ವಿವಾಹಿತೆಗೆ ಪ್ರೇಮಿ ಜತೆ ಹೋಗಲು ಕೋರ್ಟ್‌ ಅನುಮತಿ

KannadaprabhaNewsNetwork |  
Published : Apr 07, 2026, 03:15 AM IST
ಪ್ರೇಮ | Kannada Prabha

ಸಾರಾಂಶ

ನನ್ನ ಗಂಡನಿಗೆ 40 ವರ್ಷ. ನನಗೆ 19 ವರ್ಷ. 21 ವರ್ಷ ವಯಸ್ಸಿನ ಅಂತರದ ಕಾರಣ ನಮ್ಮಿಬ್ಬರ ದಾಂಪತ್ಯ ಸರಿ ಹೊಂದುತ್ತಿಲ್ಲ. ಹಾಗಾಗಿ ಪ್ರಿಯತಮನ ಜೊತೆ ಜೀವನ ಮಾಡುತ್ತೇನೆ ಎಂದ ಯುವತಿಗೆ ಮಧ್ಯಪ್ರದೇಶ ಹೈಕೋರ್ಟ್‌ ಗಂಡನನ್ನು ಬಿಟ್ಟು ಪ್ರೇಮಿಯ ಜೊತೆ ತೆರಳಲು ಅನುವು ಮಾಡಿಕೊಟ್ಟ ಪ್ರಸಂಗ ನಡೆದಿದೆ.

- ನನಗೆ 19, ಹೀಗಾಗಿ 40 ವರ್ಷದ ಗಂಡ ಬೇಡ: ಯುವತಿ ಕೋರಿಕೆ

- ವಯಸ್ಕರಿಗೆ ಯಾರ ಜತೆ ಬದುಕಬೇಕೆಂದು ನಿರ್ಧರಿಸುವ ಹಕ್ಕಿದೆ

- ಮಧ್ಯಪ್ರದೇಶ ಹೈಕೋರ್ಟ್‌ನಿಂದ ಮಹತ್ವದ ತೀರ್ಪುಭೋಪಾಲ್‌: ನನ್ನ ಗಂಡನಿಗೆ 40 ವರ್ಷ. ನನಗೆ 19 ವರ್ಷ. 21 ವರ್ಷ ವಯಸ್ಸಿನ ಅಂತರದ ಕಾರಣ ನಮ್ಮಿಬ್ಬರ ದಾಂಪತ್ಯ ಸರಿ ಹೊಂದುತ್ತಿಲ್ಲ. ಹಾಗಾಗಿ ಪ್ರಿಯತಮನ ಜೊತೆ ಜೀವನ ಮಾಡುತ್ತೇನೆ ಎಂದ ಯುವತಿಗೆ ಮಧ್ಯಪ್ರದೇಶ ಹೈಕೋರ್ಟ್‌ ಗಂಡನನ್ನು ಬಿಟ್ಟು ಪ್ರೇಮಿಯ ಜೊತೆ ತೆರಳಲು ಅನುವು ಮಾಡಿಕೊಟ್ಟ ಪ್ರಸಂಗ ನಡೆದಿದೆ.

ಗ್ವಾಲಿಯರ್‌ ಪೀಠದ ನ್ಯಾ. ಆನಂದ್‌ ಪಾಠಕ್‌ ಹಾಗೂ ನ್ಯಾ. ಪುಷ್ಪೇಂದ್ರ ಯಾದವ್‌ ಅವರ ಪೀಠ ಈ ತೀರ್ಪು ನೀಡಿದೆ. ಏನಿದು ಪ್ರಕರಣ?:

ವರ್ಷದ ಹಿಂದೆ 40 ವರ್ಷದ ಅವಧೇಶ್‌ ಎಂಬಾತ 19ರ ಯುವತಿಯ ಜೊತೆ ವಿವಾಹವಾಗಿದ್ದ. ಇತ್ತೀಚೆಗೆ, ಅನುಜ್‌ ಕುಮಾರ್‌ ಎಂಬಾತ ತನ್ನ ಪತ್ನಿಯನ್ನು ಅಕ್ರಮವಾಗಿ ಸೆರೆಹಿಡಿದಿಟ್ಟುಕೊಂಡಿದ್ದಾನೆ ಎಂದು ಕೋರ್ಟ್‌ಗೆ ಹೇಬಿಯಸ್‌ ಕಾರ್ಪಸ್‌ ಅರ್ಜಿ ಸಲ್ಲಿಸಿದ್ದ. ಕೋರ್ಟ್‌ ಆದೇಶದಂತೆ ಪೊಲೀಸರು ಯುವತಿಯನ್ನು ಹುಡುಕಿತಂದಿದ್ದಾರೆ.ವಿಚಾರಣೆ ವೇಳೆ ಯುವತಿ ತನ್ನ ಪತಿ, ಪಾಲಕರು ಹಾಗೂ ಪ್ರೇಮಿ ಉಪಸ್ಥಿತರಿರುವಾಗಲೇ, ‘ನನ್ನ ಮತ್ತು ಗಂಡನ ನಡುವೆ 21 ವರ್ಷ ಅಂತರವಿದೆ. ನಮ್ಮಿಬ್ಬರ ಸಂಬಂಧ ಸರಿ ಬರುತ್ತಿಲ್ಲ. ಆತನ ಜೊತೆ ನಾನು ಖುಷಿಯಾಗಿಲ್ಲ. ಹಾಗಾಗಿ ಪ್ರಿಯತಮನ ಜೊತೆಗೇ ಬಾಳುತ್ತೇನೆ’ ಎಂದಿದ್ದಾಳೆ. ಯುವತಿಯ ವಾದವನ್ನು ಆಲಿಸಿದ ಪೀಠ, ‘ಅವಳು ಯಾವುದೇ ಕಾನೂನುಬಾಹಿರ ನಿರ್ಬಂಧದಲ್ಲಿಲ್ಲ ಎಂಬುದು ಸ್ಪಷ್ಟವಾಗಿದೆ. ವಯಸ್ಕ ವ್ಯಕ್ತಿಗೆ ಎಲ್ಲಿ ಮತ್ತು ಯಾರೊಂದಿಗೆ ವಾಸಿಸಬೇಕೆಂದು ನಿರ್ಧರಿಸುವ ಹಕ್ಕಿದೆ. ಆಕೆ ಪ್ರಿಯತಮನ ಜೊತೆ ಬದುಕಬಹುದು’ ಎಂದು ತೀರ್ಪು ನೀಡಿದೆ.

ಜೊತೆಗೆ, ಆಕೆ ಸುರಕ್ಷಿತವಾಗಿದ್ದಾಳೋ ಇಲ್ಲವೋ ಎಂಬುದರ ಬಗ್ಗೆ ನಿಗಾ ಇಡಲು 6 ತಿಂಗಳ ಅವಧಿಗೆ ‘ಶೌರ್ಯ ದೀದಿ’ಯರನ್ನು ನೇಮಿಸಿದೆ. ಕಳೆದ ತಿಂಗಳು ಅಲಹಾಬಾದ್‌ ಹೈಕೋರ್ಟ್‌, ವಯಸ್ಕ ವ್ಯಕ್ತಿ ಒಪ್ಪಿತ ವಿವಾಹೇತರ ಸಂಬಂಧ ಇಟ್ಟುಕೊಳ್ಳುವುದು ತಪ್ಪಲ್ಲ ಎಂದು ತೀರ್ಪು ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ತಮಿಳು ನಟಿ ಸುಭಾಷಿಣಿ ಆತ್ಮಹತ್ಯೆ
ತ.ನಾಡು: ಬ್ರಾಹ್ಮಣರಿಗೆ 4 ಪ್ರಮುಖ ಪಕ್ಷಗಳ ಟಿಕೆಟ್‌ ಇಲ್ಲ!