ಮುಂಬೈ: ರೇಡಿಯೋ ಸಿಲೋನ್‌ನಲ್ಲಿ ಪ್ರಸಾರವಾಗುತ್ತಿದ್ದ ಅತ್ಯಂತ ಜನಪ್ರಿಯ ‘ಬಿನಾಕಾ ಗೀತಮಾಲಾ’ ಕಾರ್ಯಕ್ರಮದ ನಿರೂಪದ ಅಮೀನ್ ಸಯಾನಿ (91) ಹೃದಯಾಘಾತದಿಂದ ಮಂಗಳವಾರ ಇಲ್ಲಿ ನಿಧನರಾದರು.
ಮಂಗಳವಾರ ಸಂಜೆ 6 ಗಂಟೆ ವೇಳೆಗೆ ಅಮೀನ್ ಅವರಿಗೆ ಹೃದಯಾಘಾತವಾಗಿತ್ತು. ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಸಂಜೆ 7 ಗಂಟೆ ವೇಳೆಗೆ ಅವರು ಇಹಲೋಕ ತ್ಯಜಿಸಿದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಅಮೀನ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿಯಾಗಿ ದೇಶಾದ್ಯಂತ ಇರುವ ಬಾನುಲಿ ವೀಕ್ಷಕರು ಕಂಬನಿ ಮಿಡಿದಿದ್ದಾರೆ.
ಅಪರೂಪದ ಕಲಾವಿದ: ಶ್ರೀಲಂಕಾ ಮೂಲದ ರೇಡಿಯೋ ಸಿಲೋನ್‌ನ ಹಿಂದಿ ಆವೃತ್ತಿಯಲ್ಲಿ ಪ್ರತಿ ವಾರ ಪ್ರಸಾರವಾಗುತ್ತಿದ್ದ ಬಿನಾಕಾ ಗೀತಮಾಲಾ ಎಂಬ ಹಿಂದಿ ಚಿತ್ರಗೀತೆಗಳ ಕಾರ್ಯಕ್ರಮವನ್ನು ಅಮೀನ್ ನಡೆಸಿಕೊಡುತ್ತಿದ್ದರು.
‘ನಮಸ್ತೇ ಬೆಹನೋ ಔರ್ ಬಾಯಿಯೋಂ, ಮೈ ಆಪ್ ಕಾ ದೋಸ್ತ್ ಅಮೀನ್ ಸಯಾನಿ ಬೋಲ್ ರಹಾ ಹೂಂ’ ಎಂಬ ಅವರ ಧ್ವನಿ ಅತ್ಯಂತ ಜನಪ್ರಿಯವಾಗಿತ್ತು. 1952ರಿಂದ 1988ರವರೆಗೂ ಅವರು ಈ ಕಾರ್ಯಕ್ರಮ ನಡೆಸಿಕೊಡುತ್ತಿದ್ದರು.