ಚೀನಾದಿಂದ ಅಮೆರಿಕ ಸೇನಾ ಮಾಹಿತಿ ಇರಾನ್‌ಗೆ ಮಾರಾಟ?

KannadaprabhaNewsNetwork |  
Published : Apr 07, 2026, 02:00 AM IST
ದಾಳಿ | Kannada Prabha

ಸಾರಾಂಶ

ಸದ್ಯ ನಡೆಯುತ್ತಿರುವ ಮಧ್ಯಪ್ರಾಚ್ಯ ಕದನದಲ್ಲಿ ತಾನು ಯಾರ ಪರವೂ ಇಲ್ಲ ಎಂದು ತೋರಿಸಿಕೊಳ್ಳುವ ಚೀನಾ, ರಹಸ್ಯವಾಗಿ ಇರಾನ್‌ಗೆ ಅಮೆರಿಕ ಸೇನೆಯನ್ನು ಬಗ್ಗುಬಡಿಯಲು ಸಹಾಯ ಮಾಡುತ್ತಿದೆಯೇ ಎಂಬ ಅನುಮಾನ ಮೂಡತೊಡಗಿದೆ. ಇತ್ತೀಚೆಗೆ ಅಮೆರಿಕದ ಪ್ರತಿಷ್ಠಿತ ಪತ್ರಿಕೆ ವಾಷಿಂಗ್ಟನ್‌ ಪೋಸ್ಟ್‌ನಲ್ಲಿ ಪ್ರಕಟವಾಗಿದ್ದ ತನಿಖಾ ವರದಿಯಲ್ಲಿ, ‘ಚೀನಾದ ಕೆಲ ಎಐ ಕಂಪನಿಗಳು ಮಧ್ಯಪ್ರಾಚ್ಯದಲ್ಲಿ ಅಮೆರಿಕದ ಸೇನಾ ಚಲನವಲನದ ಬಗ್ಗೆ ಸ್ಯಾಟಲೈಟ್‌ ಇಮೇಜಿಂಗ್‌ ಆಧರಿತ ಮಾಹಿತಿಯನ್ನು ಮಾರಾಟ ಮಾಡುತ್ತಿವೆ’ ಎಂದು ವರದಿಯಾಗಿದೆ.

ಸ್ಯಾಟಲೈಟ್‌ ಚಿತ್ರ ಆಧರಿಸಿ ಎಐ ಕಂಪನಿಗಳ ಕೆಲಸ

ವಿಮಾನ, ಹಡಗು ಟ್ರ್ಯಾಕಿಂಗ್‌ ಡೇಟಾ ಕೂಡ ಬಳಕೆ

ಅಮೆರಿಕ ಶಸ್ತ್ರಾಸ್ತ್ರಗಳ ಜಾಗ ಪತ್ತೆ: ಮಿಜಾರ್‌ವಿಷನ್‌

ವೆನಿಜುವೆಲಾ ಕಾರ್ಯಾಚರಣೆ ಮುನ್ನವೂ ತಿಳಿದಿತ್ತುಮಧ್ಯಪ್ರಾಚ್ಯ ಯುದ್ಧ ಎಐ ತರಬೇತಿಗೆ ಉಪಯೋಗ

ವಾಷಿಂಗ್ಟನ್‌: ಸದ್ಯ ನಡೆಯುತ್ತಿರುವ ಮಧ್ಯಪ್ರಾಚ್ಯ ಕದನದಲ್ಲಿ ತಾನು ಯಾರ ಪರವೂ ಇಲ್ಲ ಎಂದು ತೋರಿಸಿಕೊಳ್ಳುವ ಚೀನಾ, ರಹಸ್ಯವಾಗಿ ಇರಾನ್‌ಗೆ ಅಮೆರಿಕ ಸೇನೆಯನ್ನು ಬಗ್ಗುಬಡಿಯಲು ಸಹಾಯ ಮಾಡುತ್ತಿದೆಯೇ ಎಂಬ ಅನುಮಾನ ಮೂಡತೊಡಗಿದೆ. ಇತ್ತೀಚೆಗೆ ಅಮೆರಿಕದ ಪ್ರತಿಷ್ಠಿತ ಪತ್ರಿಕೆ ವಾಷಿಂಗ್ಟನ್‌ ಪೋಸ್ಟ್‌ನಲ್ಲಿ ಪ್ರಕಟವಾಗಿದ್ದ ತನಿಖಾ ವರದಿಯಲ್ಲಿ, ‘ಚೀನಾದ ಕೆಲ ಎಐ ಕಂಪನಿಗಳು ಮಧ್ಯಪ್ರಾಚ್ಯದಲ್ಲಿ ಅಮೆರಿಕದ ಸೇನಾ ಚಲನವಲನದ ಬಗ್ಗೆ ಸ್ಯಾಟಲೈಟ್‌ ಇಮೇಜಿಂಗ್‌ ಆಧರಿತ ಮಾಹಿತಿಯನ್ನು ಮಾರಾಟ ಮಾಡುತ್ತಿವೆ’ ಎಂದು ವರದಿಯಾಗಿದೆ.ಇದಕ್ಕೆ ಪುಷ್ಟಿ ಕೊಡುವಂತೆ, ‘ಮಿಜಾರ್‌ವಿಷನ್‌’ ಎಂಬೊಂದು ಕಂಪನಿ, ‘ಮಧ್ಯಪ್ರಾಚ್ಯದಲ್ಲಿ ನಿಯೋಜನೆಗೊಂಡಿರುವ ಶಸ್ತ್ರಾಸ್ತ್ರಗಳ ಜಾಗವನ್ನು ನಾವು ಪತ್ತೆ ಮಾಡಿದೆವು. ಅಮೆರಿಕದ ಯುದ್ಧವಿಮಾನ ವಾಹಕ ನೌಕೆಗಳ ಮರುಪೂರಣದ ಮಾದರಿಯನ್ನೂ ನಾವು ಗುರುತಿಸಿದ್ದೇವೆ. ವೆನಿಜುವೆಲಾ ಅಧ್ಯಕ್ಷ ಮಡುರೋ ಅಪಹರಣಕ್ಕೂ ತಿಂಗಳುಗಳ ಮುಂಚೆಯೇ ನಾವು ಅಮೆರಿಕದ ಕ್ಷಿಪಣಿಗಳ ಸ್ಥಾನ ಬದಲಾವಣೆಯನ್ನು ಗಮನಿಸಿದ್ದೆವು’ ಎಂದು ಹೇಳಿಕೊಂಡಿದೆ. ಪತ್ತೆ ಹೇಗೆ?:

ಈ ಕಂಪನಿಗಳು ಯಾವುದೇ ರಹಸ್ಯ ವೆಬ್‌ಸೈಟ್‌ಗಳನ್ನು ಹ್ಯಾಕ್‌ ಮಾಡಿ ಈ ಮಾಹಿತಿಯನ್ನು ಪಡೆಯುತ್ತಿಲ್ಲ. ಬದಲಿಗೆ, ಮಾರಾಟಕ್ಕಿರುವ ಸ್ಯಾಟಲೈಟ್‌ ಚಿತ್ರಗಳು, ವಿಮಾನ ಟ್ರ್ಯಾಕಿಂಗ್‌ ಡೇಟಾ, ಹಡಗುಗಳನ್ನು ಗುರುತಿಸುವ ಸೌಲಭ್ಯವನ್ನು ಬಳಸಿಕೊಂಡು, ಅವನ್ನೆಲ್ಲಾ ಎಐ ಟೂಲ್‌ಗೆ ಅಪ್‌ಲೋಡ್‌ ಮಾಡಲಾಗುತ್ತದೆ. ಅದು ಅವುಗಳ ಚಲನೆಯನ್ನು ಪರಿಶೀಲಿಸಿ, ಅಮೆರಿಕ ಸೇನೆಯ ಮುಂದಿನ ನಡೆಯನ್ನು ಅಂದಾಜಿಸುತ್ತದೆ.

ಇದೇ ಮಾಹಿತಿಯನ್ನು ಆ ಕಂಪನಿಗಳು ಇರಾನ್‌ಗೆ ಮಾರಿವೆ ಎನ್ನುವುದು ಆರೋಪ. ಒಟ್ಟಿನಲ್ಲಿ ಅವುಗಳು ಮಧ್ಯಪ್ರಾಚ್ಯ ಸಂಘರ್ಷವನ್ನು ತಮ್ಮ ಎಐ ಟೂಲ್‌ನ ತರಬೇತಿ ಮತ್ತು ಕಾರ್ಯಕ್ಷಮತೆಯ ಪರಿಶೀಲನೆಗೆ ಬಳಸುತ್ತಿರುವುದರಲ್ಲಿ ಸಂದೇಹವಿಲ್ಲ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಯುಸಿಸಿ, ಏಕ ಚುನಾವಣೆ ಚರ್ಚೆ ಜಾರಿಯಲ್ಲಿ: ಮೋದಿ
ಕರ್ನಾಟಕ ಸರ್ಕಾರ ಕೊಟ್ಟ ಭರವಸೆ ಈಡೇರಿಸುವಲ್ಲಿ ವಿಫಲ: ಮೋದಿ ವಾಗ್ದಾಳಿ