ನವದೆಹಲಿ: ಭಾರತದ ಬಹುತೇಕ ನಗರಗಳ ವಾಯು ಗುಣಮಟ್ಟ ಅತಿ ಕಳಪೆಯಾಗಿರುವ ಹೊತ್ತಿನಲ್ಲಿ, ಇದೇ ಕಾರಣ ನೀಡಿ ಏಜ್ ರಿವರ್ಸಿಂಗ್‌ನ ಸಿಇಒ ಬ್ರಯಾನ್ ಜಾನ್ಸನ್ ಅವರು ಝೆರೋದಾ ಸಹಸಂಸ್ಥಾಪಕ ನಿಖಿಲ್ ಕಾಮತ್ ಅವರೊಂದಿಗಿನ ನ ಪಾಡ್‌ಕಾಸ್ಟ್‌ನ ನಡುವೆಯೇ ಎದ್ದು ಹೋದ ಘಟನೆ ನಡೆದಿದೆ.
ಅಮೆರಿಕಕ್ಕೆ ತೆರಳಿದ ಬಳಿಕ ಈ ಬಗ್ಗೆ ಮಾತನಾಡಿದ ಜಾನ್ಸನ್, ‘ಗಾಳಿಯ ಗುಣಮಟ್ಟ 130 ಇತ್ತು. ಒಂದು ದಿನ ಇದಕ್ಕೆ ಒಡ್ಡಿಕೊಂಡಿರುವುದು 3.4 ಸಿಗರೇಟ್ ಸೇದುವುದಕ್ಕೆ ಸಮ. ಮಾಲಿನ್ಯದಿಂದಾಗಿ ನನ್ನ ಚರ್ಮ ಒಡೆದಿದ್ದು, ಕಣ್ಣು ಹಾಗೂ ಗಂಟಲಲ್ಲಿ ಉರಿ ಕಾಣಿಸಿಕೊಂಡಿದೆ. ಆದರೆ ಇದನ್ನು ಭಾರತದಲ್ಲಿ ಸಾಮಾನ್ಯ ಎಂಬಂತೆ ಕಾಣಲಾಗುತ್ತಿದೆ’ ಎಂದಿದ್ದಾರೆ.
ಇದೇ ವೇಳೆ, ಅಮೆರಿಕದಲ್ಲಿ ಉಲ್ಬಣಿಸುತ್ತಿರುವ ಬೊಜ್ಜು ಸಮಸ್ಯೆಯ ಬಗ್ಗೆ ಮಾತಾಡುತ್ತಾ, ದೀರ್ಘಾವಧಿಯಲ್ಲಿ ಇದು ಮಾಲಿನ್ಯಕ್ಕಿಂತಲೂ ಹಾನಿಕರ ಎಂದಿದ್ದಾರೆ.ಅಕಾಡೆಮಿ ಪ್ರಶಸ್ತಿ ವಾಪಸ್ ತಡೆಗೆ ಹಲವು ಹೊಸ ಕ್ರಮ
ನವದೆಹಲಿ: ಅಕಾಡೆಮಿಗಳ ಪ್ರಶಸ್ತಿ ಘೋಷಣೆಗೂ ಮುನ್ನ ಪುರಸ್ಕೃತರ ಪೂರ್ವಾನುಮತಿ ಕಡ್ಡಾಯ ಮಾಡಬೇಕು ಎಂದು ಸಂಸದೀಯ ಸಮಿತಿಯೊಂದು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಇತ್ತೀಚಿನ ವರ್ಷಗಳಲ್ಲಿ ರಾಜಕೀಯ ಸೇರಿದಂತೆ ನಾನಾ ಕಾರಣಕ್ಕೆ ಪ್ರಶಸ್ತಿ ಮರಳಿಸುವ ಸಂಪ್ರದಾಯ ಹೆಚ್ಚುತ್ತಿದೆ. ಇದು ದೇಶಕ್ಕೆ ಮತ್ತು ಪ್ರಶಸ್ತಿಗೆ ಮಾಡುವ ಅವಮಾನ . ಹೀಗಾಗಿ ರಾಷ್ಟ್ರೀಯ ಅಕಾಡೆಮಿ ಪ್ರಶಸ್ತಿಯನ್ನು ನೀಡಲು ಬಯಸಿದರೆ ಅದಕ್ಕೆ ಪುರಸ್ಕೃತರ ಒಪ್ಪಿಗೆಯನ್ನು ಪಡೆಯಬೇಕು. ಒಪ್ಪಿಗೆ ಪಡೆಯುವ ವೇಳೆ ರಾಜಕೀಯ ಕಾರಣಕ್ಕೆ ಮರಳಿಸಲ್ಲ ಎಂದು ಭರವಸೆ ಪಡೆಯಬೇಕು, ಒಂದು ವೇಳೆ ಮರಳಿಸಿದರೆ ಮುಂದೆ ಯಾವುದೇ ಪ್ರಶಸ್ತಿಗೆ ಹೆಸರು ಪರಿಗಣಿಸಲ್ಲ ಎಂಬುದನ್ನು ಅವರ ಗಮನಕ್ಕೆ ತರಬೇಕು’ ಎಂದು ಸಮಿತಿ ಹೇಳಿದೆ.