ನರ್ಸಿಪಟ್ಣಂ: ಹಬ್ಬಕ್ಕೆ ಮನೆಗೆ ಬರುವ ಅಳಿಯನಿಗೆ ಅದ್ಧೂರಿ ಸ್ವಾಗತ-ಸತ್ಕಾರ ಸಾಮಾನ್ಯ. ಆದರೆ ಆಂಧ್ರಪ್ರದೇಶದಲ್ಲಿ ಹೊಸದಾಗಿ ಮದುವೆಯಾದ ಮಗಳು-ಅಳಿಯ ಮೊದಲ ಸಂಕ್ರಾಂತಿ ಆಚರಣೆಗೆಂದು ಮನೆಗೆ ಬಂದ ವೇಳೆ ಅವರಿಗೆ 290 ವಿವಿಧ ರೀತಿಯ ಖಾದ್ಯ ಸಿದ್ದಪಡಿಸಿದ ಉಣಬಡಿಸಲಾಗಿದೆ.
ಶಾಂತಿನಗರ ನಿವಾಸಿಗಳಾದ ರಮೇಶ್ ಕುಮಾರ್ ಮತ್ತು ಅವರ ಪತ್ನಿ ಕಲಾವತಿ, ತಮ್ಮ ಅಳಿಯ ಶ್ರೀಹರ್ಷ (29) ಅವರಿಗಾಗಿ ಗೋದಾವರಿ ಶೈಲಿಯಲ್ಲಿ 290 ಬಗೆಯ ತಿಂಡಿ-ತಿನಿಸು ತಯಾರಿಸಿದ್ದಾರೆ. ಇದನ್ನು ಕಂಡ ಅಳಿಯ ದಂಗಾಗಿದ್ದಾರೆ.
ಅತ್ತ ಗುಂಟೂರಿನ ತೆನಾಲಿಯಲ್ಲಿ ಶ್ರೀದತ್ತ ಎಂಬುವವರಿಗೆ ಅತ್ತೆ ಮನೆಯಲ್ಲಿ 158 ವಿಧದ ಭಕ್ಷ್ಯಗಳ ಭೋಜನ ಬಡಿಸಲಾಗಿತ್ತು. ಇದು ಆಂಧ್ರದ ಸಂಪ್ರದಾಯವಾಗಿದೆ.