ಚುನಾವಣೆ ಮೊದಲು ಇನ್ನೊಂದು ಪಹಲ್ಗಾಂ ದಾಳಿ?: ದೀದಿ ವಿವಾದ

KannadaprabhaNewsNetwork |  
Published : Apr 07, 2026, 03:15 AM IST
ಮಮತಾ | Kannada Prabha

ಸಾರಾಂಶ

‘ಚುನಾವಣೆಗೂ ಮುನ್ನ ಪಹಲ್ಗಾಂ ಮಾದರಿಯ ದಾಳಿ ನಡೆಸಲು ಬಿಜೆಪಿ ಯೋಜನೆ ರೂಪಿಸಿದೆಯೇ?’ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಸ್ಫೋಟಕ ಪ್ರಶ್ನೆಯನ್ನು ಕೇಳಿದ್ದಾರೆ.

ಖ್ವಾಜಾ ಬೆದರಿಕೆಗೆ ಮೋದಿ ಮೌನವೇಕೆ?

ಪ್ರಧಾನಿ ರಾಜೀನಾಮೆ ಕೊಡಬೇಕು: ಆಗ್ರಹ

ಅಲ್ಪಸಂಖ್ಯಾತರ ಮತ ಸೆಳೆವ ತಂತ್ರ: ಬಿಜೆಪಿ

ನವದೆಹಲಿ: ‘ಚುನಾವಣೆಗೂ ಮುನ್ನ ಪಹಲ್ಗಾಂ ಮಾದರಿಯ ದಾಳಿ ನಡೆಸಲು ಬಿಜೆಪಿ ಯೋಜನೆ ರೂಪಿಸಿದೆಯೇ?’ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಸ್ಫೋಟಕ ಪ್ರಶ್ನೆಯನ್ನು ಕೇಳಿದ್ದಾರೆ.

ಇದಕ್ಕೆ ಅಷ್ಟೇ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಬಿಜೆಪಿ, ದೀದಿ ನೇತೃತ್ವದ ರಾಜ್ಯಸರ್ಕಾರವನ್ನು ಹಿಂದೂ ವಿರೋಧಿ ಎಂದು ಕರೆದಿದ್ದು, ‘ಅಲ್ಪಸಂಖ್ಯಾತರ ಮತ ಸೆಳೆಯಲು ಇಂತಹ ಹೇಳಿಕೆ ನೀಡುತ್ತಿದ್ದಾರೆ’ ಎಂದು ಆರೋಪಿಸಿದೆ.

ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್‌ ಕೋಲ್ಕತಾದ ಮೇಲೆ ದಾಳಿ ಮಾಡುವುದಾಗಿ ಬೆದರಿಕೆ ಒಡ್ಡಿದ್ದನ್ನು ಉಲ್ಲೇಖಿಸಿದ ಮಮತಾ, ‘ಕೂಚ್‌ಬೆಹಾರ್‌ನಲ್ಲಿ ಪ್ರಚಾರ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಖ್ವಾಜಾರ ಹೇಳಿಕೆಗೆ ಪ್ರತಿಕ್ರಿಯೆಯನ್ನೇಕೆ ನೀಡಲಿಲ್ಲ? ಇನ್ನೊಂದು ಪಹಲ್ಗಾಂ ದಾಳಿ ನಡೆಸುವ ಯೋಜನೆಯಿದೆಯೇ? ಯಾರಾದರೂ ಕೋಲ್ಕತಾದ ಮೇಲೆ ದಾಳಿ ಮಾಡುವ ಬಗ್ಗೆ ಮಾತನಾಡಿದರೆ ಭಾರತೀಯರಾದ ನಾವದನ್ನು ಸಹಿಸೆವು. ಹಾಗಿರುವಾಗ ನೀವು ಸುಮ್ಮನೆ ಇರಲು ಹೇಗೆ ಸಾಧ್ಯ’ ಎಂದು ಕೇಳಿದ್ದಾರೆ. ಜತೆಗೆ ಮೋದಿ ರಾಜೀನಾಮೆಗೂ ಆಗ್ರಹಿಸಿದ್ದಾರೆ.ಬಿಜೆಪಿ ಪ್ರತಿಕ್ರಿಯೆ:

ಮಮತಾರ ಹೇಳಿಕೆಗೆ ಬಿಜೆಪಿ ವಕ್ತಾರ ಪ್ರದೀಪ್‌ ಭಂಡಾರಿ ಪ್ರತಿಕ್ರಿಯಿಸಿದ್ದು, ‘ಮತಬ್ಯಾಂಕ್‌ಗಾಗಿ ದೀದಿ, ಹಿಂದೂಗಳನ್ನು ಬಲಿ ಪಡೆದ ಕ್ರೂರ ಪಹಲ್ಗಾಂ ಉಗ್ರದಾಳಿಯನ್ನು ಯೋಜಿತ ಎಂದು ಕರೆಯುತ್ತಿದ್ದಾರೆ. ಅವರು ಹಿಂದೂ ವಿರೋಧಿ’ ಎಂದು ತಿವಿದಿದ್ದಾರೆ.‘ಪಹಲ್ಗಾಂ ದಾಳಿಗೆ ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಭಾರತ ಮತ್ತೆ ಉಗ್ರದಾಳಿಯ ನೆಪ ಹೇಳಿ ನಮ್ಮ ಮೇಲೆ ನಕಲಿ ಕಾರ್ಯಾಚರಣೆ ಕೈಗೊಳ್ಳಬಹುದು. ಹಾಗೇನಾದರೂ ಮಾಡಿದರೆ ನಾವು ಕೋಲ್ಕತಾವನ್ನು ಗುರಿಯಾಗಿಸಿ ಆಕ್ರಮಣ ಮಾಡುತ್ತೇವೆ’ ಎಂದು ಖ್ವಾಜಾ ನಾಲಗೆ ಹರಿಬಿಟ್ಟಿದ್ದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ತಮಿಳು ನಟಿ ಸುಭಾಷಿಣಿ ಆತ್ಮಹತ್ಯೆ
ತ.ನಾಡು: ಬ್ರಾಹ್ಮಣರಿಗೆ 4 ಪ್ರಮುಖ ಪಕ್ಷಗಳ ಟಿಕೆಟ್‌ ಇಲ್ಲ!