ಈ ಬಗೆಗಿನ ಮಾತುಕತೆ ಧನಾತ್ಮಕ ದಿಕ್ಕಿನತ್ತ
===ತಾಯಿ ಎಂದು ಪರಿಗಣಿಸಲ್ಪಟ್ಟ ಪಕ್ಷ ಬಿಜೆಪಿ ಮಾತ್ರಕಾಂಗ್ರೆಸ್‌ನಿಂದ ಬಿಜೆಪಿ ಮೇಲೆ ದಬ್ಬಾಳಿಕೆ: ಕಿಡಿ
ನವದೆಹಲಿ: ಬಿಜೆಪಿ ಸರ್ಕಾರವು ಜಾರಿಗೆ ತರಲು ಉದ್ದೇಶಿಸಿರುವ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಮತ್ತು ಒಂದು ರಾಷ್ಟ್ರ ಒಂದು ಚುನಾವಣೆಯ ಬಗೆಗಿನ ಮಾತುಕತೆಗಳು ಜಾರಿಯಲ್ಲಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಸ್ಥಾಪನೆಯಾದಾಗಿಂದ ಪಕ್ಷ ನಡೆದುಬಂದ ಹಾದಿ ಹಾಗೂ ಎದುರಿಸಿದ ಸವಾಲುಗಳ ಬಗ್ಗೆಯೂ ಮೋದಿ ಮಾತಾಡಿದ್ದಾರೆ. ‘ಬಿಜೆಪಿಯು ತುರ್ತುಸ್ಥಿತಿಯಂತಹ ಹಲವು ಸಂದರ್ಭಗಳಲ್ಲಿ ಕಾಂಗ್ರೆಸ್‌ನ ದಬ್ಬಾಳಿಕೆಗೆ ತುತ್ತಾಗಿತ್ತು. ಹಿಂಸೆಯು ರಾಜಕೀಯ ಸಂಸ್ಕೃತಿಯೇ ಆಗಿಬಿಟ್ಟಿರುವ ಪಶ್ಚಿಮ ಬಂಗಾಳ, ಕೇರಳದಂತಹ ರಾಜ್ಯಗಳಲ್ಲಿ ನಮ್ಮ ಹಲವು ಕಾರ್ಯಕರ್ತರು ಪ್ರಾಣತ್ಯಾಗ ಮಾಡಿದ್ದಾರೆ. ಬಿಜೆಪಿ ಎಲ್ಲಾ ಸವಾಲುಗಳನ್ನು ಎದುರಿಸಿ ಉತ್ತಮ ಫಲಿತಾಂಶ ಪಡೆಯುವುದನ್ನು ಮುಂದುವರೆಸುತ್ತದೆ’ ಎಂದರು. ಇದಕ್ಕೆ, ಬ್ರಿಟಿಷ್ ಕಾಲದ ಕೆಲ ಕಾನೂನುಗಳ ರದ್ದತಿ, ಹೊಸ ಸಂಸತ್ ಭವನ ಸ್ಥಾಪನೆ, ಸಾಮಾನ್ಯ ವರ್ಗದ ಬಡವರಿಗೆ ಶೇ.10ರಷ್ಟು ಮೀಸಲಾತಿ, ತ್ರಿವಳಿ ತಲಾಕ್ ರದ್ದುಗೊಳಿಸುವ ಕಾನೂನು, ಪೌರತ್ವ ತಿದ್ದುಪಡಿ ಕಾಯ್ದೆ, ಅಯೋಧ್ಯಯಲ್ಲಿ ರಾಮಮಂದಿರ ನಿರ್ಮಾಣದಂತಹ ಕೆಲಸಗಳನ್ನು ಉದಾಹರಣೆಯಾಗಿ ನೀಡಿದ್ದಾರೆ.