ಪ್ರಾಣಿಗಳ ರಕ್ಷಣೆಗಾಗಿ ರಿಲಯನ್ಸ್‌ ಪುನರ್ವಸತಿ ಕೇಂದ್ರ ಸ್ಥಾಪನೆ

KannadaprabhaNewsNetwork |  
Published : Feb 27, 2024, 01:36 AM IST
ಅನಂತ್‌ | Kannada Prabha

ಸಾರಾಂಶ

ಪ್ರಾಣಿಗಳ ರಕ್ಷಣೆಗಾಗಿ ರಿಲಯನ್ಸ್‌ ಪುನರ್ವಸತಿ ಕೇಂದ್ರ ಸ್ಥಾಪನೆ ಮಾಡಲಾಗಿದೆ ಎಂದು ಅನಂತ್‌ ಅಂಬಾನಿ ತಿಳಿಸಿದ್ದಾರೆ.

ಜಾಮ್‌ನಗರ: ಭಾರತ ಹಾಗೂ ವಿದೇಶಗಳಲ್ಲಿ ಗಾಯಗೊಂಡ, ಸಮಸ್ಯೆಗೆ ಈಡಾದ ಪ್ರಾಣಿಗಳ ರಕ್ಷಣೆ, ಆರೈಕೆ ಮತ್ತು ಚಿಕಿತ್ಸೆಗಾಗಿ ರಿಲಯನ್ಸ್ ಇಂಡಸ್ಟ್ರೀಸ್ ವಂತಾರ (ಸ್ಟಾರ್‌ ಆಫ್‌ ದ ಫಾರೆಸ್ಟ್‌) ಎಂಬ ಕಾರ್ಯಕ್ರಮವನ್ನು ಘೋಷಿಸಲಾಗಿದೆ.

ಇದಕ್ಕಾಗಿ ಗುಜರಾತ್ ನ ಜಾಮ್ ನಗರದಲ್ಲಿನ ರಿಲಯನ್ಸ್ ರಿಫೈನರಿ ಕೇಂದ್ರದಲ್ಲಿ 3000 ಎಕರೆಗಳ ಪುನರ್ವಸತಿ ಕೇಂದ್ರ ಸ್ಥಾಪಿಸಲಾಗಿದೆ.

ಈ ರೀತಿಯ ಕಾರ್ಯಕ್ರಮ ಜಗತ್ತಿನಲ್ಲೇ ಮೊದಲ ಬಾರಿಯಾಗಿದ್ದು, ಪರಿಣತರ ಜೊತೆಗೂಡಿ ಅರಣ್ಯದ ವಾತಾವರಣವನ್ನು ನಿರ್ಮಾಣ ಮಾಡಲಾಗಿದೆ.

ಚಿಕ್ಕ ವಯಸ್ಸಿನಲ್ಲಿ ಶುರುವಾದ ಈ ಪ್ರೀತಿ ಈಗ ಸಾಕಾರಗೊಂಡಿದೆ.

ಈ ಕೇಂದ್ರದಲ್ಲಿ ಒಟ್ಟಾರೆ ಒಂದು ಲಕ್ಷ ಚದರಡಿಯ ಆಸ್ಪತ್ರೆ, ವೈದ್ಯಕೀಯ ಸಂಶೋಧನಾ ಕೇಂದ್ರ ಇದ್ದು, ಎರಡು ಸಾವಿರದ ನೂರಕ್ಕೂ ಹೆಚ್ಚು ಸಿಬ್ಬಂದಿ ಇದ್ದಾರೆ ಎಂದು ರಿಲಯನ್ಸ್ ನಿರ್ದೇಶಕ ಅನಂತ್‌ ಅಂಬಾನಿ ಹೇಳಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಎತ್ತ ಸಾಗುತ್ತಿದೆ ರಾಷ್ಟ್ರದ ವಿಪಕ್ಷಗಳ ಮನೋಸ್ಥಿತಿ..?
ಅಂತರ್ಜಾತಿ ಮದ್ವೆ, ಮತಾಂತರ ಆದ್ರೂ ಜಾತಿ ಬದಲಿಲ್ಲ: ಹೈಕೋರ್ಟ್‌