ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಗೆ ಆಗ್ರಹಿಸಿ 18 ದಿನಗಳಿಂದ ಜಂತರ್‌ ಮಂತರ್‌ನಲ್ಲಿ ಉಪವಾಸ ನಡೆಸುತ್ತಿರುವ ಹೋರಾಟಗಾರ ಸೋನಂ ವಾಂಗ್ಚುಕ್‌ ಅವರಿಗೆ 2 ದಿನದಲ್ಲಿ ಸಾವಿನ ಅಪಾಯವಿದೆ.

ನವದೆಹಲಿ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಗೆ ಆಗ್ರಹಿಸಿ 18 ದಿನಗಳಿಂದ ಜಂತರ್‌ ಮಂತರ್‌ನಲ್ಲಿ ಉಪವಾಸ ನಡೆಸುತ್ತಿರುವ ಹೋರಾಟಗಾರ ಸೋನಂ ವಾಂಗ್ಚುಕ್‌ ಅವರಿಗೆ 2 ದಿನದಲ್ಲಿ ಸಾವಿನ ಅಪಾಯವಿದೆ. ಹೀಗಾಗಿ ತುರ್ತು ಮಧ್ಯಪ್ರವೇಶಿಸಿ ಬಲವಂತವಾಗಿ ಅವರಿಗೆ ಆಹಾರ ನೀಡಬೇಕು ಎಂದು ದೆಹಲಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ. ನ್ಯಾಯಾಲಯ ಗುರುವಾರ ವಿಚಾರಣೆ ನಡೆಸುವುದಾಗಿ ತಿಳಿಸಿದೆ.

8.9 ಕೇಜಿ ತೂಕ ಇಳಿದಿದೆ

ವಾಂಗ್ಚುಕ್‌ ಅವರ ಆರೋಗ್ಯದ ಬಗ್ಗೆ ವೈದ್ಯರು ನೀಡಿರುವ ಮಾಹಿತಿ ಪ್ರಕಾರ, ‘ಅವರು ತೀರಾ ಅಸ್ವಸ್ಥರಾಗಿದ್ದು ಉಪವಾಸ ಆರಂಭಗೊಂಡ ದಿನದಿಂದ ಇದುವರೆಗೆ 8.9 ಕೇಜಿ ತೂಕ ಇಳಿದಿದೆ. ಸದ್ಯ ಅವರ ತೂಕ 57.15 ಕೇಜಿ ಆಗಿದೆ. ಕಳೆದ 24 ಗಂಟೆಗಳಲ್ಲಿ 400 ಗ್ರಾಂಗಳಷ್ಟು ತೂಕ ಕಡಿಮೆಯಾಗಿದೆ. ಅವರು 24 ಗಂಟೆಗಳ ವೈದ್ಯಕೀಯ ನಿಗಾದಲ್ಲಿದ್ದಾರೆ’ ಎಂದಿದೆ.

 ಉಪವಾಸಕ್ಕೆ ಸಿಜೆಪಿ ಕರೆ: 

ಇನ್ನು ಜಂತರ್‌ಮಂತರ್‌ನಲ್ಲಿ ಉಪವಾಸ ಕೈಗೊಂಡಿರುವ ಸೋನಂ ವಾಂಗ್ಚುಕ್‌ ಅವರನ್ನು ಬೆಂಬಲಿಸಿ ಕಾಕ್ರೋಚ್‌ ಜನತಾ ಪಾರ್ಟಿ( ಸಿಜೆಪಿ) ಗುರುವಾರ ದೇಶಾದ್ಯಂತ ಒಂದು ದಿನದ ಉಪವಾಸ ನಡೆಸಲು ಬೆಂಬಲಿಗರಿಗೆ ಕರೆ ನೀಡಿದೆ.