ಎಐನಿಂದ ಹೊಸ ವೈರಸ್‌ ಸೃಷ್ಟಿ: ವರವೋ ಶಾಪವೋ?

Published : Aug 09, 2026, 01:06 PM IST
AI Virus

ಸಾರಾಂಶ

ಇಷ್ಟು ದಿನ ಫೋಟೋ, ವಿಡಿಯೋ, ಆ್ಯಪ್‌ಗಳ ಸೃಷ್ಟಿಗೆ ಬಳಕೆಯಾಗುತ್ತಿದ್ದ ಕೃತಕ ಬುದ್ಧಿಮತ್ತೆ ಇದೀಗ ವೈರಸ್‌ ಅನ್ನು ಸೃಷ್ಟಿಸಲೂ ಶಕ್ತವಾಗಿದೆ. ಸೈನ್ಸ್‌ ನಿಯತಕಾಲಿಕದಲ್ಲಿ ಈ ಸಂಶೋಧನೆಯ ವರದಿ ಪ್ರಕಟವಾಗಿದ್ದು, ಇದು ಮನುಕುಲಕ್ಕೆ ವರವೇ? ಶಾಪವೇ? ಎಂಬ ಚರ್ಚೆಯನ್ನು ಹುಟ್ಟುಹಾಕಿದೆ.

ನವದೆಹಲಿ: ಇಷ್ಟು ದಿನ ಫೋಟೋ, ವಿಡಿಯೋ, ಆ್ಯಪ್‌ಗಳ ಸೃಷ್ಟಿಗೆ ಬಳಕೆಯಾಗುತ್ತಿದ್ದ ಕೃತಕ ಬುದ್ಧಿಮತ್ತೆ ಇದೀಗ ವೈರಸ್‌ ಅನ್ನು ಸೃಷ್ಟಿಸಲೂ ಶಕ್ತವಾಗಿದೆ. ಸೈನ್ಸ್‌ ನಿಯತಕಾಲಿಕದಲ್ಲಿ ಈ ಸಂಶೋಧನೆಯ ವರದಿ ಪ್ರಕಟವಾಗಿದ್ದು, ಇದು ಮನುಕುಲಕ್ಕೆ ವರವೇ? ಶಾಪವೇ? ಎಂಬ ಚರ್ಚೆಯನ್ನು ಹುಟ್ಟುಹಾಕಿದೆ. ಸದ್ಯ ಸೃಷ್ಟಿಸಲಾಗಿರುವ ವೈರಸ್‌, ಬ್ಯಾಕ್ಟೀರಿಯಾಗಳ ಮೇಲಷ್ಟೇ ಪರಿಣಾಮ ಬೀರುವ ಕಾರಣ ಮಾನವರು, ಪ್ರಾಣಿಗಳು ಅಥವಾ ಗಿಡಗಳಿಗೆ ಯಾವುದೇ ಹಾನಿ ಮಾಡುವ ಅಪಾಯ ಇಲ್ಲ.

ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದ ಡಾ. ಬ್ರಿಯಾನ್ ಹೈ ಅವರ ತಂಡ ಎಐ ಬಳಸಿಕೊಂಡು ಫೇಜ್‌ಗಳನ್ನು (ಬ್ಯಾಕ್ಟೀರಿಯಾಗೆ ಸೋಂಕು ತಗುಲಿಸಿ, ಅದರೊಳಗೆ ಸೇರಿಕೊಂಡು ಗುಣಿಸಿ ಕೊಲ್ಲುವ ವೈರಸ್‌ನ ಒಂದು ವಿಧ) ಸೃಷ್ಟಿಸಿದೆ. ಈ ಪ್ರಕ್ರಿಯೆಗೆ ಬಳಸಲಾದ ಇವಿಒ1 ಮತ್ತು 2 ಮಾಡೆಲ್‌ಗಳು 20 ಲಕ್ಷ ಫೇಜ್‌ಗಳ ಅಧ್ಯಯನದ ಬಳಿಕ ಈ ಸಾಧನೆ ಮಾಡಿವೆ. ಬಳಿಕ ಎಐ ಸೃಷ್ಟಿತ ಜೆನೆಟಿಕ್ ಸೀಕ್ವೆನ್ಸಿಂಗ್‌ ಮೂಲಕ ಇವುಗಳ ಕ್ಷಮತೆಯನ್ನು ಪರೀಕ್ಷಿಸಲಾಗಿದ್ದು, ಹಲವು ಬ್ಯಾಕ್ಟೀರಿಯಾಗಳಿಗೆ ಸೋಂಕು ತಗುಲಿಸುವಲ್ಲಿ ಅವು ಯಶಸ್ವಿಯಾಗಿವೆ.

ವರವೇಕೆ?:

ಎಐ ಸೃಷ್ಟಿತ ವೈರಸ್‌ಗಳನ್ನು ಬಳಸಿಕೊಂಡು, ಸದ್ಯ ಲಭ್ಯವಿರುವ ಔಷಧಿ ಅಥವಾ ಚಿಕಿತ್ಸೆಗಳಿಗೆ ಬಗ್ಗದ ಬ್ಯಾಕ್ಟೀರಿಯಾಗಳನ್ನು ಬಗ್ಗುಬಡಿಯಬಹುದು. ಸಾಂಪ್ರದಾಯಿಕ ವಿಧಾನಗಳಿಗೆ ಹೋಲಿಸಿದರೆ ಎಐ ವೈರಸ್‌ಗಳ ಸೃಷ್ಟಿಯನ್ನು ತ್ವರಿತವಾಗಿ ಹಾಗೂ ಅಪಾರ ಪ್ರಮಾಣದಲ್ಲಿ ಮಾಡಬಹುದು.

ಆತಂಕವೇಕೆ?:

ಸದ್ಯ ಸೃಷ್ಟಿಸಲಾಗಿರುವುದು ಸೋಂಕುಗಳಿಗೆ ಮಾರಕವಾದ ಬ್ಯಾಕ್ಟೀರಿಯಾಗಳನ್ನು ಮಾತ್ರ. ಆದರೆ ಮುಂದಿನ ದಿನಗಳಲ್ಲಿ ಸಂಶೋಧನೆಗಳು ತೀವ್ರಗೊಂಡು ಇವುಗಳ ವ್ಯಾಪ್ತಿ ವಿಸ್ತರಿಸುವ ಸಾಧ್ಯತೆ ಇದ್ದೇ ಇದೆ. ಈ ಪ್ರಕ್ರಿಯೆಯಲ್ಲಿ, ಮಾನವರು ಅಥವಾ ಪ್ರಾಣಿಗಳಿಗೆ ಹಾನಿಯುಂಟುಮಾಡಬಲ್ಲ ವೈರಸ್‌ ಸೃಷ್ಟಿಯಾಗಬಹುದು. ಇವುಗಳನ್ನು ಸರಿಯಾಗಿ ನಿಯಂತ್ರಿಸದಿದ್ದಲ್ಲಿ ಅಥವಾ ದುಷ್ಟರ ಕೈಗೆ ಸಿಕ್ಕಲ್ಲಿ (ಕೊರೋನಾ ರೀತಿ) ಮಹಾಮಾರಿ ಸೃಷ್ಟಿಯಾಗುವುದು ಖಚಿತ. ಸರ್ವವ್ಯಾಪಿಯಾಗಿ ಸುಮಾರು 3 ವರ್ಷ ವಿಶ್ವವನ್ನು ಕಾಡಿದ್ದ ಕೋವಿಡ್‌-19 ವೈರಸ್‌ ಸೃಷ್ಟಿಯಾಗಿದ್ದು ಚೀನಾದ ಒಂದು ಪ್ರಯೋಗಾಲಯದಲ್ಲಿ ಎಂಬುದನ್ನು ಮರೆಯುವಂತಿಲ್ಲ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಭಾರತೀಯ ಯುವಶಕ್ತಿಗೆ ಸಾಟಿಯೇ ಇಲ್ಲ: ರಾಹುಲ್‌
ಎಚ್‌ಎಎಲ್ ಲ್ಲಿ ಉಪಗ್ರಹ ಬಳಸಿ ಕಾಪ್ಟರ್‌ ಲ್ಯಾಂಡ್‌