನ್‌